ಪಾಲಿಕೆಯ ಫಾಗಿಂಗ್ ಗೆ ಸಾಥ್ ಕೊಟ್ಟ ಅಗ್ನಿಶಾಮಕ

0
5


ಬೆಳಗಾವಿ
ಕೊರೋನೊ ಭೀತಿ ತಡೆಗಟ್ಟುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಬುಧವಾರ ಚನ್ನಮ್ಮ ವೃತ್ತದಲ್ಲಿ ಫಾಗಿಂಗ್ ಮಾಡಿ ನಗರವನ್ನು ಶುಚಿಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್.ಹೇಳಿದರು.

ಬುಧವಾರ ನಗರದ ಚನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಗರಾಭಿವೃದ್ಧಿ ಇಲಾಖೆಯ ಸೂಚನೆ ಮೆರೆಗೆ ಮಹಾನಗರ ಪಾಲಿಕೆಯಿಂದ ಫಾಗಿಂಗ್ ಮಾಡಲಾಗುತ್ತಿದೆ. ಕೊರೋನೊ ಸೋಂಕು, ಮಲೆರಿಯಾ, ಕಾಲರಾ ಸಲುವಾಗಿ ನಗರದ ಎಲ್ಲ ಕಡೆಗಳಲ್ಲಿ ಫಾಗಿಂಗ್ ಮಾಡಲಾಗುತ್ತಿದೆ ಎಂದರು.

ನಗರಾಭಿವೃದ್ಧಿ ಸಚಿವರು ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಪಾಲಿಕೆಯ ಅಧಿಕಾರಿಗಳು ಶ್ರಮಿಸಬೇಕೆಂದು ಸೂಚನೆ ನೀಡಿದ್ದರು. ಅದರಂತೆ ಅಗ್ನಿ ಶಾಮಕ ದಳ ಸಿಬ್ಬಂದಿಗಳು ನಗರದ ಪ್ರಮುಖ ವೃತ್ತದಲ್ಲಿ ಫಾಗಿಂಗ್ ಮಾಡುತ್ತಾರೆ. ಬೆಳಗಾವಿ ಪಾಲಿಕೆಯ 58 ವಾರ್ಡುಗಳಲ್ಲಿ 58 ಜನರು ಫಾಗಿಂಗ್ ಮಾಡಲಿದ್ದಾರೆ. ಜನರು ಭಯ ಪಡುವ ಅಗತ್ಯ ಇಲ್ಲ. ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ವಿನಂತಿಸಿಕೊಂಡರು.

loading...