ನ್ಯಾ.ಸದಾಶಿವ ವರದಿ ಬಹಿರಂಗಕ್ಕೆ ಮನವಿ

0
48

ಬೆಳಗಾವಿ: 29, ನ್ಯಾಯಮೂರ್ತಿ ಎ.ಜೆ

ಸದಾಶಿವ ಆಯೋಗದ ವರದಿ ಬಹಿರಂಗಗೊಳಿಸಿ

ಚರ್ಚೆಗೊಳಪಡಿಸಲು ಒತ್ತಾಯಿಸಿ ಮಾದಿಗ ಮಿಸಲಾತಿ

ಹೋರಾಟ ಸಮಿತಿ ಬುಧುವಾರ ಜಿಲ್ಲಾಧಿಕಾರಿಗಳಿಗೆ

ಮನವಿ ಸಲ್ಲಿಸಿದರು.

ಯಾವುದೇ ಆಧಾರವಿಲ್ಲದೇ ಭಂಚಿಷಂಓಚಂರಂ

ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕ ಸೇವಾ

ಆಯೋಗದ ಮಾಜಿ ಅಧ್ಯಕ್ಷ ಭೀಮಪ್ಪ ಗೋನಾಳ

ಅವರ ಬೆಂಗೂರಿನ ಮನೆಯ ಮುಂದೆ ಧರಣಿ ನಡೆಸಿ

ಭಯಭೀತಿಯನ್ನುಂಟು ಮಾಡಿದ ಲೋಕಸತ್ವ ಪಕ್ಷದ

ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ

ಆರೋಪಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯಗಳ

ನಿಯಮ ಉಲ್ಲಂಘನೆ ಮಾಡಿ ಡಾ.ಜೆ.ಬಿ.ನಂದನ್,

ಕುಲಪತಿ ಮತ್ತು ಡಾ.ದುರ್ಗಾದಾಸ ಕುಲಪತಿ ಇವರ

ಹುದ್ದೆಗಳ ಆದೇಶವನ್ನು ರದ್ದು ಪಡಿಸಿ ಬೇರೆಯವರನ್ನು

ನೇಮಕ ಮಾಡಿದ ಉಪಕುಲಪತಿಗಳ ವಿರುದ್ಧ

ಕ್ರಮ ಕೈಗೊಳ್ಳಬೇಕು ಮತ್ತು ಶಹಪೂರ ತಾಲೂಕಿನ

ಕನ್ಯಾಕೊಳುರಿನ ದಲಿತ ಮುಖಂಡ ದೇವೇಂದ್ರಪ್ಪ

ದಳಪತಿ ಇವರನ್ನು ಕೊಲೆ ಮಾಡಿದ ಆರೋಪಿಗಳನ್ನು

ಕಠಿಣ ಶಿಕ್ಷ ನೀಡಬೇಕೆಂದು ಆಗ್ರಹಿಸಿದ್ದರು. ಮುರಗೇಶ

ಕಂಬನ್ನವರ, ಸುನೀಲ ಹಿರಗನ್ನವರ, ರಮೇಶ

ಮುಶೆನ್ನವರ, ವಿರುಪಾಕ್ಷಿ ಶಿರಗಾಂವಿ, ವಿಠ್ಠಲ ಹರಿಜನ,

ಬಾಬು ಪೂಜಾರ, ಮಾರುತಿ ರಂಗಾಪೂರಿ, ಕಂಇಷಂಗ

ಮಲ್ಲೂರ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here