ಪರಿಸರ ಜಾಗೃತಿಗಾಗಿ ಎನ್‌ಸಿಸಿ ಕೆಡೆಟ್‌ಗಳಿಂದ ನಾಟಕ ಪ್ರದರ್ಶನ

0
3

ಪರಿಸರ ಜಾಗೃತಿಗಾಗಿ ಎನ್‌ಸಿಸಿ ಕೆಡೆಟ್‌ಗಳಿಂದ ನಾಟಕ ಪ್ರದರ್ಶನ
ಚನ್ನಮ್ಮನ ಕಿತ್ತೂರು: ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮಾ ಬಾಲಕಿಯರ ವಸತಿ ಶಾಲೆಯ ಎನ್.ಸಿ.ಸಿ ಕೆಡೆಟ್‌ಗಳು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಬಿತ್ತಿ ಪತ್ರಗಳನ್ನು ಕೈಯಲ್ಲಿ ಹಿಡಿದು ರ‍್ಯಾಲಿ ಹಾಗೂ ಬೀದಿ ನಾಟಕ ಮಾಡುವ ಮೂಲಕ ಸಾರ್ವಜನಿಕರ ಗಮನ ಸೇಳೆದರು.
ಶುಕ್ರವಾರ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಿಂದ ಆರಂಭಗೊAಡ ರ‍್ಯಾಲಿಯೂ ಗುರುವಾರ ಪೇಟೆ ಹಾಗೂ ಸೋಮವಾರ ಪೇಟೆಯವರೆಗೂ ನಡೆಯಿತು. ಇದರ ಜೊತೆಯಲ್ಲಿ ರಸ್ತೆಯೂದ್ದಕ್ಕೂ ಸ್ವಚ್ಚತೆಯ ಕಾರ್ಯವನ್ನು ವಿದ್ಯಾರ್ಥೀಗಳು ನಡೆಸಿದರು ಅಲ್ಲದೆ ಪಟ್ಟಣದ ಅರಳಿಕಟ್ಟಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೇಟಿ ಬಚಾವೊ, ಬೇಟಿ ಪಡಾವೊ, ಬಾಲ್ಯವಿವಾಹ ತಡೆಗಟ್ಟುವ, ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ವಿರೋಧಿಸಿ ಸಮಾಜದಲ್ಲಿ ಸ್ವಾಸ್ಥö್ಯ ಕಾಪಾಡುವ ಕುರಿತು ನಾಟಕ ಪ್ರದರ್ಶಿಸಿದರು.
ಜೊತೆಗೆ ಭೂಮಿಯ ಉಳುವಿಗಾಗಿ ಸಸಿಗಳನ್ನು ನೆಡುವುದು ಹಾಗೂ ಮರ ಗಿಡಗಳನ್ನು ಕಾಪಾಡುವ, ಹಾಗೂ ನಶಾ ಪದಾರ್ಥಗಳ ಸೇವನೆಯಿಂದ ಉಂಟಾಗುವ ದುರ್ಮರಣಗಳ ಮತ್ತು, ಪ್ಲಾಸ್ಟಿಕ್ ಉಪಯೋಗದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅಣಕು ಪ್ರದರ್ಶನವನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಬಿ. ಗೊರೋಶಿ, ಪ.ಪಂ ಆರೋಗ್ಯ ಇಲಾಖೆ ಕಿರಿಯ ಆರೋಗ್ಯ ನಿರೀಕ್ಷಕಿ ಪೂಜಾ ಇಚ್ಚಂಗಿ, ಎನ್.ಸಿ.ಸಿ ಅಧಿಕಾರಿಗಳಾದ ಸರೋಜಿನಿ ದೊಡ್ಡಲಿಂಗಣ್ಣವರ, ಅಶ್ವಿನಿ.ಸಿ, ಪ್ರೀಯಾ.ಎನ್, ಸೇರಿದಂತೆ ಶಾಲಾ ವಿದ್ಯಾರ್ಥಿನಿಯರು ಹಾಜರಿದ್ದರು.

loading...