ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆ ಬಹು ಮುಖ್ಯ : ಮೌನೇಶ್

0
4

 

ಕನ್ನಡಮ್ಮ ಸುದ್ದಿ-ಕೊಪ್ಪಳ: ಪತ್ರಿಕಾ ಧರ್ಮ ಎನ್ನುವುದು ಜಾತಿರಹಿತವಾದುದ್ದು, ಒಂದು ಕಾಲದಲ್ಲಿ ಅದು ವೃತ್ತಿಯಾಗಿತ್ತು ಇಂದು ಪತ್ರಿಕಾ ಸೇವೆಯೂ ಉದ್ಯಮಿಗಳ ಕೈಯಲ್ಲಿ ಹೋಗಿದೆ. ವೃತ್ತಿ ಧರ್ಮ ಕಳೆದುಕೊಂಡಿದೆ ಎಂದು ಖಾಸಗಿ ಟಿವಿ ವಾಹಿನಿಯ ವರದಿಗಾರ ಮೌನೇಶ್ ಬಡಿಗೇರಿ ಅಸಮಾಧಾನ ವ್ಯಕ್ತಪಡಿಸಿದರು.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಿ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರಂಭದಲ್ಲಿ ಪತ್ರಿಕೋದ್ಯಮ ಎನ್ನುವುದು ವೃತ್ತಿಯಾಗಿತ್ತು ಆದರೆ, ಪ್ರಸಕ್ತ ದಿನಗಳಲ್ಲಿ ಉದ್ಯಮಿಗಳ ಕಪಿಮುಷ್ಠಿಯಲ್ಲಿ ಮಾಧ್ಯಮ ಸಿಲುಕಿದೆ. ಮಾಧ್ಯಮ ಮಾಲೀಕರ ಮಾತಿನಂತೆ ಆದೇಶದಂತೆ ಕೆಲಸ ಮಾಡುವ ಪರಸ್ಥಿತಿ ಹಾಗೂ ಒತ್ತಡ ಪತ್ರಕರ್ತರದ್ದಾಗಿದೆ. ಪತ್ರಕರ್ತರು ಇಂದು ಸುದ್ದಿ ಕಳುಹಿಸುವ ಪೆÇÃಸ್ಟ್ ಮಾಸ್ಟರ್‌ಗಳಾಗಿದ್ದೆÃವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಾಜಶಾಸ್ತçದ ಪ್ರಾಧ್ಯಾಪಕ ನಾಗೇಂದ್ರಪ್ಪ ಮಾತನಾಡಿ, ಸಾಮಾನ್ಯ ಮನುಷ್ಯನ ಸ್ಥಿತಿಗಳನ್ನು ತೋರಿಸುವ ತಾಳ್ಮೆ ಮಾಧ್ಯಮಗಳಲ್ಲಿ ಉಳಿದಿಲ್ಲ. ಮಾಧ್ಯಮಗಳು ಇಂದು ತಮ್ಮ ವೃತ್ತಿಮೌಲ್ಯಗಳನ್ನು ಮರೆತಿವೆ. ಆದರೆ ಪಿ. ಸಾಯಿನಾಥ ಅಂಥ ವ್ಯಕ್ತಿಗಳು ಸಾಮಾನ್ಯ ಗ್ರಾಮೀಣ ಕುರಿಗಾಯಿಗ ವ್ಯಕ್ತಿಗೂ ಹತ್ತಿರವಾಗಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂತಹವರ ಬಗ್ಗೆ ಓದಿಕೊಳಬೇಕು ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಕಾಲೇಜಿ ಪ್ರಾಂಶುಪಾಲರಾದ ಗವಿಸಿದ್ಧಪ್ಪ ಮುತ್ತಾಳ ಮಾತನಾಡಿ, ಪತ್ರಿಕೋದ್ಯಮ ಕ್ಷೆÃತ್ರ ಒಂದು ಜಾವಾಬ್ದಾರಿಯುತ ಕ್ಷೆÃತ್ರ. ಸಾಖಷ್ಟು ಒತ್ತಡಗಳನ್ನು ಸಹಿಸಿಕೊಂಡು ಪತ್ರಕರ್ತರು ಕೆಲಸಮಾಡಬೇಕಾಗುತ್ತದೆ. ಇಂದು ಉದ್ಯಮವಾಗಿರುವುದರಿಂದ, ಬಂಡವಾಳಶಾಹಿಗಳ ಕೈಯಲ್ಲಿರುವುದರಿಂದ ತನ್ನ ಮೌಲ್ಯಗಳನ್ನು ಕಳೆದುಕೊಂಡಿದೆ. ಈ ವೃತ್ತಿಗೆ ಬರುವವರು ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಬೇಕಾಗಿದೆ ಎಂದರು.

ಇಮಾಮ್‌ಸಾಬ್, ವಿಜಯ ಕುಲಕರ್ಣಿ, ಸಂಗಮೇಶ್, ವಿಜಯಕುಮಾರ್ ವೊಟ್ಟಿನ್, ಶಂಕರ್ ಬಡಿಗೇರ್, ವೆಂಕಟೇಶ್ ಇದ್ದರು. ಕು. ಲಲಿತ ಸಂಗಡಿಗರು ಪ್ರಾರ್ಥಿಸಿದರು, ಕು. ಅಶ್ವಿನಿ ಸ್ವಾಗತಿಸಿದರು. ಕು.ಲಲಿತ ವಂದಿಸಿದರು. ವಿದ್ಯಾರ್ಥಿ ಸಂತೋಷ ನಿರೂಪಿಸಿದರು.

loading...