ಪರಿಹಾರ ಹೆಚ್ಚಿಗೆ ಪ್ರಯತ್ನ : ಡಿಸಿ

0
496


ಕನ್ನಡಮ್ಮ ಸುದ್ದಿ
ಬೆಳಗಾವಿ : ಸರಕಾರ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಪರಿಹಾರ ಹಣ ಕಡಿಮೆಯಾದರೆ ಅದನ್ನು ಹೆಚ್ಚಿಗೆಗೆ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಎಸ್ ಟಿಪಿ ಪ್ಲಾಂಟ್ ಗಾಗಿ ಸ್ವಾಧೀನ ಪಡಿಸಿಕೊಳ್ಳುವ ಕುರಿತು ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು,
ಸರಕಾರ ನೀಡುವ ಪರಿಹಾರ ನಾಲ್ಕು ವರ್ಷಗಳಲ್ಲಿ ರೈತರ ಕೈಯಲ್ಲಿ ಇರುವುದಿಲ್ಲ. ರೈತರ ಜಮೀನುಗಳನ್ನು ಪಡೆದುಕೊಂಡು ಬೇರೆ ಕಡೆಗೆ ಜಮೀನು ನೀಡುವಂತೆ ರೈತರು ಬೇಡಿಕೆ ಇಟ್ಟರು.
ಸಂಸದ ಸುರೇಶ ಅಂಗಡಿ, ಶಾಸಕ ಸಂಜಯ ಪಾಟೀಲ ಭಾಗವಹಿಸಿ ಸುವರ್ಣ ವಿಧಾನ ಸೌಧ ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡ ರೈತರ ಕುಟುಂಬಗಳಿಗೆ ಸರಕಾರಿ ಉದ್ಯೋಗ ನೀಡುವ ಕುರಿತು ಪಟ್ಟಿ ತಯಾರಿಸಿ ನೀಡಿದ್ದರೆ ಈ ಬಗ್ಗೆ ವಿಧಾನ ಸಭೆ ಸ್ಪೀಕರ್ ಅವರ ಜೊತೆಗೆ ಚರ್ಚಿಸಲಾಗುವುದು. ತಾಂತ್ರಿಕ ತಜ್ಞರ ಅಭಿಪ್ರಾಯ ಪಡೆದುಕೊಂಡು ಜಮೀನು ಭೂಸ್ವಾಧಿನ ಪಡೆದುಕೊಳ್ಳಲು ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.
ಅಪರ್ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಡಾ. ಕವಿತಾ ಯಾಕಪ್ಪಾ, ರಾಜಶ್ರೀ ಜೈನಾಪುರ ಸೇರಿದಂತೆ ಹಲಗಾ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

loading...