ಪದವಿ ಕಾಲೇಜಿನ ಆರು ಸಿಬ್ಬಂದಿಗೆ ಕೊರೋನಾ ಸೋಂಕು

0
5
Coronavirus logo concept. Novel Coronavirus icon. COVID-19 disease image with red text. SARS pandemic red symbol. Isolated graphic design template. Creative nCOV outbreak sign with typography
  ಬೆಳಗಾವಿ
  ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಗೊಂಡಿದ್ದು, ಪದವಿ ಕಾಲೇಜುಗಳ ಪ್ರಾರಂಭಗೊಂಡ ಬೆನ್ನಲ್ಲೇ, ವಿವಿಧ ಕಾಲೇಜಿನ 6 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
  ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಪದವಿ ಕಾಲೇಜು ಆರಂಭಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಪದವಿ ಕಾಲೇಜಿನ ಒಟ್ಟು 6 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.
  ನವೆಂಬರ್ 17ರಂದು 671 ಕಾಲೇಜು ಸಿಬ್ಬಂದಿ, ನ.18 ರಂದು 656, ನ.19ರಂದು 699 ಕಾಲೇಜು ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು.
  ಒಟ್ಟು 2026 ಕಾಲೇಜು ಸಿಬ್ಬಂದಿ ಪೈಕಿ 250 ಜನರ ವರದಿ ಬಂದಿದ್ದು, ಈ ಪೈಕಿ ಆರು ಕಾಲೇಜು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
  ಇನ್ನುಳಿದಂತೆ 1,776 ಸಿಬ್ಬಂದಿಯ ಕೋವಿಡ್ ವರದಿ ಬರುವುದು ಬಾಕಿ ಇದೆ. ಈ ಎಲ್ಲ ಸಿಬ್ಬಂದಿ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜು ಆವರಣಕ್ಕೆ ತೆರಳಿ ಪಡೆದುಕೊಂಡಿದ್ದರು.

 

loading...