ಪುಟ್ಟರಂಗಶೆಟ್ಟಿ ರಾಜಿನಾಮೇ ನೀಡುವಂತೆ ಮಾಜಿ ಶಾಸಕ ಒತ್ತಾಯ

0
19

ಪುಟ್ಟರಂಗಶೆಟ್ಟಿ ರಾಜಿನಾಮೇ ನೀಡುವಂತೆ ಮಾಜಿ ಶಾಸಕ ಒತ್ತಾಯ
ಕನ್ನಡಮ್ಮ ಸುದ್ದಿ-ಬೆಳಗಾವಿ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಸಚಿವ ಪುಟ್ಟರಂಗಶೆಟ್ಟಿಯವರು ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಶಾಸಕ ಸಂಜಯ ಪಾಟೀಲ ಒತ್ತಾಯಿಸಿದ್ದಾರೆ.
ಅವರು ಭಾನುವಾರದಂದು ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲದ ವತಿಯಿಂದ ರಾಜ್ಯ ಸರ್ಕಾರವು ಪೆಟ್ರೊÃಲ್, ಡಿಸೇಲ್ ಗಳ ತೆರಿಗೆ ಹೆಚ್ಚಿಸಿರುವುದನ್ನು ವಿರೋಧಿಸಿ ಹಿಂಡಲಗಾ ಗಣಪತಿ ದೇವಸ್ಥಾನದ ಹತ್ತಿರ ರಸ್ತೆ ತಡೆ ಮಾಡುವುದರ ಮೂಲಕ ಪ್ರತಿಭಟನಾ ವೇಳೆ ಮಾತನಾಡಿದರು.
ಕೇಂದ್ರ ಸರ್ಕಾರವು ಪೆಟ್ರೊÃಲ್, ಡಿಸೇಲ್ ಬೆಲೆಗಳನ್ನು ಇಳಿಸಿದಾಗ್ಯೂ ರಾಜ್ಯದ ಸಮ್ಮಿಶ್ರ ಸರ್ಕಾರ ಅವುಗಳ ಮೇಲಿನ ತೆರಿಗೆ ದರವನ್ನು ಹೆಚ್ಚಿಸಿ ರಾಜ್ಯದ ಜನತೆಗೆ ಬರೆ ಎಳೆದಿದೆ. ಈ ಕೂಡಲೇ ಹೆಚ್ಚಿಸಿದ ತೆರಿಗೆಯನ್ನು ಇಳಿಸುವಂತೆ ಆಗ್ರಹಿಸುವುದರ ಜೊತೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಸಚಿವ ಪುಟ್ಟರಂಗಶೆಟ್ಟಿಯವರು ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಟೀಲ, ಯುವಮೋರ್ಚಾ ಅಧ್ಯಕ್ಷ ಚೇತನ ಪಾಟೀಲ, ಹಿರಿಯ ಮುಖಂಡರಾದ ರಾಮಚಂದ್ರ ಮನ್ನೊÃಳಕರ, ಅರುಣ ಕೋಲಕಾರ, ಡಾ.ಯಲ್ಲಪ್ಪಾ ಪಾಟೀಲ, ಹನುಮಂತ ಪಾಟೀಲ, ಕಾಚು ಸುಕಯೇ, ಸಾಗರ ಶೇರೆಕರ, ಸನತಕುಮಾರ್ ವಿ.ವಿ.ಅಭಯ ಅವಲಕ್ಕಿ, ಬಾಪು ಪಾಟೀಲ ಹಾಗೂ ಪಧಾದಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...