ಪಾಪಿ ಪಾಕ್​ ಪರ ಘೋಷಣೆ : ಯುವತಿ ಪೊಲೀಸರ್ ವಶಕ್ಕೆ

0
108

ಪಾಪಿ ಪಾಕ್​ ಪರ ಘೋಷಣೆ : ಯುವತಿ ಪೊಲೀಸರ್ ವಶಕ್ಕೆ

ಕನ್ನಡಮ್ಮ ಸುದ್ದಿ: ಬೆಳಗಾವಿ; ಹೇಡಿ ಪಾಕಿಸ್ತಾನದ ಪರ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ಯುವತಿಯನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ-ಶಿವಪೂರ ಗ್ರಾಮದ ಬಂದಿತ ಯುವತಿ, ದೇಶದ್ರೋಹ ಎಸಗಿದ ಆರೋಪದಲ್ಲಿ ಮುರಗೋಡ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಡೀ ದೇಶವೆ ಪಾಪಿ ಪಾಕಿಸ್ತಕ್ಕೆ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿ (25) ಫೇಸ್​ಬುಕ್​, ವಾಟ್ಸ್​ಆ್ಯಪ್​ಗಳಲ್ಲಿ ಪಾಕ್​ ಧ್ವಜದೊಂದಿಗೆ ಪಾಕಿಸ್ತಾನ ಕಿ ಜೈ ಹೋ ಎಂಬ ಸಂದೇಶ ಪ್ರಕಟಿಸಿ ಪುಂಡಾಟಿಕೆ ಮೇರದಿದಾಳೆ ಎಂದು ಮಾಹಿತಿ ಲಭ್ಯ ವಾಗಿದೆ


ರೊಚ್ಚಿಗೆದ್ದ ಪ್ರತಿಭಟನಾಕಾರರು ಈ ಮಹಿಳೆಯ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.
ಪರಿಸ್ಥಿತಿಯನ್ನು ಅರಿತ ಪೊಲೀಸರು ಈ ಮಹಿಳೆಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ‌ ಎನ್ನಲಾಗಿದೆ.

loading...