ಪಾಲಿಕೆಯಿಂದ ಇಂದು ಕೇಂದ್ರಕ್ಕೆ ಸ್ಮಾರ್ಟಸಿಟಿ ನೀಲನಕ್ಷೆ ಸಲ್ಲಿಕೆ 3.534.50 ಕೋಟಿ ರೂ.ಗಳ ಅಂದಾಜು – ಪ್ರಸ್ತಾವನೆಯಲ್ಲಿ ರಿಂಗ್ ರೋಡ್ ಇಲ್ಲ

0
64

P0005_2007SAರಾಜಶೇಖರಯ್ಯಾ ಹಿರೇಮಠ

ಬೆಳಗಾವಿ:14 ಕೇಂದ್ರ ಸರಕಾರ ನರೇಂದ್ರ ಮೋದಿ ಅವರ ಮಹತ್ವರ ಯೋಜನೆಯಾದ ಸ್ಮಾರ್ಟ ಸಿಟಿ ಯೋಜನೆಗೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ವಿವಿಧ ಕಾಮಗಾರಿಗಳ ಕುರಿತಾಗಿ ರೂಪರೇಷಗಳ ನೀಲನಕ್ಷೆ ತಯಾರಾಗಿದ್ದು, ಬಹುತೇಕ ಮಂಗಳವಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಸನ್ನದ್ದವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಮಹಾನಗರ ಪಾಲಿಕೆ ಸಾರ್ವಜನಿಕರ ಸಲಹೆಗಳನ್ನು ಪಡೆದುಕೊಂಡು ಕೆಲ ಮಹತ್ವದ ರೂಪರೇಷೆಗಳನ್ನು ತಯಾರು ಮಾಡಿಕೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆ ಸ್ಮಾರ್ಟ ಸಿಟಿ ಸ್ಪರ್ಧೆಗೆ ಆಯ್ಕೆಯಾದ ನಂತರ ಹಂತ ಹಂತವಾಗಿ ಎಲ್ಲ ರೀತಿಯ ನಾಗರಿಕರ ಸಹಭಾಗಿತ್ವದಲ್ಲಿ ಸುಮಾರು 12,890 ನಾಗರಿಕರು ಪಾಲಿಕೆಯ ವಿಶೇಷ ಮೊಬೈಲ್ ಆ್ಯಪ್ ಮೂಲಕ 54 ಸಾವಿರ ಜನ, ಡೋರ್ ಟು ಡೋರ್ ಸಲಹೆಗಳನ್ನು ಸ್ವೀಕರಿಸಿಕೊಂಡಿದೆ.

ಅಲ್ಲದೆ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವೀಟರ್, ಸ್ಮಾರ್ಟ ಸಿಟಿ ಕೌಂಟರ್‍ಗಳಿಗೆ ಆಗಮಿಸಿ ಸಲಹೆ ನೀಡಿದ್ದಾರೆ. ಮೈಗೋ ಮುಖಾಂತರವೂ ಸಾರ್ವಜನಿಕರು ಹಂತ ಹಂತವಾಗಿ ಸಲಹೆಗಳನ್ನು ನೀಡಿದ್ದಾರೆ. ಒಟ್ಟು ಸಲಹೆ ಬಂದವುಗಳಲ್ಲಿ ಪ್ರಮುಖವಾಗಿ ಮೂರು ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಪಾಲಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಕಣ್ಣಿಗೆ ಕಾಣುವ ಸುಧಾರಣೆಗಳ ಬಗ್ಗೆ ಮಹಾನಗರ ಪಾಲಿಕೆ ಹೆಚ್ಚಿನ ಒತ್ತಡ ನೀಡಬೇಕು, ಒಂದು ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ಹಾಗೂ ನಗರೋತ್ಥಾನ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆಂದು ಈ ಮೂರು ವಿಷಯಗಳ ಬಗ್ಗೆ ಸಾರ್ವಜನಿಕರು ಉತ್ತಮ ಸಲಹೆಗಳನ್ನು ಮಹಾನಗರ ಪಾಲಿಕೆಗೆ ನೀಡಿದ್ದಾರೆ.

ಡೋರ್ ಟು ಡೋರ್ ಮುಖಾಂತರ ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದ ಮೂಲೆ ಮೂಲೆಗಳಿಂದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಸಾರ್ವಜನಿಕರ ಸಲಹೆಯೊಂದಿಗೆ ಸ್ಥಳೀಯ ಜನಪ್ರತಿನಿಧಿಗಳ ಎಲ್ಲರ ಸಮಾಗಮದಲ್ಲಿಯೇ ಸ್ಮಾರ್ಟ ಸಿಟಿ ಕಮಿಟಿಯ ಮುಂಚಿತವಾಗಿ ನಗರದ ಅವಿನಾಭಾವ ಸಂಬಂಧ ಹೊಂದಿದವರು ಸ್ಮಾರ್ಟ ಸಿಟಿಗೆ ಬೇಕಾದ ಸಲಹೆ ಸಹಕಾರ ನೀಡಿದ್ದಾರೆ. ಸಧ್ಯ ಮಹಾನಗರ ಪಾಲಿಕೆ ಅಂತಿಮ ಘಟಕ್ಕೆ ಬಂದು ತಲುಪಿದೆ.

ಬೆಳಗಾವಿ ಮಹಾನಗರ ಪಾಲಿಕೆ ಸ್ಮಾರ್ಟ ಸಿಟಿಯ ಸ್ಪರ್ಧೆಯಲ್ಲಿ ಆಯ್ಕೆಗೊಂಡ ನಂತರ ಕೇಂದ್ರ ಸರಕಾರ ಹಲವು ನಿಯಮಗಳನ್ನು ನೀಡಿತ್ತು, ಅದರಲ್ಲಿ ರೇಟ್ರೋ ಪೀಟಿಂಗ್ ಒಂದು ನಿರ್ದಿಷ್ಟ ಪ್ರದೇಶವನ್ನು ತೆಗೆದುಕೊಂಡು ಅದನ್ನು ಅಭಿವೃದ್ಧಿ ಮಾಡಬೇಕು, ಅಭಿವೃದ್ಧಿಯಾದ ಪ್ರದೇಶವನ್ನು ಪಡೆದುಕೊಂಡು ಅದನ್ನು ಮತ್ತೇ ಅಭಿವೃದ್ಧಿ ಪಡೆಸಬೇಕು ಹಾಗೂ ಗ್ರೀನ್ ಪಿಲ್ಡ್ ಅಭಿವೃದ್ಧಿಯ ಜೊತೆಗೆ ನಗರೋತ್ಥಾನ ಚುಟುವಟಿಕೆ ಕಡ್ಡಾಯವಾಗಿರಬೇಕೆಂದು ಸೂಚನೆಯನ್ನು ನೀಡಿತ್ತು.

ಅದರಂತೆ ಮಹಾನಗರ ಪಾಲಿಕೆ ಕೇಂದ್ರ ಸರಕಾರದ ಅನುದಾನ ನೋಡಿಕೊಂಡು ಇಂದಿನ ಅಭಿವೃದ್ಧಿ ಮಾಡಬೇಕೆನ್ನುವ ಪ್ರದೇಶದಿಂದ ಸರಕಾರಕ್ಕೆ ಯಾವ ರೀತಿಯಾಗಿ ಲಾಭವಾಗುತ್ತದೆ ಎಂದು ನೋಡಿಕೊಂಡು ಆ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದ ಎಲ್ಲ ಪ್ರದೇಶಗಳನ್ನು ಪಾಲಿಕೆಯಿಂದ ಅಭಿವೃದ್ಧಿ ಪಡಿಸಬೇಕಿದೆ ಎಂಬುದರ ಬಗ್ಗೆ ಪಾಲಿಕೆಯ ಸ್ಮಾರ್ಟ ಸಿಟಿ ಸಲ್ಲಿಸುವ ಪ್ರಸ್ತಾವನೆಯಲ್ಲಿದೆ.

ಪ್ರಧಾನ ಕಾರ್ಯದರ್ಶಿಗಳು ಮತ್ತು ಕೇಂದ್ರ ನಗರಾಭಿವೃದ್ಧಿ ಪ್ರಾಧಿಕಾರದ ಆದೇಶದಂತೆ ಅಂತಿಮ ಹಂತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆ ನಗರಕ್ಕೆ ಉತ್ಕøಷ್ಟವಾದಂತಹ ಹಾಗೂ ಗುಣಾತ್ಮಕವಾದ ಅಂಶಗಳನ್ನು ಸಾರ್ವಜನಿಕರ ಸಲಹೆಗಳನ್ನು ಮುಂದಿಟ್ಟುಕೊಂಡು ಮಾಡಿದರೆ ಯಶಸ್ಸು ದೊರಕುತ್ತದೆ ಎಂಬ ಸೂಚನೆಯ ಮೆರೆಗೆ ಒಂದು ಪ್ರದೇಶವನ್ನು ತೆಗದುಕೊಂಡು ಅಭಿವೃದ್ಧಿ ಪಡೆಸುವ ಕಾರ್ಯ ಪಾಲಿಕೆಯ ಮೇಲಿದೆ.
ಕೇಂದ್ರ ಸರಕಾರ ನೀಡಿದ ಮೂರು ಸೂಚನೆ ಅಳವಡಿಸಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಪಾಲಿಕೆಯ ಅಧಿಕಾರಿಗಳಲ್ಲಿ ಕಾಡತೊಡಗಿತ್ತು. ಇದಕ್ಕೆಲ್ಲ ಅಂಕಗಳಿವೆ ಅಂಕಗಳ ಮುಖಾಂತರ ಸ್ಮಾರ್ಟ ಸಿಟಿ ಪಟ್ಟಕ್ಕೆ ಮೇಲ್ದರ್ಜೆಗೆ ಏರಿಸುತ್ತವೆ ಎಂದು ಮನಗೊಂಡು ಒಂದು ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ರೂಪಿಸಿಕೊಂಡಿತ್ತು. ಇಷ್ಟು ದೊಡ್ಡ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾವಿರ ಕೋಟಿ ರೂ.ಗಳಲ್ಲಿ ಕಾಮಗಾರಿ ಮಾಡಿದರೇ, ಮುಂದೆ ಸದೃಢವಾಗಿ ಬೆಳೆದುಕೊಂಡು ಹೋಗಲು ಆದಾಯದ ಮೂಲವನ್ನು ಯಾವ ರೀತಿ ಕ್ರೂಢಿ ಕರಿಸಬೇಕು ಎಂಬುದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳಬೇಕೆಂಬ ಸವಾಲಿತ್ತು. ಸ್ಮಾರ್ಟ ಸಿಟಿಗೆ ಆಯ್ಕೆಯಾದ ಇತರೆ ನಗರಗಳಿಂದ ಬೆಳಗಾವಿ ನಗರ ಮೊದಲ ಸಾಲಿನಲ್ಲಿ ಬಂದು ನಿಲ್ಲುವಂತೆ ಮಾಡಬೇಕೆಂಬ ಛಲ ಪಾಲಿಕೆಯದ್ದಾಗಿತ್ತು. ಅದರಂತೆ ಕೇಂದ್ರ ಸರಕಾರ ಬೆಳಗಾವಿ ಮಹಾನಗರ ಪಾಲಿಕೆ ಉತ್ಕøಷ್ಟವಾದ ಯೋಜನೆಯನ್ನು ನೀಡಿದೆ ಎಂದು ತಿಳಿಬೇಕೆಂದು ಯೋಜನೆಯನ್ನು ರೂಪಿಸಿಕೊಂಡಿದೆ.
ಸ್ಮಾರ್ಟ್‍ಸಿಟಿ ಯೋಜನೆ ಇಲ್ಲಿ ಅನುಷ್ಠಾನಗೊಂಡರೆ, ಬಹುಸಂಸ್ಕøತಿಗಳ ನಗರ ಬೆಳಗಾವಿ ಮೂಲಭೂತ ಸೌಲಭ್ಯಗಳಿಗಾಗಿ ಜಾಗತಿಕವಾಗಿ ಗುರುತಿಸಿಕೊಳ್ಳಲಿದೆ. ಇದರಿಂದ ಉದ್ಯೋಗ ಸೃಷ್ಠಿಸಿ, ಕೈಗಾರಿಕೆಗಳ ಬರುವ ಸಾಧ್ಯತೆಗಳು ಹೆಚ್ಚಿದೆ.

ಇದರ ಏರಿಯಾ ಬೇಸ್ಡ್ ಅಭಿವೃದ್ಧಿಗೆ 1,656 ಕೋಟಿ ರೂ.ಗಳ ಅಂದಾಜು ಯೋಜನೆ ರೂಪಿಸಲಾಗಿದೆ. ಇದರಲ್ಲಿ 636.50 ಕೋಟಿ ರೂ.ಗಳು ಸ್ಮಾರ್ಟ್‍ಸಿಟಿ ನಿಯಿಂದ ಬರಲಿದ್ದು, ಉಳಿದ ಮೊತ್ತವನ್ನು ರಾಜ್ಯ ಸರಕಾರ ನೀಡುತ್ತದೆ.

ಪ್ಯಾನ್‍ಸಿಟಿಗೆ ಸಂಬಂಸಿದಂತೆ 1,879 ಕೋಟಿ ರೂ.ಗಳ ಯೋಜನೆ ತಯಾರಿಸಿದ್ದು, ಇದರಲ್ಲಿ 371.50 ಕೋಟಿ ರೂ.ಗಳು ಸ್ಮಾರ್ಟ್‍ಸಿಟಿ ನಿಯಿಂದ ಬರಲಿದೆ. ಒಟ್ಟಾರೆ ಏರಿಯಾಬೇಸ್ಡ್ ಅಭಿವೃದ್ಧಿ ಹಾಗೂ ಪ್ಯಾನ್‍ಸಿಟಿಗೆ ಸಂಬಂಸಿದಂತೆ 3,534.50 ಕೋಟಿ ರೂ.ಗಳ ಅಂದಾಜು ಯೋಜನೆ ಸಿದ್ಧಗೊಂಡಿದೆ. ಇದರಲ್ಲಿ ಒಟ್ಟು 1008 ಕೋಟಿ ರೂ. ಸ್ಮಾರ್ಟ್‍ಸಿಟಿ ನಿಯಿಂದ ಬರುತ್ತದೆ. ಉಳಿದ 2526 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಭರಿಸುತ್ತದೆ. ಇದಕ್ಕೆ ಚಾಲ್ತಿಯಲ್ಲಿರುವ ಯೋಜನೆಗಳು, ವಿಶೇಷ ಅನುದಾನ, ಸಾರ್ವಜನಿಕ ಸಹಭಾಗಿತ್ವ ಹಾಗೂ ಇತರೆ ಅಭಿವೃದ್ಧಿ ಸಂಗತಿಗಳು ಸೇರಿವೆ.

ಸ್ಮಾರ್ಟ್‍ಸಿಟಿ ಯೋಜನೆಯ ನಿರ್ವಹಣೆಗೆ ರಾಜ್ಯ ಸರಕಾರ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಸಮಾನ ಸಹಭಾಗಿತ್ವ ಹೊಂದಿದ ಲಿಮಿಟೆಡ್ ಕಂಪನಿಯೊಂದರ ಸ್ಥಾಪನೆ ಮಾಡಲಿವೆ. ಪಾಲಿಕೆಯಿಂದ ಮಹಾಪೌರ, ಆಯುಕ್ತ ಹಾಗೂ ಇಬ್ಬರು ಸದಸ್ಯರು ಇರುತ್ತಾರೆ.

ಸ್ಮಾರ್ಟ್‍ಸಿಟಿಯಿಂದ ಬೆಳಗಾವಿ ಬಹುಮುಖವಾಗಿ ಅಭಿವೃದ್ಧಿಯಾಗುತ್ತದೆ. ಏರಿಯಾ ಬೇಸ್ಡ್ ಯೋಜನೆಯಲ್ಲಿ ದಿನದ 24 ಗಂಟೆ, ನೀರು, ಇ-ಬಿಲ್ಲಿಂಗ್, ಯುಜಿಡಿ, ಸಿವೇಜ್‍ಟ್ರೀಟ್‍ಮೆಂಟ್ ಪ್ಲ್ಯಾಂಟ್, ನೀರಿನ ಮರುಬಳಕೆ, ಸಮರ್ಪಕ ವಿದ್ಯುತ್, ಸೊಲಾರ ಎನರ್ಜಿ, ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ, ಸೆಟ್‍ಲೈಟ್ ಸಂಪರ್ಕದ 8 ಬಸ್ ಟರ್ಮಿನಲ್‍ಗಳು, ಸೈಕಲ್ ಟ್ರ್ಯಾಕ್, ಫುಟ್‍ಪಾತ್, ಸಿಡಿಪಿ ಅನುಷ್ಠಾನ, ಮಳೆನೀರು ಕೊಯ್ಲು, ಹಸಿರು, ಉದ್ಯಾನಗಳ ಅಭಿವೃದ್ಧಿಸಿ, ಶುದ್ಧ ಹವೆ ಇರುವಂತೆ ನೋಡಿಕೊಳ್ಳುವುದು, ಗೃಹ, ವಾಣಿಜ್ಯ ಬಳಕೆಗೆ ಸಿಎನ್‍ಜಿ ಮತ್ತು ಪಿಎನ್‍ಜಿ ಗ್ಯಾಸ್ ಪೈಪ್‍ಲೈನ್ ಅಳವಡಿಕೆ, 144 ಸರ್ವಿಸ್ ಹೊಂದಿದ ಬೆಳಗಾವಿ ಒನ್ ಸೆಂಟರ್, 18 ಕಮರ್ಸಿಲ್ ಕಾರಿಡಾರ್, 5 ಕಡೆಗೆ ಬಹುಪಯೋಗಿ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಕ್ರೀಡೆಗೆ ಅವಕಾಶ, ಆರ್ಟ್‍ಗ್ಯಾಲರಿ, ಪ್ರದರ್ಶನ ಮಳಿಗೆ, ಧ್ಯಾನ ಕೇಂದ್ರಸಿ, ವಿದ್ಯುತ್ ಮತ್ತು ಇತರೆ ಸಂಪರ್ಕ ವೈಯರ್‍ಗಳನ್ನು ನೆಲದಲ್ಲಿ ಅಳವಡಿಸುವುದು ಒಳಗೊಂಡು ಅನೇಕ ಅಭಿವೃದ್ಧಿಗಳು ಅನುಷ್ಠಾನವಾಗುತ್ತವೆ.

ಪ್ಯಾನ್‍ಸಿಟಿ ಯೋಜನೆಯಲ್ಲಿ ಇ-ಆಡಳಿತ, ಸಂಚಾರ ನಿಯಂತ್ರಣ, ಸಾರಿಗೆ ಸುಧಾರಣೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳುನಡೆಯುತ್ತವೆ. ಹಂತ ಹಂತವಾಗಿ ಈ ಯೋಜನೆ ಇಡೀ ನಗರಕ್ಕೆ ಅಭಿವೃದ್ಧಿಯ ಹೊಸ ಸ್ಪರ್ಶ ನೀಡಿ ಬೆಳಗಾವಿ ನಗರ ಸ್ಮಾರ್ಟ ಆಗುವ ಯೋಜನೆಯನ್ನು ರೂಪಿಸಿಕೊಂಡಿದೆ

ಸ್ಮಾರ್ಟ ಸಿಟಿಯ ಪ್ರಸ್ತಾವನೆಯಲ್ಲಿರುವ ಪ್ರಮುಖ ಅಂಶಗಳು.

1. ಉತ್ಪಾದನಾ ವಲಯದ ನೈಪುಣ್ಯತೆ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಠಿ
2. ಅಭಿವೃದ್ಧಿ ಪಡಿಸಿದ ಪ್ರದೇಶದಲ್ಲಿ 150 ಸಾರ್ವಜನಿಕ ಶೌಚಾಲಯಗಳು
3. ವಿದ್ಯುತ್ ಸಂಪರ್ಕದ ಸೋಲಾರ್ ಸಿಟಿ ಪ್ರದೇಶ
4. 24 ತಾಸು ಕುಡಿಯುವ ನೀರು ಸರಬರಾಜು
5. ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ
6. ಹೈಟೇಕ್ ಕೇಂದ್ರ ಬಸ್ ನಿಲ್ದಾಣ
7. ನಗರದ ನಾಲ್ಕು ರೆಲ್ವೇ ಓವರ ಬ್ರೀಡ್ಜ್
8. ಮೂರು ಪ್ಲೈ ಓವರ ರಸ್ತೆ
9. ಮೇಲ್ಟಿಲೇವಲ ಪಾರ್ಕಿಂಗ್
10. ಕಿಲ್ಲಾ ಕೋಟೆಯಲ್ಲಿ ಸುಸಜ್ಜಿತವಾದ ಉದ್ಯಾನವನಗಳು
11. ಸೈಕಲಿಂಗ್ ಟ್ರ್ಯಾಕ್, ವಾಕಿಂಗ್ ಟ್ರ್ಯಾಕ್
12. ಕೊಳಚೆ ಪ್ರದೇಶದ ಅಭಿವೃದ್ಧಿ
13. 144 ಸರ್ವಿಸ್ ಹೊಂದಿದ ಬೆಳಗಾವಿ ಒನ್ ಸೆಂಟರ್
14. 18 ಕಮರ್ಸಿಲ್ ಕಾರಿಡಾರ್
15. 5 ಕಡೆಗೆ ಬಹುಪಯೋಗಿ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ
16. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ
17. ಇ-ಬಿಲ್ಲಿಂಗ್
18. ಯುಜಿಡಿ
19. ಸಿವೇಜ್‍ಟ್ರೀಟ್‍ಮೆಂಟ್
20.ಮಳೆ ನೀರು ಕೊಯ್ಲು
21. ಧ್ಯಾನ ಕೇಂದ್ರ
22.ಇತರೆ ಕೇಂದ್ರ ಸಂಪರ್ಕ ವೈಯರಗಳನ್ನ ನೆಲದಲ್ಲಿ ಅಳವಡಿಸುವುದು
23. ಸಿಎನ್‍ಜಿ ಮತ್ತು ಪಿಎನ್‍ಜಿ ಗ್ಯಾಸ್ ಅ¼ವÀಡಿಕೆ
24.ಸೆಟ್ ಲೈಟ್ ಸಂಪರ್ಕ
25. ಶುದ್ಧ ಹವಾಗುಣ
26.ಹೆರಟೇಜ್ ಪಾರ್ಕ ನಿರ್ಮಾಣ

ಸೇರಿದಂತೆ ಮೊದಲಾದ ಯೋಜನೆಗಳು ಮಂಗಳವಾರ ಬೆಳಿಗ್ಗೆ ಮಹಾನಗರ ಪಾಲಿಕೆಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಕಿಲ್ಲಾ ಕೋಟೆಯ ಮುಂಬಾಗದಲ್ಲಿರುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ವಾಯು ವಿಹಾರ ಮಾಡಲು ಫುಟ್‍ಪಾತ್ ನಿರ್ಮಾಣ ಸುಸಜ್ಜಿತ ಉದ್ಯಾನಗಳು ಸೇರಿದಂತೆ ಐತಿಹಾಸಿಕ ಕೋಟೆಗೆ ಸ್ಮಾರ್ಟ ಸಿಟಿ ಯೋಜನೆಯಿಂದ ಹೊಸ ಸ್ಪರ್ಷ ನೀಡಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ತೆರಳಲಿದೆ.

ಪ್ಯಾನ್ ಸಿಟಿಯ ಸಮಗ್ರ ವಿವರಣೆ
“ಪ್ಯಾನ್‍ಸಿಟಿಗೆ ಸಂಬಂಸಿದಂತೆ 1,879 ಕೋಟಿ ರೂ.ಗಳ ಯೋಜನೆ ತಯಾರಿಸಿದ್ದು, ಇದರಲ್ಲಿ 371.50 ಕೋಟಿ ರೂ.ಗಳು ಸ್ಮಾರ್ಟ್‍ಸಿಟಿ ನಿಯಿಂದ ಬರಲಿದೆ. ಒಟ್ಟಾರೆ ಏರಿಯಾಬೇಸ್ಡ್ ಅಭಿವೃದ್ಧಿ ಹಾಗೂ ಪ್ಯಾನ್‍ಸಿಟಿಗೆ ಸಂಬಂಸಿದಂತೆ 3.534.50 ಕೋಟಿ ರೂ.ಗಳ ಅಂದಾಜು ಯೋಜನೆ ಸಿದ್ಧಗೊಂಡಿದೆ. ಇದರಲ್ಲಿ ಒಟ್ಟು 1008 ಕೋಟಿ ರೂ. ಸ್ಮಾರ್ಟ್‍ಸಿಟಿ ನಿಯಿಂದ ಬರುತ್ತದೆ. ಉಳಿದ 2526 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಭರಿಸುತ್ತದೆ. ಇದಕ್ಕೆ ಚಾಲ್ತಿಯಲ್ಲಿರುವ ಯೋಜನೆಗಳು, ವಿಶೇಷ ಅನುದಾನ, ಸಾರ್ವಜನಿಕ ಸಹಭಾಗಿತ್ವ ಹಾಗೂ ಇತರೆ ಅಭಿವೃದ್ಧಿ ಸಂಗತಿಗಳು ಸೇರಿವೆ.”
3.534.50 ಕೋಟಿ ರೂ.ಗಳ ಅಂದಾಜು ಯೋಜನೆಯಲ್ಲಿನ ಬೆಳಗಾವಿ ಸ್ಮಾರ್ಟ ಸಿಟಿ ನೀಲ ನಕ್ಷೆಯಲ್ಲಿ ರಿಂಗ್ ರಸ್ತೆಯ ಪ್ರಸ್ತಾಪವೆ ಇಲ್ಲ. ಈ ಕುರಿತು ಕನ್ನಡಮ್ಮ ದಿನಪತ್ರಿಕೆ ಪಾಲಿಕೆ ಆಯುಕ್ತರನ್ನು ಕೇಳಿದಾಗ ಈ ರಿಂಗ್ ರಸ್ತೆ ವಿಷಯ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತಿರುವುದರಿಂದ ಯೋಜನೆಯಲ್ಲಿ ಈ ವಿಷಯವನ್ನು ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.

loading...

LEAVE A REPLY

Please enter your comment!
Please enter your name here