ನ್ಯಾಯಾಲಯಕ್ಕೆ ಸ್ಥಳ ಪರೀಶಿಲನೆ

0
8

ಗುಳೇದಗುಡ್ಡ : ತಾಲೂಕು ಕೇಂದ್ರವಾಗಿರುವ ಗುಳೇದಗುಡ್ಡ ನಗರದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪಿಸುವ ಸಲುವಾಗಿ ನ್ಯಾಯಾಲಯದ ಕಟ್ಟಡಕ್ಕಾಗಿ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶೆ ಪಿ.ಎ.ಮುನ್ನೊÃಳ್ಳಿ ಅವರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ನಗರದ ಧುತ್ತರಗಿ ಪೆಟ್ರೊÃಲ್ ಬಂಕ್ ಹಿಂದುಗಡೆ, ಬಾದಾಮಿ ನಾಕಾ ಹತ್ತಿರದ ಹಳೆ ಪೊಲೀಸ್ ವಸತಿ ಗೃಹ ಹಾಗೂ ಪರ್ವತಿ ಹತ್ತಿರದ ಸರಕಾರಿ ಭೂಮಿಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಜಾಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕಿಶೋರಕುಮಾರ್ ಎಂ., ರಾಜ್ಯ ವಕೀಲರ ಪರಿಷತ್‌ನ ಎಸ್.ಎಸ್.ಮಿಟ್ಟಲಕೋಡ್, ವಕೀಲರ ಸಂಘದ ಅಧ್ಯಕ್ಷ ಎ.ಬಿ.ಉದ್ನೂರ, ನ್ಯಾಯವಾದಿಗಳಾದ ಎಸ್.ಆರ್. ಬರಹಾಣಾಪೂರ, ಚಂದ್ರಶೇಖರ ಬೆಕಿನಾಳ, ಐ.ಎಸ್. ಮೇಟಿ, ಎಸ್.ಜಿ. ರಾಂಪೂರ, ಕೆ.ಆರ್. ರಾಯಚೂರ, ಎಸ್.ಎಸ್. ಯಂಡಿಗೇರಿ, ಪಿ.ಆರ್. ಬಡಿಗೇರ, ಶಕೀಲ ಕಂಟ್ರಾಕ್ಟರ್, ಟಿ.ಎಸ್. ಬೆನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು ಸೇರಿದಂತೆ ಇತರರು ಇದ್ದರು.

loading...