ಪಾಲಿಕೆ ಸ್ಥಾಯಿ‌ ಸಮಿತಿ‌ ಮೂರು ಅಧ್ಯಕ್ಷ ‌ಸ್ಥಾನ ಕನ್ನಡಿಗರ ಪಾಲು

0
376

ಕನ್ನಡಮ್ಮ ಸುದ್ದಿ
ಬೆಳಗಾವಿ:1 ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ‌ ಸಮಿತಿಯ ಅಧ್ಯಕ್ಷರ ಆಯ್ಕೆ ಮೇಯರ್ ‌ಸಂಜೋತ‌ ಬಾಂದೇಕರ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ‌‌‌ ಜರುಗಿತು.
ಲೆಕ್ಕ ಪತ್ರ ಸ್ಥಾಯಿ‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶಿವಾಜಿ ಕುಡುಸ್ಕರ, ಮೈನಾಬಾಯಿ ಚೌಗುಲೆ, ಸರಳಾ ಹೇರೆಕರ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ‌ ಮೈನಾಬಾಯಿ ಚೌಗುಲೆ ಅರ್ಜಿ ವಾಪಸ್ಸ ಪಡೆದುಕೊಂಡರು.ಇದರಲ್ಲಿ ಶಿವಾಜಿ‌ ಕುಡುಸ್ಕರಗೆ ಮೂರು ಜನ ಬೆಂಬಲ ಸೂಚಿಸಿದರೆ ಸರಳಾ ಹೇರೇಕರ ಪರವಾಗಿ ನಾಲ್ಕ ಜನ ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಕನ್ನಡ ನಗರ ಸೇವಕಿ ಸರಳಾ ಹೇರೇಕರ ಆಯ್ಕೆಯಾದರು.
ಲೋಕೋಪಯೋಗಿ ಹಾಗೂ ನಗರ ಅಭಿವೃದ್ಧಿ ಸ್ಥಾಯಿ‌ ಸಮಿತಿ ಅಧ್ಯಕ್ಷ‌ ಸ್ಥಾನಕ್ಕೆ ರಾಕೇಶ ಪಲ್ಲಂಗ, ಪಿಂಟು‌‌ ಸಿದಕ್ಕಿ, ಜಯಶ್ರೀ‌ ಮಾಳಗಿ ಅರ್ಜಿ ಸಲ್ಲಿಸಿದರು. ಇದರಲ್ಲಿ ಜಯಶ್ರೀ‌ ಮಾಳಗಿ ಅರ್ಜಿ‌ ವಾಪಸ ಪಡೆದರು. ರಾಕೇಶ ಪಲ್ಲಂಗಗೆ ಮೂರು‌ ಸದಸ್ಯರು ಬೆಂಬಲ‌ ಸೂಚಿಸಿದರೇ ಪಿಂಟು ಸಿದಕ್ಕಿಗೂ‌ ಮೂರು ಜನ ಸದಸ್ಯರು ಬೆಂಬಲ ಸೂಚಿಸಿದರು. ಕೊನೆಗೆ ಚೀಟಿ ಎತ್ತುವುದರ ಮೂಖಾಂತರ ಪಿಂಟು ಸಿದ್ದಕ್ಕಿ ಆಯ್ಕೆಯಾದರು.
ಸಾರ್ವಜನಿಕ‌ ಆರೋಗ್ಯ ಸ್ಥಾಯಿ‌ ಸಮಿತಿ ಅಧ್ಯಕ್ಷ ‌ಸ್ಥಾನಕ್ಕೆ ರಾಜು‌ ಬಿರ್ಜೆ‌ಗೆ ಮೂರು‌ ಜನ‌ ಸದಸ್ಯರು‌ ಬೆಂಬಲ ಸೂಚಿಸಿದರೇ, ಬಸಪ್ಪ ಚಿಕಲದಿನ್ನಿ ಪರವೂ‌ ಮೂರು ಸದಸ್ಯರು ಬೆಂಬಲ‌ ಸೂಚಿಸಿದರು ಈ ಸಮಿತಿಗೂ ಚೀಟಿ ಎತ್ತುವ ಮೂಖಾಂತರ ರಾಜು ಬಿರ್ಜೆ‌ಅಧ್ಯಕ್ಣರಾದರು.
ತೆರಿಗೆ ವಿತರಣೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ವೈಶಾಲಿ‌ ಮಿರ್ಜೆ, ಸಂಜಯ ಸವಾಷೇರಿ ಅರ್ಜಿ ಸಲ್ಲಿಸಿದರು. ವೈಶಾಲಿ ಪರವಾಗಿ ಇಬ್ಬರು ಸದಸ್ಯರು‌ ಬೆಂಬಲ‌ ಸೂಚಿಸಿದರೆ, ಸಂಜಯ ಸವಾಸೇರಿಗೆ ಮೂರು ಜನ ಸದಸ್ಯರು ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ಸಂಜಯ ಸವಾಸೇರಿ ತೆರಿಗೆ ವಿತರಣೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದರು.

 

loading...