ಪಾಲಿಕೆ ಆಯುಕ್ತರಿಂದ ಭಿಕ್ಷುಕರಿಗೆ ಆಹಾರ ಸಾಮಗ್ರಿ ವಿತರಣೆ

0
1

ಪಾಲಿಕೆ ಆಯುಕ್ತರಿಂದ ಭಿಕ್ಷುಕರಿಗೆ ಆಹಾರ ಸಾಮಗ್ರಿ ವಿತರಣೆ
ಬೆಳಗಾವಿ: ನಗರದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ಮಹಾನಗರ ಪಾಲಿಕೆಯ ವತಿಯಿಂದ ಆಯುಕ್ತ ಜಗದೀಶ್ ಕೆ.ಎಚ್.ಅವರು ಮಂಗಳವಾರ ಅಕ್ಕಿ ಪ್ಯಾಕೆಟ್ ಗಳನ್ನು ವಿತರಿಸಿದರು.

ಕೋವಿಡ್-೧೯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಮಹಾನಗರ ಪಾಲಿಕೆಯ ವತಿಯಿಂದ ನಗರದ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರು ಭಿಕ್ಷುಕರು ಹಾಗೂ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ಮತ್ತು ಆಹಾರವನ್ನು ವಿತರಿಸಿದರು.

*ಡೆಟಾಲ್ ಸ್ಪ್ರೇ, ಸ್ವಚ್ಛತಾ ಕಾರ್ಯ*

ನಂತರ ಜನಜೀವಾಳದೊಂದಿಗೆ ಮಾತನಾಡಿ, ಪಾಲಿಕೆ & ಅಗ್ನಿಶಾಮಕ ಜಂಟಿ ಕಾರ್ಯಾಚರಣೆ, ಡೆಟಾಲ್ ಸ್ಪ್ರೇ, ಸ್ವಚ್ಛತಾ ಕಾರ್ಯ ನಡೆಯಲಿದೆ. ಕರೋನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಸಾರ್ವಜನಿಕ ಸ್ವಚ್ಛತೆಯನ್ನು ಕಾಪಾಡಲು ನಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಯಲಿದೆ.
ಮಹಾನಗರ ಪಾಲಿಕೆ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ವಾಹನಗಳು ನಗರದಾದ್ಯಂತ ಅಗತ್ಯವಿರುವ ಸ್ಥಳಗಳಲ್ಲಿ, ರಸ್ತೆಗಳಲ್ಲಿ, ಬಸ್ ಸ್ಟ್ಯಾಂಡ್ ಮತ್ತಿತರ ಸ್ಥಳಗಳಲ್ಲಿ ವಾಹನಗಳು ಕಾರ್ಯಾಚರಣೆ ನಡೆಸಲಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆ ೮ ಗಂಟೆಯಿAದ ಡೆಟಾಲ್ ಸ್ಪ್ರೇ ನಡೆಯಲಿದೆ. ಬೆಳಿಗ್ಗೆ ೮ ಗಂಟೆಗೆ ಚನ್ನಮ್ಮ ವೃತ್ತದಿಂದ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
೦೫
******************-

loading...