ಪವಾಡ ರಹಸ್ಯ ಬಯಲು ಕಾರ್ಯಕ್ರಮ

0
87

ಧಾರವಾಡ,14: ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ಜನ್ನತ ನಗರದ 3 ನೇಕ್ರಾಸ್ ಕರಿಯಮ್ಮ ದೇವಸ್ಥಾನದ ಬಳಿ ಪವಾಡ ರಹಸ್ಯ ಬಯಲು ಕಾರ್ಯವನ್ನು ಆಯೋಜಿಸಲಾಗಿತ್ತು.
21 ನೇ ಶತಮಾನದಲ್ಲಿ ನರಬಲಿ, ಮಾಟ ಮಂತ್ರದಂತಹ ಮೌಡ್ಯಾಚರನೆಗಳು ಚಾಲ್ತಿಯಲ್ಲಿದ್ದು ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತಿವೆ. ಇದಕ್ಕೆ ಮುಗ್ದ ಜನತೆ ಬಲಿಯಾಗುತ್ತಿದ್ದಾರೆ. ಇವೆಲ್ಲವುಗಳ ವಿರುದ್ದ ಜನಸಾಮಾನ್ಯರಲ್ಲಿ ಜಾಗ್ರತಿಯನ್ನು  ಮೂಡಿಸುತ್ತಾ ವೈಜ್ಷಾನಿಕ ಮನೋಭಾವನೆ ಬೆಳೆಸಲು ಬ್ರೇಕ್‍ಥ್ರೂ ಸೈನ್ಸ ಸೊಸೈಟಿಯು ವಿವಿಧ ಶಾಲೆ, ಕಾಲೇಜುಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಜಿಲ್ಲಾ ಸಂಗಟನಾಕಾರರಾದ ಶ್ರಿ ದೀಪಾ ಹಾಗೂ ಮಹಾಂತೇಶ ಹಲವಾರು ಪವಾಡಗಳ ರಹಸ್ಯವನ್ನು ಬಯಲು ಮಾಡುತ್ತಾ ನೀರಿನಲ್ಲಿ ದೀಪಾ ಹಚ್ಚುವುದು, ಕೊಳ್ಳಿ ದೆವ್ವ, ಮೈಲೇಲೆ ನಿಂಬೆಹಣ್ಣು ಹೋಲಿಯುವುದು, ಬಾಯಿಯಲ್ಲಿ ಕರ್ಪೂರ ಉರಿಸುವುದು. ಇನ್ನೂ ವಿವಿಧ ಕೈ ಬೆಳಕನ್ನು ಪ್ರದರ್ಶಿಸಿ ಅದರ ಹಿಂದಿರುವ ವೈಜ್ಞಾಣಿಕ ಕಾರಣವನ್ನು ತಿಳಿಸಿದರು.
ಬಡಾವಣೆಯ ಸುಧಾಕೆ ಮಂಜುನಾಥ, ಆನಂದ ಹಾಗೂ ಮಮ್ತಾಜರವರು ಕಾಯ್ಕ್ರಮಕ್ಕೆ ಸಹಕಾರ ನೀಡಿದರು. 200 ಕ್ಕೂ ಹೆಚ್ಚು ಜನ ಕಾರ್ಯಕ್ರಮವನ್ನು ವಿಕ್ಷಿಸಿದರು.

loading...

LEAVE A REPLY

Please enter your comment!
Please enter your name here