ಪುರಸಭೆಯ ಅಧಿಕಾರಿಗಳಿಂದ ಕಿರಾಣಿ ಅಂಗಡಿ ಮೇಲೆ ದಾಳಿ

0
3

ಪುರಸಭೆಯ ಅಧಿಕಾರಿಗಳಿಂದ ಕಿರಾಣಿ ಅಂಗಡಿ ಮೇಲೆ ದಾಳಿ
ಕನ್ನಡಮ್ಮ ಸುದ್ದಿ-ಸವದತ್ತಿ: ಸವದತ್ತಿ ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ಪರವಾನಿಗೆ(ಲೈಸನ್ಸ) ಪಡೆಯದೆ ಅನಧೀಕೃತವಾಗಿ ವ್ಯಾಪಾರ ಉದ್ದಿಮೆ ನಡೆಸುತ್ತಿರುವ ಅಂಗಡಿಗಳ ಮೇಲೆ ಪುರಸಭೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.
ಕೆಲವು ಅಂಗಡಿಕಾರರ ವಿರುದ್ಧ ಪುರಸಭೆಯ ಮುಖ್ಯಾಧಿಕಾರಿ ಎ.ಬಿ.ಕಲಾಲ ರವರು ಹಾಗೂ ಹಿರಿಯ ಆರೋಗ್ಯ ನಿರೀಕ್ಷರಾದ ಪಿ.ಬಿ.ಮಠದ ರವರು ಪುರಸಭೆ ಕಾಯ್ದೆ ೧೯೬೪ ರ ಕಲಂ ೨೫೬(೬) ರ ಪ್ರಕಾರ ಸ್ಥಳೀಯ ಮತ್ತು ಜೆ.ಎಮ್.ಎಫ್.ಸಿ.ನ್ಯಾಯಾಲಯದಲ್ಲಿ ಖಟ್ಲೆÃ (ಕೇಸ್) ದಾಖಲು ಮಾಡಿದರು. ಈ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಹಾಗೂ ಪುರಸಭೆಯ ಪರವಾಣಿಗೆ ಪಡೆಯದೇ ಅನಧೀಕೃತವಾಗಿ ನಡೆಸುತ್ತಿರುವ ಅಂಗಡಿಗಳ ಮೇಲೆ ಮತ್ತು ಅಂಗಡಿ ಸುತ್ತಮುತ್ತಲು ಸ್ವಚ್ಛತೆ ಇಲ್ಲದೇ ಇರುವದರಿಂದ ಇವರ ಮೇಲೆ ಪ್ರಕರಣವನ್ನು ದಾಖಲಿಸಿದರು.
ದಾಳಿ ಬಳಿಕ ಪುರಸಭೆಯಲ್ಲಿ ಮಾಹಿತಿ ನೀಡಿದ ಆರೋಗ್ಯ ನಿರೀಕ್ಷಕರಾದ ಪ್ರಕಾಶ ಮಠದ ರವರು ಮಾತನಾಡಿದ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಮಿತ್ಯ ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ವಿಲೇವಾರಿ ಕಾಯ್ದೆ ೨೦೧೬ ನಿಯಮ ೧೫(೨೩) ರ ಪ್ರಕಾರ ರಸ್ತೆ ಬದಿಗೆ ಚರಂಡಿಗಳಿಗೆ ಹಾಗೂ ಖುಲ್ಲಾ ಪ್ಲಾಟಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡುವವರನ್ನು ಗುರುತಿಸಿ ಅವರಿಗೂ ಸಹ ದಂಡ ವಿಧಿಸಲಾಗುತ್ತಿದೆ. ಇದುವರೆಗೂ ಸುಮಾರು ರೂ ೧೦,೦೦೦-೦೦ಗಳ ವರೆಗೆ ದಂಡ ವಸೂಲಿ ಮಾಡಲಾಗಿದೆ. ನಗರದಲ್ಲಿಯ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಲು ಮುಖ್ಯಾಧಿಕಾರಿಯವರು ಕೋರಿದರು. ಪುರಸಭೆ ಲೈಸನ್ಸ ಪಡೆಯುವ ವ್ಯಾಪಾರಸ್ಥರು ಹಾಗೂ ಉದ್ಯಮಿಗಳು ಕೂಡಲೇ ಪುರಸಭೆಗೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಿ ಲೈಸನ್ಸ ಪಡೆದುಕೊಳ್ಳಲು ಹೇಳಿದರು.

loading...