ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಬಂಡಿ

0
22

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದೇನೆ. ಆದ್ದರಿಂದ ನೀರಿನ ಭವಣೆ ನಿವಾರಣೆ ಹಾಗೂ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಜರುಗಿದ ನೂತನ ಸಭಾಭವನ ಉದ್ಘಾಟನೆ ಹಾಗೂ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಹಿಂದೆ ನಾನು ಸಚಿವನಾಗಿದ್ದಾಗ 2013 ರಲ್ಲಿ ಜಿಗಳೂರ ಗ್ರಾಮದ ಬಳಿ 310 ಎಕರೆ ವಿಸ್ತಿರ್ಣದಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯ್ಲಲಿ ಮಲಪ್ರಭಾ ಬಲದಂಡೆ ಕಾಲುವೆ ಯೋಜನೆಯಡಿ ಗಜೇಂದ್ರಗಡ, ನರೇಗಲ್‌, ರೋಣ ಪಟ್ಟಣ ಸೇರಿದಂತೆ 7 ಹಳ್ಳಿಗಳಿಗೆ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಿದ್ದೇ. ಮೂರು ವರ್ಷಗಳ ಹಿಂದೆಯೇ ನಿಮಗೆ ನೀರು ಬರಬೇಕಿತ್ತು. ಈ ಹಿಂದಿನ ಶಾಸಕರ ನಿರ್ಲಕ್ಷ್ಯತನದಿಂದ ನೀರು ಬಂದಿಲ್ಲ. ಇನ್ನೂ 8 ತಿಂಗಳಲ್ಲೇ ನಿಮ್ಮ ಮನೆ ಬಾಗಿಲಿಗೆ ಮಲಪ್ರಭಾ ನೀರು ಬರಲಿದೆ ಎಂದರು.

ಪುರಸಭೆ ಸದಸ್ಯ ಚಂದ್ರಶೇಖರ ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ, ಉಪಾಧ್ಯಕ್ಷ ಷಣ್ಮುಖಪ್ಪ ಚಿಲಝರಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಚವಡಿ, ಮುಖ್ಯಾಧಿಕಾರಿ ಹನಮಂತಪ್ಪ ನಾಯಕ, ತಿಮ್ಮಣ್ಣ ವನ್ನಾಲ, ಬಿ.ಎಂ ಸಜ್ಜನರ, ಸದಸ್ಯರಾದ ಸುಮಿತ್ರಾ ತೊಂಡಿಹಾಳ, ವಿಜಯಲಕ್ಷ್ಮಿ ಚೆಟ್ಟೇರ, ಕವಿತಾ ಜಾಲಿಹಾಳ, ಅಕ್ಕಮ್ಮ ಜಾನಾಯಿ, ಶರಣಪ್ಪ ರೇವಡಿ, ವಿಜಯಕುಮಾರ ರಾಯಬಾಗಿ, ರವಿ ಕಲಾಲ, ಮಂಜುನಾಥ ಬಡಿಗೇರ, ಅಶೋಕ ವನ್ನಾಲ ಸೇರಿದಂತೆ ಇತರರು ಇದ್ದರು.

loading...