ಪಪಂ ಚುನಾವಣೆ: 88 ಸಂಭಾವ್ಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

0
24

ಕನ್ನಡಮ್ಮ ಸುದ್ದಿ-ಮುಂಡಗೋಡ: ಇಲ್ಲಿಯ ಪಟ್ಟಣ ಪಂಚಾಯತನ 19 ವಾರ್ಡಗಳ ಚುನಾವಣೆಗೆ ಒಟ್ಟು 88 ಸಂಭಾವ್ಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಆಯಾ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ 1ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಕಾಳಮ್ಮ ಬಡಿಗೇರ, ಕಾಂಗ್ರೆಸ್‍ನಿಂದ ಬೀಬಿಜಾನ ಮುಲ್ಲಾನವರ, ಜೆಡಿಎಸ್‍ನಿಂದ ಐತಾಬಿ ಕಾಮದಾರಿ, 2ನೇ ವಾರ್ಡ್‍ನಲ್ಲಿ ಪಕ್ಷೇತರ 7ಅಭ್ಯರ್ಥಿಗಳು, ಕಾಂಗ್ರೆಸ್‍ನಿಂದ ಅಹ್ಮದರಜಾ ಪಠಾಣ, ಬಿಜೆಪಿಯಿಂದ ಶರೀಫ ಕರೀಂಸಾಬನವರ, ಜೆಡಿಎಸ್‍ನಿಂದ ಮಹ್ಮದಹಸನ ಶೇಖ, 3ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಮಂಜುನಾಥ ಹರ್ಮಲಕರ, ಜೆಡಿಎಸ್‍ನಿಂದ ಫಕ್ಕಿರಪ್ಪ ಅಂಟಾಳ, ಕಾಂಗ್ರೆಸ್‍ನಿಂದ ಸಂಜು ಪಿಶೆ, ಪಕ್ಷೇತರ 4ಅಭ್ಯರ್ಥಿಗಳು, 4ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಮಹ್ಮದಜಾಫರ ಹಂಡಿ, ಜೆಡಿಎಸ್‍ನಿಂದ ಮಹ್ಮದಉಮರ ಗಡವಾಲೆ ಬಿಜೆಪಿಯಿಂದ ರಾಜು ಆಚಾರಿ, ಪಕ್ಷೇತರ 2ಅಭ್ಯರ್ಥಿಗಳು, 5ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ವಿಜಯಲಕ್ಷ್ಮೀ ಹದಳಗಿ, ಪಕ್ಷೇತರ ಶೇಖವ್ವಾ ಅಗಸರ, ಕಾಂಗ್ರೆಸ್‍ನಿಂದ ವಿಶ್ವನಾಥ ಪವಾಡಶೆಟ್ಟರ, 6ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ನಿರ್ಮಲಾ ಬೆಂಡ್ಲಗಟ್ಟಿ, ಬಿಜೆಪಿಯಿಂದ ಕವಿತಾ ಪಾಟೀಲ, ಜೆಡಿಎಸ್‍ನಿಂದ ಲಕ್ಷ್ಮೀಬಾಯಿ, 7ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಮಹ್ಮದಗೌಸ ಮಕಾನದಾರ, ಜೆಡಿಎಸ್‍ನಿಂದ ಇಸ್ಮಾಯಿಲ್(ಛೋಟು) ಶೇಖ, ಪಕ್ಷೇತರ ಅಭ್ಯರ್ಥಿಯಾಗಿ ಮುಸ್ತಾಕ ಹರಿಹರಕರ, 8ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಗೀತಾ ಕಳಸಾಪುರ, ಬಿಜೆಪಿಯಿಂದ ಜಯಸುಧಾ ಭೋವಿವಡ್ಡರ, ಜೆಡಿಎಸ್ ನಿಂದ ಯಶೋಧಾ ಕೊರವರ, ಪಕ್ಷೇತರ ಲಕ್ಷ್ಮೀ ಭೋವಿವಡ್ಡರ, 9ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಪ್ರತಿಮಾ ಹಿರೇಮಠ ಬಿಜೆಪಿಯಿಂದ ಕುಸುಮಾ ಹಾವಣಗಿ, ಪಕ್ಷೇತರ 3ಅಭ್ಯರ್ಥಿಗಳು, 10ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಮಹ್ಮದಗೌಸ್ ಧುಂಡಶಿ, ಬಿಜೆಪಿಯಿಂದ ಶ್ರೀಕಾಂತ ಸಾನು, ಜೆಡಿಎಸ್‍ನಿಂದ ನೂರಅಹ್ಮದ ಗಡವಾಲೆ, ಪಕ್ಷೇತರ ಮಂಜುನಾಥ ಶೇಟ್, 11ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಮಂಜುಳಾ ಪರಶುರಾಮ ಚಂದಾಪೂರ, ಕಾಂಗ್ರೆಸ್‍ನಿಂದ ಸುಮಾ ಕೊಟಗುಣಶಿ, ಜೆಡಿಎಸ್ ನಿಂದ ಜ್ಯೋತಿ ಕಲಾಲ, ಪಕ್ಷೇತರ ಸುರೇಖಾ ರಾಯ್ಕರ, 12ನೇವಾರ್ಡ್‍ನಲ್ಲಿ ಬಿಜೆಪಿಯಿಂದ ಅಶೋಕ ಚಲವಾದಿ, ಕಾಂಗ್ರೆಸ್‍ನಿಂದ ವಸಂತ ಕೊರವರ, ಜೆಡಿಎಸ್‍ನಿಂದ ಮುನೇಶ್ವರ ಕೊರವರ, ಪಕ್ಷೇತರ ಬಸವರಾಜ ಹಳ್ಳೆಮ್ಮನವರ, 13ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಶಕುಂತಲಾ ಚಂದ್ರಶೇಖರ ನಾಯಕ, ಕಾಂಗ್ರೆಸ್‍ನಿಂದ ಶಕುಂತಲಾ ಹನಮಂತ ತಳವಾರ, ಶಿವಸೇನಾ ಸಂತೋಷ ಪೂಜಾರ, ಜೆಡಿಎಸ್‍ನಿಂದ ರಾಘವೇಂದ್ರ ತಳವಾರ. 14ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಲಿಂಗರಾಜ ಖನ್ನೂರ, ಬಿಜೆಪಿಯಿಂದ ಫಣಿರಾಜ ಹದಳಗಿ, ಜೆಡಿಎಸ್‍ನಿಂದ ನಾಗರಾಜ ದೈವಜ್ಞ, ಪಕ್ಷೇತರರಾಗಿ ತುಕಾರಾಮ ಇಂಗಳೆ, ಸುನಿಲ ಬೈಲೂರ, ಹನುಮಂತಪ್ಪ ಭಜಂತ್ರಿ, 15ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಪ್ರಕಾಶ ಚಂದಾಪುರ, ಬಿಜೆಪಿಯಿಂದ ಶೇಖರ ಲಮಾಣಿ, ಪಕ್ಷೇತರ ಪ್ರಸನ್ನ ಲಮಾಣಿ, 16ನೇ ವಾರ್ಡ್‍ನಲ್ಲಿ ಬಿಜೆಪಿಯಿಂದ ಲಕ್ಷೀ ತೆವರ, ಕಾಂಗ್ರೆಸ್‍ನಿಂದ ರಹೀಮಾಬಾನು ಕುಂಕೂರ, ಜೆಡಿಎಸ್‍ನಿಂದ ಪುಟ್ಟವ್ವಾ ಲಮಾಣಿ, 17ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಜಯಶ್ರೀ ಕರ್ಜಗಿ, ಬಿಜೆಪಿಯಿಂದ ರೇಣುಕಾ ಹಾವೇರಿ, ಕಾಂಗ್ರೆಸ್‍ನಿಂದ ಚೈತ್ರಾ ಭೋವಿ ಮತ್ತು ರೇಣುಕಾ ಭೋವಿ, 18ನೇ ವಾರ್ಡ್‍ನಿಂದ ಕಾಂಗ್ರೆಸ್‍ನಿಂದ ಲಕ್ಷ್ಮೀ ದೈವಜ್ಞ, ಬಿಜೆಪಿಯಿಂದ ರಾಜೇಶ್ವರಿ ಅಂಡಗಿ, 19ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಶಿವರಾಜ ಸುಬ್ಬಾಯವರ, ಬಿಜೆಪಿಯಿಂದ ನಾಗರಾಜ ಚಿಗಳ್ಳಿ, ಜೆಡಿಎಸ್‍ನಿಂದ ನಾಗರಾಜ ತಿಮ್ಮಾಪುರ ಮತ್ತು ಪಕ್ಷೇತರ ರಾಮಚಂದ್ರ ಬೆಳವತ್ತಿ ಎಂದು ತಿಳಿದು ಬಂದಿದೆ.

loading...