ಪಿ.ಎಂ. ಕಿಸಾನ್ ಸಮ್ಮಾನ್: ಅರ್ಜಿ ಕೊಡಲು ರೈತರ ಹಿಂದೇಟು

0
47

ಕನ್ನಡಮ್ಮ ಸುದ್ದಿ-ತೇರದಾಳ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ಗೆ ತಾಲೂಕಿನಲ್ಲಿ ಅರ್ಜಿ ನೀಡಲು ರೈತರು ಹಿಂದೇಟು ಹಾಕುತ್ತಿದ್ದು, ಅವಧಿಯೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಈ ಕುರಿತು ತೇರದಾಳ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಜಮಖಂಡಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಮಾಳಿ, ತಾಲ್ಲೂಕಿನಲ್ಲಿ ಫಲಾನುಭವಿ ಅರ್ಹ ರೈತರ ಸಂಖ್ಯೆ ೬೨೬೮೭ ಇದ್ದು, ಈ ಪೈಕಿ ದಿನಾಂಕ ೨೧ರವರೆಗೆ ಕೇವಲ ೩೧೧೬೫ ರೈತರು ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ ೧೭೭೪೨ ಅರ್ಜಿಗಳನ್ನು ಅಪ್ಲೊÃಡ್ ಮಾಡಲಾಗಿದೆ. ಕಾರಣ ಎಲ್ಲ ಕಡೆಗೆ ಅರ್ಜಿ ಅಪ್ಲೊÃಡ್ ಪ್ರಕ್ರಿಯೆ ಏಕಕಾಲಕ್ಕೆ ನಡೆದಿದ್ದು ತಾಂತ್ರಿಕ ತೊಂದರೆಯಾಗುತ್ತಿದೆ. ಅದಕ್ಕೆ ರೈತರು ಶೀಘ್ರವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಅರ್ಜಿಯ ಹಿಂಬದಿ ಪುಟವನ್ನು ಸರಿಯಾಗಿ ಓದಿಕೊಂಡು ತುಂಬಿ, ಸಹಿ ಮಾಡಬೇಕು ಎಂದು ಸ್ಪಷ್ಟಪಡಿಸಿದರು. ಸಾಂವಿಧಾನಿಕ ಹುದ್ದೆಯಲ್ಲಿರುವವರು, ವಕೀಲರು, ವೈದ್ಯರು, ಸರ್ಕಾರಿ ನೌಕಕರು, ಆದಾಯ ತೆರಿಗೆ ಪಾವತಿಸುವವರು, ೧೦ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಹಣ ಪಡೆಯುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದರು.
ಬಿತ್ತನೆ ಬೀಜ ಮರಳಿ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಬಿತ್ತನೆ ಮಾಡಲು ತಂದಿದ್ದ ೧೦೦೦ ಕ್ವಿಂಟಲ್ ಸೋಯಾಬೀನ್ ಬೀಜದಲ್ಲಿ ೨೦೦ ಕ್ವಿಂಟಲ್ ಮಾತ್ರ ಮಾರಾಟವಾಗಿದ್ದು, ಉಳಿದ ಬೀಜವನ್ನು ಮರಳಿ ಪಡೆಯಲಾಗುವುದು. ಕಾರಣ ಸೋಯಾಬೀನ್ ಸೇರಿದಂತೆ, ಹೆಸರು, ಉದ್ದು ಬಿತ್ತನೆ ಮಾಡುವ ಕಾಲಾವಧಿ ಮುಗಿಯಿತು ಎಂದು ಅಧಿಕಾರಿಗಳು ಇದೆ ಸಂದರ್ಭದಲ್ಲಿ ತಿಳಿಸಿದರು.
ತೇರದಾಳ ವಿಶೇಷ ತಹಶೀಲ್ದಾರ್ ಮೆಹಬೂಬಿ ಕಿಸಾನ್ ಸಮ್ಮಾನ್ ಅರ್ಜಿ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಕಂದಾಯ ನಿರೀಕ್ಷಕ ಶ್ರಿÃಕಾಂತ ಮಾಯನ್ನವರ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಮಠಪತಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಎಂ.ಬಿರಾದಾರ ಇದ್ದರು.

loading...