ಪರಿಸರ ಉಳಿಸಲು ಹಸಿರು ಪೀಠ ಆದೇಶ ಜಾರಿ

0
75
ಹಸಿರು ಪೀಠ ಆದೇಶ ಅನುಷ್ಠಾನ

1 ಮರ ಕಡಿಯುವ ಮುನ್ನ 10 ಮರ ನೆಡಿ | ಸುತ್ತೋಲೆ ಹೊರಡಿಸಿದ ಅರಣ್ಯ ಇಲಾಖೆ
| ಕೆ ಎಮ್. ಪಾಟೀಲ
ಬೆಳಗಾವಿ: ಸರ್ಕಾರಿ, ಖಾಸಗಿ ಜಾಗೆಯಲ್ಲಿ ಯಾವುದೇ ಒಂದು ಮರಗಳನ್ನು ಕಡೆಯಬೇಕೆಂದರೆ ಮೊದಲು ಹತ್ತು ಗಿಡಗಳನ್ನು ನೆಡಬೇಕು ಎಂದು ಹಸಿರು ಪೀಠ ಅರಣ್ಯ ಇಲಾಖೆಗೆ ಸುತ್ತೋಲೆ ಹೊರಡಿಸಿದೆ.
ಹೌದು… ಇಲ್ಲದಿದ್ದರೆ ಅರಣ್ಯ ಇಲಾಖೆಯ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸುತ್ತಾರೆ. ಉಚ್ಚ ನ್ಯಾಯಾಲಯ ಮಾ. 14 ರಂದು ನ್ಯಾಷನಲ್ ಗ್ರೀನ್ ಟ್ರೀಬ್ಯುನಲ್ (ಎನ್‍ಜಿಟಿ) ಹಸಿರು ಪೀಠ ಆದೇಶದ ಜಾರಿ ಮಾಡಿ ರಾಜ್ಯದ ಎಲ್ಲ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ಅತಿಯಾಗಿ ಮರಗಳನ್ನು ಕಡಿಯುವದರಿಂದ ಮಳೆಯ ಪ್ರಮಾಣ ಕುಗ್ಗಿದ್ದು, ಬರ ಆವರಿಸಿ ರೈತರು ಮಳೆಗಾಗಿ ಆಕಾಶವನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣದಿಂದ ದೇಶದ ಅರಣ್ಯ ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಉಚ್ಚನ್ಯಾಯಾಲಯ ಮಹತ್ವಾಕಾಂಕ್ಷಿ ನಿರ್ಣವನ್ನು ತೆದುಕೊಂಡಿದೆ.
ಲೋಕೋಪಯೋಗಿ ಇಲಾಖೆಯು ರಸ್ತೆಯನ್ನು ಅಗಲೀಕರಣ ಮಾಡುವ ಸಂದರ್ಭದಲ್ಲಿ ಅಡ ತಡೆಯಾದರೆ ಆಗ ಅವರು ಗಿಡಗಳನ್ನು ಕತ್ತರಿಸಿಸುತ್ತಾರೆ. ಆ ಕಾರಣದಿಂದ ಎಷ್ಟು ಪ್ರಮಾಣದ ಪ್ರದೇಶವನ್ನು ಉಪಯೋಗಿಸಿಕೊಂಡಿರುತ್ತಾರೊ ಅಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಮರಗಳನ್ನು ಬೆಳೆಸಲು ಹಣವನ್ನು ನೀಡಬೇಕು.
ಉದಾಹರಣೆಗೆ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 10 ಗಿಡಗಳನ್ನು ಕಡಿದರೆ ಅದಕ್ಕೆ ಪ್ರತ್ಯುತ್ತರವಾಗಿ 400 ಗಿಡಗಳನ್ನು ಒಂದು ಹೆಕ್ಟರ್ ಪ್ರದೇಶದಲ್ಲಿ ಹಚ್ಚಬೇಕು ಅಲ್ಲದೇ, ಮರಗಳನ್ನು ನಿರ್ವಹಣೆ ಮಾಡಲು ಪ್ರತಿ ಹೆಕ್ಟರ್‍ಗೆ 5 ವರ್ಷಕ್ಕೆ ಸುಮಾರು 2.50 ಲಕ್ಷ ಹಣವನ್ನು ನೀಡಬೇಕು ಎಂಬುವುದು ಈ ಆದೇಶದ ಉದ್ದೇಶವಾಗಿದೆ.
ಎನ್‍ಜಿಟಿಯನ್ನು ಮೇ. 23 ರಂದು ಸಾರ್ವಜನಿಕ ಹಿತಾಶಕ್ತಿಗೆ ಅನುಗುನವಾಗಿ ಯಾರ ಆಕ್ಷೇಪನೆ ಇದೆ ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು. ಎಂಬುವುದು ಉಚ್ಚ ನ್ಯಾಯಾಧೀಶರ ಪೀಠದಲ್ಲಿ ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳು, ವಕೀಲರು, ಸಾರ್ವಜನಿಕರ ಸಮ್ಮುಖದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಅದು ಕಾರಣಾಂತರಗಳಿಂದ ಜೂ. 23 ಕ್ಕೆ ಮುಂದುಡಲಾಗಿದೆ.
ಎನ್‍ಜಿಟಿ ಆದೇಶ ಅಧಿಕಾರಿಗಳಲ್ಲಿ ಗೊಂದಲ: ಅರಣ್ಯ ಇಲಾಖೆಯ ಪ್ರಕಾರ ವರ್ಷದಲ್ಲಿ ಯಾವ ಮರಗಳನ್ನು ಕಡಿಯಬೇಕು ಏಷ್ಟು ಕಡಿಯಬೇಕು ಎಂಬುವುದು ಕ್ರೀಯಾ ಯೋಜನೆಯ ಪುಸ್ತಕದಲ್ಲಿ ಮಾಹಿತಿ ನೀಡಲಾಗುತ್ತದೆ. ಅದರ ಮಾಹಿತಿ ಅನುಗುಣವಾಗಿ ಸೂಚನೆ ನೀಡಿದ ಮರಗಳನ್ನು ಕಡೆಯಲಾಗುತ್ತದೆ.
ಆದರೆ ಕೆಲ ಮರಗಳಾದ ಆಕೇಶಿಯಾ, ನೀಲಗಿರಿ, ದೊಡ್ಡಬೇವು, ರೈನ್ ಮರ, ದೊಡ್ಡ ಬಿದರು, ಕಿರುಬಿದಿರು, ನಿಲಗಿರಿ, ಕಾಸಿಯಾ ಜಾತಿಯ ಮರ, ಗೊಡಂಬಿ, ಕ್ರಿಸ್ಮಸ್ ಮರ, ಅಡಕೆ, ಗಾಳಿ ಮರ, ಗುಲ್ ಮೋಹರ, ಮಚ್ಚೆ ನಂದಿ, ಟೀಕ್ ಬಾಂಬು, ಹುಣಸಿ, ಬಸರಿ ಮರಗಳನ್ನು 2016 ಸುತ್ತೋಲೆಯ ಪ್ರಕಾರ ಈ ಮರಗಳಿಗೆ ಅನುಮತಿ ಇಲ್ಲದಿದ್ದರು ಕಡಿಯುವ ಅಧಿಕಾರ ಇತ್ತು ಆದರೆ, ಎನ್‍ಜಿಟಿ ಆದೇಶದ ಹಿನ್ನಲೆಯಲ್ಲಿ ಅರಣ್ಯದಲ್ಲಿ ಮರಗಳನ್ನು ಕಡಿಯುದನ್ನು ನಿಲ್ಲಿಸಲಾಗಿದೆ. ಇದರಿಂದ ಯಾವ ನಿಯಮವನ್ನು ಪಾಲಿಸಬೇಕು ಎಂಬುವುದು ಗೊಂದಲವಾಗಿದೆ ಎಂದು ಅಧಿಕಾರಿಗಳು ಕನ್ನಡಮ್ಮಗೆ ತಿಳಿಸಿದ್ದಾರೆ.
ಡಿ ದೇವರಾಜ್ ಅರಸು ಸಿಎಂ ಇದ್ದಾಗ ಈ ಆದೇಶ ಜಾರಿ: ರಾಜ್ಯದ ಸಿಎಂ ಆಗಿರುವ ಅವದಿಯಲ್ಲಿ ಡಿ ದೇವರಾಜ ಅರಸು ಅವರು ಟ್ರೀ ಕಾಯ್ದೆ 1976 ರಲ್ಲಿ ಜಾರಿ ಮಾಡಿದ್ದರು. ಆದರೆ, ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಇಲಾಖೆ ಈ ಆದೇಶವನ್ನು ಅನುಸರಿಸುತ್ತಿರಲಿಲ್ಲ. ಆದರೆ, ಈಗ ಉಚ್ಚನ್ಯಾಯಾಲಯದ ಅನುಮತಿ ಮೆರೆಗೆ ಇದನ್ನು ದೇಶದಲ್ಲಿ ಸಂಪೂರ್ಣ ಜಾರಿ ಮಾಡಲಾಗಿದೆ.
ಬಾಕ್ಸ್…
ಎನ್‍ಜಿಟಿ ಕಾಯ್ದೆಯ ಪ್ರಕಾರ ಒಂದು ಗಿಡವನ್ನು ಕಡಿಯುದಕ್ಕೆ ಮುಂಚಿತವಾಗಿ ಮೊದಲೇ ಹತ್ತು ಗಿಡಗಳನ್ನು ನೆಟ್ಟು ಅವುಗಳ ನಿರ್ವಹಣೆಗೆಂದು ಹಣವನ್ನು ನೀಡಬೇಕು ಇಲ್ಲದಿದ್ದರೆ ಅಂತವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಎನ್‍ಜಿಟಿ ಸಾರ್ವಜನಿಕ ಹಿತಾಶಕ್ತಿ ಸಭೆಯು ಜೂ. 23 ರಂದು ಮುಂದುಡಲಾಗಿದ್ದು ಅಲ್ಲಿ ಯಾವ ರೀತಿಯ ನಿರ್ಣಯಗಳನ್ನು ನ್ಯಾಯಾಲಯ ತೆಗೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.
-ಬಸವರಾಜ ಪಾಟೀಲ ಡಿಎಫ್‍ಒ, ಬೆಳಗಾವಿ

loading...