ಪರಿಸರ ಸಂರಕ್ಷಣೆ, ಜಾಗೃತಿಗಾಗಿ ಕೊಪ್ಪಳ ನಗರಸಭೆಗೆ ರಾಜ್ಯ ಮಟ್ಟದ ಪರಿಸರ ಪ್ರಶಸ್ತಿ ಗರಿ

0
18

 

ಕನ್ನಡಮ್ಮ ಸುದ್ದಿ-ಕೊಪ್ಪಳ: ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೆÃತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಗುರುತಿಸಿ ಸನ್ಮಾನಿಸÀಲ್ಪಡುವ ೨೦೧೮-೧೯ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಗರಿ ಕೊಪ್ಪಳ ನಗರ ಸಭೆಗೆ ಲಭಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.
ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು (ಪರಿಸರ ಇಲಾಖೆ) ಇವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನೆ ಕ್ಷೆÃತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಸರಕಾರ ಪ್ರತಿ ವರ್ಷ ಮೂವರು ವಿಶಿಷ್ಟ ವ್ಯಕ್ತಿಗಳಿಗೆ ಹಾಗೂ ೩ ಸಂಸ್ಥೆಗಳಿಗೆ ಕೊಡಮಾಡುವ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಉತ್ತರ ವಲಯ ವಿಭಾಗದಲ್ಲಿ ಆಯ್ಕೆಯಾಗಿರುವುದು ಒಂದು ವಿಶೇಷ. ೧೫-೦೪-೨೦೧೯ ರಂದು ಪ್ರಶಸ್ತಿಗೆ ಅರ್ಜಿಯನ್ನು ರಾಜ್ಯ ಸರಕಾರ ಅಧಿಸೂಚನೆ ಮತ್ತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು. ಪ್ರಶಸ್ತಿಗೆ ಆಯ್ಕೆ ಕೊರಿ ರಾಜ್ಯದ ವಿವಿಧ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ೪೨ ಅರ್ಜಿಗಳು ಸ್ವಿÃಕರಿಸಿತವಾಗಿದ್ದವು. ಇದರಲ್ಲಿ ಕೊಪ್ಪಳ ನಗರಸಭೆಯು ಪರಿಸರ ಸಂರಕ್ಷಣೆ ಹಾಗೂ ಜಾಗೃತಿಗಾಗಿ ನಡೆಸಿದ ಕಾರ್ಯಕ್ರಮ ಗುರುತಿಸಿ, ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನೆ ಕ್ಷೆÃತ್ರದಲ್ಲಿ ಸಂಸ್ಥೆಗಳು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ೨೦೧೮-೧೯ ಸಾಲಿನಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಪ್ರಶಸ್ತಿಯು ತಲಾ ರೂ. ೧.೦೦ ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ನಗರಸಭೆಯು ಕೊಪ್ಪಳದಲ್ಲಿ — ೨೦೧೮-೧೯ನೇ ಸಾಲಿಗೆ ಪರಿಸರ ಪ್ರಶಸ್ತಿ ಪಡೆದಿರುವವರ ಮಾಹಿತಿ: ದಕ್ಷಿಣ ವಲಯ (ಬೆಂಗಳೂರುÄ ನಗರ, ಗ್ರಾಮಾಂತರ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರ ಜಿಲ್ಲೆಗಳು) ದಕ್ಷಣ ವಲಯದ ವ್ಯಕ್ತ : ಕೆಂಪಸಿದ್ದೆÃಗೌಡ ಚಿಕ್ಕಯ್ಯ ಬೆಂಗಳೂರ. ದಕ್ಷಿಣ ವಲಯದ ಸಂಸ್ಥೆ : ಸಹಜ ಸಮೃದ್ಧ ಬೆಂಗಳೂರ. ಮಲೆನಾಡು ಮತ್ತು ಕರಾವಳಿ ವಲಯ : (ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರ, ಕೊಡಗು, ಹಾಸನ, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳು), ಮಲೆನಾಡು ಮತ್ತು ಕರಾವಳಿ ವಲಯದ ವ್ಯಕ್ತ : ಡಾ.ತಿಪ್ಪೆÃಕಾಳಿ ರಂಗನಾಥ್, ತಲಕಾಡು, ಮೈಸೂರು ಜಿಲ್ಲೆ. ಮಲೆನಾಡು ಮತ್ತು ಕರಾವಳಿ ಸಂಸ್ಥೆ : ಜಿಲ್ಲಾ ನಗರಾಭಿವೃದ್ಧಿ ಕೋಶ, ಉತ್ತರ ಕನ್ನಡ ಜಿಲ್ಲೆ. ಉತ್ತರ ವಲಯ (ಡಾವಣಗೆರೆ, ಚಿತ್ರದುರ್ಗ, ಹಾವೇರಿ, ಧಾರವಾಡ, ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ,, ಬೀದರ, ಯಾದಗಿರಿ, ರಾಯಚೂರು, ಮತ್ತು ಕೊಪ್ಪಳ) ಉತ್ತರ ವಲಯ ವ್ಯಕ್ತಿ : ಬಸವರಾಜ್ ಬಸಪ್ಪ ಇಂದೂರ, ಆಲದಕಟ್ಟೆ, ಧಾರವಾಡ ಜಿಲ್ಲೆ ಹಾಗೂ ಉತ್ತರ ವಲಯದ ಸಂಸ್ಥೆ : ಕೊಪ್ಪಳ ನಗರ ಸಭೆ, — ನಗರದಲ್ಲಿ ಹತ್ತು ಸಾವಿರ ಸಸಿಗಳ ನಾಟಿ, ಪರಿಸರ ಸಂರಕ್ಷಣೆ, ಜಾಗೃತಿಗಾಗಿ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದ ನಗರಸಭೆಯು ಜನಸಮುದಾಯದ ಸಹಭಾಗಿತ್ವದಲ್ಲಿ ಕಳೆದ ವರ್ಷ ಸುಮಾರು ಹತ್ತು ಸಾವಿರ ಸಸಿಗಳನ್ನು ನಡೆಸಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ವಾರ್ಡ, ಓಣಿ, ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಲಾಗಿದೆ ಎನ್ನುತ್ತಾರೆ ಪೌರಾಯುಕ್ತ ಸುನೀಲ್ ಪಾಟೀಲ್, ಹಾಗೂ ಪರಿಸರ ಅಭಿಯಂತರಾದ ಅಶೋಕ ಸಜ್ಜನ ಅವರು.
===========ಬಾಕ್ಸ್ : ವಿದ್ಯಾರ್ಥಿಗಳ ನೆರವಿನೊಂದಿಗೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಾಗೂ ನಗರದ ವಿವಿಧ ಬಗೆಯ ವ್ಯಾಪಾರಸ್ಥರೊಂದಿಗೆ ಸೇರಿಕೊಂಡು ಜನಜಾಗೃತಿ ನಡೆಸಲಾಗಿದೆ, ಪ್ಲಾಸ್ಟಿಕ್ ಬಳಕೆಯ ನಿಷೇಧದ ಬಗ್ಗೆ ಕಾನೂನಿನ್ವಯ ಕ್ರಮಗಳನ್ನು ಕೈಗೊಂಡಿದ್ದು, ಸಾಧ್ಯವಿದಷ್ಟು ನಗರದ ಸ್ವಚ್ಛತೆ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಮಾಡದಿರಲು ಹಲವು ಕ್ರಮಗಳನ್ನು ತೆಗದುಕೊಂಡಿದ್ದು, ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ವಿಶೇಷ ಕಾರ್ಯಕ್ರಮಗಳನ್ನು ಜರುಗಿಸಲಾಗುವುದು _ ಪಿ.ಸುನೀಲ್ ಕುಮಾರ, ಜಿಲ್ಲಾಧಿಕಾರಿಗಳು —

loading...