ಪಡಿತರ ಚೀಟಿದಾರರ ಗಮನಕ್ಕೆ

0
27

ಬೆಳಗಾವಿ 13: ಬೆಳಗಾವಿ ನಗರ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಕೂಪನ್‍ಗಳ ಆಧಾರದ ಮೇಲಿಂದ ಸೀಮೆಎಣ್ಣೆ ವಿತರಣೆಯನ್ನು ಮಾಡಿ ಯೋಜನೆ ಫಲಪ್ರದವಾದ ಹಿನ್ನೆಲೆಯಲ್ಲಿ ಜುಲೈ-2016ನೇ ತಿಂಗಳಿನಿಂದ ಸದರಿ ಯೋಜನೆಯನ್ನು ಬೆಳಗಾವಿ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಕೇಂದ್ರಸ್ಥಾನ ಖಾನಾಪೂರ, ಹುಕ್ಕೇರಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ, ಚಿಕ್ಕೊಡಿ, ರಾಯಬಾಗ ಹಾಗೂ ಅಥಣಿ ನಗರ ಪ್ರದೇಶಗಳಲ್ಲಿ ಆಯುಕ್ತರ ನಿರ್ದೇಶನದಂತೆ ವಿಸ್ತರಿಸಲಾಗುತ್ತಿದೆ.
ನಗರ ಪ್ರದೇಶ ಅನಿಲ ಸಂಪರ್ಕವನ್ನು ಹೊಂದದೇ ಇರುವ ಪಡಿತರ ಚೀಟಿದಾರರು ಮಾತ್ರ ಸಂಬಂಧಿಸಿದ (ಪ್ರಾಂಚೈಸಿ) ಸೇವಾ ಕೇಂದ್ರಗಳಿಗೆ ಹೋಗಿ ಸೀಮೆಎಣ್ಣೆ ಕೂಪನಗಳನ್ನು ಪಡೆದುಕೊಳ್ಳಲು ತಿಳಿಸಿದೆ ಹಾಗೂ ಬೆಳಗಾವಿ ನಗರದ ಪಡಿತರ ಚೀಟಿದಾರರು ಬೆಳಗಾವಿ-1 ಸೇವಾ ಕೇಂದ್ರಗಳು ಹಾಗೂ ಸಂಬಂಧಿಸಿದ (ಪ್ರಾಂಚೈಸಿ) ಸೇವಾ ಕೇಂದ್ರಗಳಲ್ಲಿ ಸೀಮೆಎಣ್ಣೆ ಕೂಪನಗಳನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಸೀಮೆಎಣ್ಣೆ ವಿತರಕರಿಗೆ ನೀಡಿ, ಸೀಮೆಎಣ್ಣೆಯನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

loading...

LEAVE A REPLY

Please enter your comment!
Please enter your name here