ಪಕ್ಷ ವಿರೋಧಿಗಳಿಗೆ ತಕ್ಕಶಾಸ್ತಿ, ಕೆಜೆಪಿಯಿಂದ ಪಕ್ಷಕ್ಕೆ ಹಾನಿಯಿಲ್ಲ: ಸಚಿವ ಬೆಳ್ಳುಬ್ಬಿ

0
13

ಬಸವನಬಾಗೇವಾಡಿ:  ಸಾವಿರಾರು ಕಾರ್ಯಕರ್ತರ ತ್ಯಾಗ ಬಲಿದಾನದ ಮೂಲಕ ಸರ್ವಜನಾಂಗದ ಏಳಿಗೆಯ ಚಿಂತನೆಗಳಿಂದ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿದದ್ದು ಹೋರತು ಯಾರೇ ಒಬ್ಬರಿಂದಲ್ಲ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೆಜೆಪಿ ಪಕ್ಷವನ್ನು ಸ್ಥಾಪಿಸುವದರಿಂದ ಬಿಜೆಪಿಗೆ ಅಂಟಿದ ಕಳಂಕ ತೊಳದಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಹಜ್ ಮತ್ತು ವಕ್ಫ ಮತ್ತು ವಿಜಾಪೂರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ತಾಲೂಕಿನ ಕೋಲ್ಹಾರ ಗ್ರಾಮದಲ್ಲಿ ಶ್ರೀ ಕನಕದಾಸ ವೃತ್ತಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತೀಯ ಜನತಾ ಪಕ್ಷವನ್ನು ಜನಸಂಘದ ಕಾಲದಿಂದ ಸಹಸ್ರಾರು ಕಾರ್ಯಕರ್ತರ ಪರಿಶ್ರಮ ಹಾಗೂ ತ್ಯಾಗದ ಮೂಲಕ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ ಹೊರತು ಯಾರೊಬ್ಬರ ಶ್ರಮದಿಂದ ಪಕ್ಷ ಬೆಳದಿಲ್ಲ ಎಂದು ಹೇಳಿದರು.

ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ, ಸಂಸದ ಬಸವರಾಜ ಅಮಾನತ್ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸುವ ಸಚಿವರ, ಶಾಸಕರ ಮೇಲು ಕ್ರಮಕೈಗೊಳ್ಳಲಾಗುವದು ಈ ಕುರಿತಾಗಿ ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ ಎಂದರು, ಬಿ.ಜೆ.ಪುಟ್ಟಸ್ವಾಮಿಯವರು ಬಿಜೆಪಿ ಏಳಿಗೆಗೆ ಎಷ್ಟು ವರ್ಷದಿಂದ ಶ್ರಮಿಸಿದ್ದಾರೆ, ಪಕ್ಷ ನಿಷ್ಠೆ ಎಷ್ಟಿದೆ ಎಂಬುವದು ಜನತೆಗೆ ಗೊತ್ತಿರುವ ಸಂಗತಿಯಾಗಿದೆ, ಭಾರತೀಯ ಜನತಾ ಪಕ್ಷ ಇಂದು ಸರ್ವಜನಾಂಗದ ಪಕ್ಷವಾಗಿ ಪ್ರತಿಯೊಂದು ಸಮುದಾಯದ ಪ್ರೀತಿ, ವಿಶ್ವಾಸನೀಯ ಪಕ್ಷವಾಗಿದ್ದು ಸರ್ಕಾರದಲ್ಲಿ ಎಲ್ಲ ಸಮುದಾಯದವರಿಗೆ ಅವಕಾಶ ಹಾಗೂ ಯೋಜನೆಗಳನ್ನು ರೂಪಿಸಿದೆ ದೂರುತ್ತಿರುವದು ಅವರ ವ್ಯಕ್ತಿತ್ವವನ್ನು ತೋರುತ್ತದೆ, ಅಮಾನತ್ ಇದು ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಎಚ್ಚರಿಕೆ ಗಂಟೆಯಾಗಿದೆ ಎಂದು ಹೇಳಿದರು.

ಪಕ್ಷ ಯಡಿಯೂರಪ್ಪನವರಿಗೆ ವಿರೋಧ ಪಕ್ಷದ ನಾಯಕರಾಗಿ, ರಾಜ್ಯಾಧ್ಯಕ್ಷರನ್ನಾಗಿ, ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ಮಾಡಿದೆ ಅವರು ಈ ನಿರ್ಧಾರ ತೆಗೆದುಕೊಳ್ಳಬಾರದಾಗಿತ್ತು, ಯಡಿಯೂರಪ್ಪನವರು ಯಾವುದೇ ಲಿಂಗಾಯತ ಸಮುದಾಯದ ವ್ಯಕ್ತಿಗಳನ್ನು ಬೆಳಸಲಿಲ್ಲ,  ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ನೆಲಕಚ್ಚಿವೆ, ಜೆಡಿಎಸ್ ಜನತಾ ದಳದ ಹಿನ್ನೇಲೆ ಹೊಂದಿರುವ ಪಕ್ಷ ಕೇಲವರ ಪ್ರಭಾವದಿಂದ ಪ್ರಾದೇಶಿಕ ಪಕ್ಷದಂತಿದೆ, ಕೆಜೆಪಿ ನಂಬಿ ಹೋಗುವ ಕಾರ್ಯಕರ್ತರು ತಾವೇ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಬಣ್ಣಿಸಿದ ಅವರು ಸಮುದ್ರದಂತಿರುವ ಬಿಜೆಪಿಯಲ್ಲಿ ಯಾರೊಬ್ಬರು ದೂರಾಗುವದರಿಂದ ಪಕ್ಷಕ್ಕೆ ಯಾವುದೇ ಹಾನಿಯಿಲ್ಲ ಎಂದರು.

ಮುಬಂರುವ ಚುನಾವಣೆಯಲ್ಲಿ ಕಾಂಗ್ರೇಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ವೈಫಲ್ಯತೆಗಳನ್ನು ಹಾಗೂ ಕಾಮನವೆಲ್ತ್, 2ಜಿ ಸ್ಪೆಕ್ಟ್ತ್ರಂ ಸೇರಿದಂತೆ ಹಗರಣಗಳನ್ನು ತಿಳಿಸಿಕೊಟ್ಟು  ರಾಜ್ಯದಲ್ಲಿ ನಾಲ್ಕುವರೆ ವರ್ಷ ಅವಧಿಯಲ್ಲಿ ರಾಜ್ಯ ಸರ್ಕಾರ ಸಾಧನೆಗಳನ್ನು ಜನಪರ ಯೋಜನೆಗಳನ್ನು ಮನವರಿಕೆ ಮಾಡಿಕೊಟ್ಟು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುದು, ಮತದಾರ ಭಾಜಪ ಕೈಬಿಡಲಾರ ಮತೇ ಪೂರ್ಣಬಹುಮತದೊಂದಿಗೆ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ತ್ಯಾಗದಿಂದ ಈಶ್ವರಪ್ಪಗೆ ಎರಡು ಸ್ಥಾನ:   ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷದ ಸಿದ್ದಾಂತ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರು ಖುರ್ಚಿಗಾಗಿ ಅಂಟಿಕೊಂಡು ಕೂಡುವ ವ್ಯಕ್ತಿತ್ವದವರಲ್ಲ, ಈ ಹಿಂದೆ ಭಾರೀ ನೀರಾವರಿ ಸಚಿವರಾಗಿದ್ದಾಗ ಹಿರಿಯರ ಇಚ್ಚೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪಕ್ಷದ ಜವಾಬ್ದಾರಿ ತೆಗೆದುಕೊಂಡರು ತ್ಯಾಗ ಮೂರ್ತಿಯಾದ ಈಶ್ವರಪ್ಪ ಅವರಿಗೆ ಪಕ್ಷದ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಾಗೂ ಉಪಮುಖ್ಯಮಂತ್ರಿಗಳಾಗಿ ಮುಂದೆವರೆದಿದ್ದಾರೆ. ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.

 

loading...

LEAVE A REPLY

Please enter your comment!
Please enter your name here