ಪಾರ್ಲಿಮೆಂಟ್ ನ್ಯಾಗ ರೊಕ್ಕ ಇಲ್ಲ. ನಾನ ಒಂದ ತಿಂಗಳ ಮ್ಯಾಲೆ ಬರತ್ತೇನಿ ಅಂದಿದ್ದ ನನ್ನ ಮಗಾ…

0
206

ಪಾರ್ಲಿಮೆಂಟ್ ನ್ಯಾಗ ರೊಕ್ಕಾ ಇಲ್ಲ.‌ ನಾನ ಹೋಗಬೇಕು. ಒಂದು ತಿಂಗಳ ಮ್ಯಾಲೆ ಊರಿಗೆ ಬರರ್ತೆನಿ ಅಂದಿದ್ದಾ ನನ್ನ ಮಗಾ.. ಹ್ಯಾಂಗ್ ಹೊದ್ಯೋ.. ಮಗನ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ತಾಯಿ ಸೋಮವ್ವಾ ಅಂಗಡಿ ಮಗನ ನೆನೆದು ಕಣ್ಣೀರಟ್ಟರು.

ನನ್ನ ಮಗಾ ಸಾಲಿ ಕಟ್ಟಿಸಿದ್ದಾ, ಬಸವಣ್ಣನ ಗುಡಿ ಕಟ್ಟಿಸಿದಾ.. ಊರಾಗ ಇದ್ದವಾ.. ಬೆಳಗಾವಿಗೆ ಬಂದು ಅಂಗಿ ಪ್ಯಾಂಟ್ ಹೊಲಿಸಿ ಸಾಕಷ್ಟು ಕಷ್ಟ ಪಟ್ಟು ಬೆಳಸಿದ್ವಿ.. ನನ್ನ ಮಗಾ ಜನಕ್ಕಾಗಿ ಸಾಕಷ್ಟ ಮಾಡಿದಾ.. ನನ್ನ ಮಗಾ ಪಾರ್ಲಿಮೆಂಟ್ ಹೋಗ್ಯಾನ್.

ಪೈಪ್ ಲೈನ್ ಮಾಡಿಸಿದಾ, ನನ್ನ ಹೆಸರ ಮ್ಯಾಗ್ ಸಾಲಿ ಕಟ್ಟಸಿದ್ದಾ.. ಎಲ್ಲಿ ಹೋದ್ಯೋ.. ಮಗನ ಎಂದು ಮಗನ ನೆನೆದು ತಾಯಿ ಸೋಮವ್ವ ಕಣ್ಣೀರಟ್ಟರು.

loading...