ಪಿಯುಸಿ ಫಲಿತಾಂಶ ಬಂದಿದೆ, ಸೋಲೊ, ಗೆಲುವೋ, ಕೆಟ್ಟ ಯೋಚನೆ, ಕೆಟ್ಟ ನಿರ್ಧಾರ ಮಾಡಬೇಡಿ, Be cool …

0
118

ಪಿಯುಸಿ ರಿಸಲ್ಟ ಬಂದಿದೆ. ಕೆಲ ವಿದ್ಯಾರ್ಥಿಗಳು ಉತ್ತಮ ಅಂಕಗಳು ಪಡೆದುಕೊಂಡು ಸಂಭ್ರಮ ಪಡುತ್ತಿದ್ದರೆ ಕೆಲ ವಿದ್ಯಾರ್ಥಿಗಳು ಮಾಡಿದ ಪ್ರಯತ್ನಕ್ಕೆ ಸಂತೋಷ‌ ವ್ಯಕ್ತಪಡಿಸಿದ್ದಾರೆ ಆದರೆ ಕೆಲ ವಿದ್ಯಾರ್ಥಿಗಳು ಅಂದಕೊಂಡದಕ್ಕಿಂತ ಕಡಿಮೆ ಅಂಕಗಳು ಬಂದಿಲ್ಲಾ ಅಂತಾ ಬೇಸರ ಪಟ್ಟಕೊಂಡು ಕೆಟ್ಟ ಯೋಚನೆ ಮಾಡಿಕೊಂಡು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ . ಇದೇ ದಾರಿ ಚಿಕ್ಕಜಾಲದ ತೇಜಸ್ ಗೌಡ ಎಂಬ ವಿದ್ಯಾರ್ಥಿ ತುಳಿದು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಇದೇ ಅಂತಿಮವಲ್ಲ.ಇಲ್ಲೇ ಜೀವನ ಮುಗಿಯೋಲ್ಲಾ ಇವಾಗ ಆರಂಭವಾಗಿದೆ ಜೀವನದ‌ ಪಯಣ ಆರಂಭದಲ್ಲೆ ತಪ್ಪು ಮಾರ್ಗವನ್ನು ತುಳಿಯಬೇಡಿ. ನಿಮಗೆ ಕಡಿಮೆ ಅಂಕ ಬಂದಿರಬಹುದು ಅಥವಾ ಫೆಲ್ ಆಗಿರಬಹುದು, ಅದಕ್ಕೆಲಾ ತಲೆ ಕೇಡಿಸಿಕೊಳ್ಳಬೇಡಿ. ಮುಂದೊಂದು ಪೂರಕ ಪರೀಕ್ಷೆ ನಿಮಗಾಗಿ ಕಾಯುತ್ತಿರುತ್ತದೆ. ಅದಕ್ಕೆ ತಯಾರಿಯಾಗಿ. ಅದನ್ನು ಅವರಿವರ ಮಾತು ಕೇಳಿ ಟೀಕೆ ಟಿಪ್ಪಣಿ ಕೇಳಿ ಮನ‌ನೊಂದು ಆತ್ಮಹತ್ಯೆ, ವಿಷ ಸೇವನೆ ಅದು ಇದು ಅಂತಾ ಪ್ರಾಣ ಕಳೆದುಕೊಳ್ಳಬೇಡಿ. ಆಗ ಒಂದು ಸರತಿ ಯೋಚನೆ ಮಾಡಿ ನಿಮ್ಮ ತಂದೆ ತಾಯಿ ಬಂದು ಬಳಗ ಅಣ್ಣ ತಮ್ಮ ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯ ಬಗ್ಗೆ ಯೋಚನೆ ಮಾಡಿ. ನಿಮ್ಮ ಹೆತ್ತವರು ಬಗ್ಗೆ ಸ್ವಲ್ಪ ಯೋಚನೆ ಮಾಡಿ.ನೀವು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಿ ನಿಮ್ಮನ್ನು ಅವರು ಬೆಳೆಸಿರುತ್ತಾರೆ ವರ್ಷ ಅವರು ನಿಮ್ಮನ್ನು ಸಾಕಿ ಸಲುಹಿರುತ್ತಾರೆ ನೀವು ತೆಗೆದುಕೊಳ್ಳುವ ತಪ್ಪು ನಿರ್ಧಾರ ನಿಮ್ಮ ಪೋಷಕರ ಮೇಲೆ ಎಷ್ಟರ ಮಟ್ಟಿಗೆ ಕೆಟ್ಟ ಪ್ರಭಾವ ಬೀರಬಹುದು ಯೋಚಿಸಿ.
ಕಷ್ಟಕ್ಕೆ ಬೆನ್ನು ಹಿಂದೆ ಅಪ್ಪ, ಅಮ್ಮ ನಿಲ್ಲುತ್ತಾರೆ ಮುಂದೆಯೋ ನಿಲ್ತಾರೆ. ಕಡಿಮೆ ಅಂಕ ಅಥವಾ ಫೇಲ್ ಎಂಬ ಕೊರಗು ಮಾಡಿಕೊಳ್ಳಬೇಡಿ.
ಯಾರೊ ಏನೋ ಅಂತಾರೆ ನಿಮಗೆ ಆಗದವರುವರು ಟೀಕೆ ಮಾಡ್ತಾರೆ ಅಂದ್ರೆ ಅದರ ಬಗ್ಗೆ ತಲೆ ಕೆಡೆಸಿಕೊಳ್ಳಬೇಡಿ ಬಾಯಿ ಇರೊದೆ ಮಾತಾಡೊಕೆ‌, ಅವರ ಕೆಲಸಾನೆ ಮಾತಾಡೋದು, ಓದಿ ಕಠಿಣ ಪರಿಶ್ರಮಪಟ್ಟು ಮುಂದೆ ಬನ್ನಿ ನಿಂದಕರಿಗೆ ಬಾಯಿ ಮೇಲೆ ಬೆರಳಿಡುವಂತೆ ಮಾಡಿ.
ಪೋಷಕರು ಅಷ್ಟೆ ಮಕ್ಕಳು ಪಾಸೋ ಫೇಲೊ ಅವರಿಗೆ ಮನಸ್ಸಿಗೆ ನೋವು ಆಗುವ ಮಾತು ಆಡಬೇಡಿ, ಬದಲಾಗಿ ಧೈರ್ಯ ಹೇಳಿ ಈ ಸಮಯದಲ್ಲಿ ಅವರಿಗೆ ನಿಮ್ಮ ಅವಶ್ಯಕತೆಯಿದೆ.

ಪೋಷಕರೆ ಮಕ್ಕಳಿಗೆ ಪ್ಲೀಸ್ ನಿಂದಿಸಬೇಡಿ, ಫ್ರೆಂಡ್ಸ ನೀವು ಕೆಟ್ಟ ಯೋಚನೆ ಕೆಟ್ಟ ಮಾರ್ಗ ತುಳಿಯಬೇಡಿ, ಅದರಿಂದ ನಿಮಗೆ ಸೋಲು.ಮತ್ತೊಮ್ಮೆ ಹೇಳತಿನಿ ತಪ್ಪು ದಾರಿ ತುಳಿಬೇಡಿ.be cool …..

ನಾವು ಚೆನ್ನಾಗಿರಬೇಕು ಅಂದ್ರೆ ಸುತ್ತ ಮುತ್ತಲು ನಿಂದಿಸುವವರು ಇರಬೇಕು. ಅಂತಾ ಅಬ್ರಾಹಂ ಲಿಂಕನ್ ಹೇಳಿದ್ದಾರೆ.

loading...