ಪುಲ್ವಾಮಾ ದಾಳಿ: ಪಾಕಿಸ್ತಾನ ಸಿಮೆಂಟ್ ರಫ್ತು ಕುಸಿತ

0
3

ಕರಾಚಿ:- ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯ ನಂತರ ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಶೇ.200 ರಷ್ಟು ಕಸ್ಟಮ್‍ ತೆರಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಭಾರತೀಯ ಸಿಮೆಂಟ್ ವ್ಯಾಪಾರಿಗಳು ತಮ್ಮ ಕಂಟೇನರ್ ಗಳನ್ನು ವಾಪಸ್ ಕರೆಯಿಸಿಕೊಳ್ಳುತ್ತಿದ್ದು, ಅಲ್ಲಿನ ಸಿಮೆಂಟ್ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ.
ಫೆ.14ರಂದು ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಘಟನೆಯ ನಂತರ ಪಾಕಿಸ್ತಾನವನ್ನು ಆಪ್ತ ರಾಷ್ಟ್ರಗಳ ಶ್ರೇಣಿಯಿಂದ ತೆಗೆದು ಹಾಕಿದ ಭಾರತ, ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇ.200ರಷ್ಟು ಹೆಚ್ಚಿಸಿತ್ತು. “ಭಾರತೀಯ ವ್ಯಾಪಾರಿಗಳು ಕಂಟೇನರ್ ವಾಪಸ್ ಕಳುಹಿಸುವಂತೆ ಪಾಕಿಸ್ತಾನದ ಸಿಮೆಂಟ್ ಉದ್ಯೋಗಕ್ಕೆ ಸಂದೇಶ ರವಾನಿಸಿದ್ದು, ಕೆಲವರು ಈಗಾಗಲೇ ಕಂಟೇನರ್ ವಾಪಸ್ ಕರೆಯಿಸಿಕೊಳ್ಳುತ್ತಿದ್ದಾರೆ.” ಎಂದು ಹೆಸರು ಹೇಳಲು ಬಯಸದ ಅಲ್ಲಿನ ಸಿಮೆಂಟ್ ರಫ್ತುದಾರರೊಬ್ಬರು ತಿಳಿಸಿದ್ದಾರೆ ಎಂದು ಜಿಯೊ ಸುದ್ದಿ ಮಾಧ್ಯಮ ಹೇಳಿದೆ.
ಸುಮಾರು 600ರಿಂದ 800 ಸಿಮೆಂಟ್ ತುಂಬಿದ ಕಂಟೇನರ್ ಗಳು ಕರಾಚಿ, ಕೊಲಂಬೊ, ದುಬೈ ಹಾಗೂ ಸಮುದ್ರಗಳಲ್ಲಿ ನಿಂತಿವೆ. ಕೇರಳದಲ್ಲಿ ಕಳೆದ ವರ್ಷ ಪ್ರವಾಹ ಉಂಟಾಗಿದ್ದರಿಂದ ಭಾರತ ಸರ್ಕಾರ 50 ಶತಕೋಟಿ ರೂಪಾಯಿ ಪುನರ್ವಾಸ ಅನುದಾನ ಘೋಷಣೆ ಮಾಡಿದ್ದರಿಂದ ಪಾಕಿಸ್ತಾನದ ಸಿಮೆಂಟ್ ರಫ್ತು ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ, ಆಮದಿನ ಮೇಲೆ ಶೇ.200ರಷ್ಟು ಕಸ್ಟಮ್ ತೆರಿಗೆ ಹೆಚ್ಚಿಸಿದ್ದರಿಂದ ಸಿಮೆಂಟ್ ರಫ್ತು ಕುಸಿದಿದೆ ಎಂದು ಅವರು ಹೇಳಿದ್ದಾರೆ.
ಪುಲ್ವಾಮಾ ದಾಳಿಗೂ ಮುನ್ನ ಪಾಕಿಸ್ತಾನದಿಂದ ಸುಮಾರು 7ರಿಂದ 8 ಕೋಟಿ ಡಾಲರ್ ಸಿಮೆಂಟ್ ರಫ್ತಾಗುತ್ತಿತ್ತು. ವಾಘಾ ಸೀಮೆಯಿಂದ ಶೇ.75ರಷ್ಟು ಹಾಗೂ ಸಮುದ್ರದಿಂದ ಶೇ.25ರಷ್ಟು ಸಿಮೆಂಟ್ ರಫ್ತು ಮಾಡಲಾಗುತ್ತಿತ್ತು

loading...