ಪೂರ್ವ ತಯಾರಿ ಇಲ್ಲದ ಲಾಕ್ ಡೌನ :ಮೋದಿ ಸರಕಾರದ ವಿರುದ್ದ ಕೆಪಿಸಿಸಿ ಕಾರ್ಯದ್ಯಕ್ಷ ಸತೀಶ ಜಾರಕಿಹೋಳಿ ಗುಡುಗು

0
15

ಪೂರ್ವ ತಯಾರಿ ಇಲ್ಲದ ಲಾಕ್ ಡೌನ :ಮೋದಿ ಸರಕಾರದ ವಿರುದ್ದ ಕೆಪಿಸಿಸಿ ಕಾರ್ಯದ್ಯಕ್ಷ ಸತೀಶ ಜಾರಕಿಹೋಳಿ ಗುಡುಗು

ಕನ್ನಡಮ್ಮ ಸುದ್ದಿ -ಯಮಕನಮರಡಿ : ಕೊರೊನ ರೋಗ ಹರಡದಂತೆ ದೇಶಾದ್ಯಂತ ಮಾರ್ಚ ೨೪ ರಿಂದ ಕೇಂದ್ರ ಸರಕಾರ ಹೇರಲಾದ ಲಾಕ್ ಡೌನ ಆದೇಶ ಒಂದು ಪೂರ್ವ ತಯಾರಿ ಇಲ್ಲದ ಆದೇಶ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯದ್ಯಕ್ಷ ಹಾಗೂ ಯಮಕನಮರಡಿ ಕ್ಷೇತ್ರದ ಶಾಸಕರು ಆಗಿರುವ ಸತೀಶ ಜಾರಕಿಹೋಳಿ ಕೇಂದ್ರ ಸರಕಾರದ ವಿರುದ್ದ ಗುಡುಗಿದ್ದಾರೆ .

ಶಾಸಕ ಸತೀಶ ಜಾರಕಿಹೋಳಿ ತಮ್ಮ ಟ್ವಿಟರ್ ಖಾತೆಯಲ್ಲಿ ಕೇಂದ್ರ ಸರಕಾರದ ವಿರುದ್ದ ಗುಡುಗಿದ್ದು,ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಆಹಾರ ಅಭಧ್ರತೆ ಉಂಟಾಗಿತ್ತು ಎಂದು ನಾವು ಕೇಳಿದ್ದೆವು.ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರಕಾರದ ಪೂರ್ವ ತಯಾರಿ ಇಲ್ಲದ ಲಾಕ್ ಡೌನದಿಂದ ವಲಸೆ ಕಾರ್ಮಿಕರ ಹಸಿವಿನ ನರಳಾಟ ನೋಡುವ ದೌರ್ಭಾಗ್ಯ ನಮ್ಮದಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ವ್ಯಂಗ್ಯಭರಿತ ಟ್ವಿಟ್ ಮಾಡಿದ್ದಾರೆ .

ಇನ್ನು ಲಾಕ್ ಡೌನದಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ಬಗ್ಗೆ ಬರೆದುಕೊಂಡಿರುವ ಅವರು ದೇಶದ ಮೂಲೆ ಮೂಲೆಯಲ್ಲಿ ನೆಲೆಸಿರುವ ಕರ್ನಾಟಕ ಕೂಲಿ ಕಾರ್ಮಿಕರು ನಮ್ಮ ರಾಜ್ಯಕ್ಕೆ ಮರಳುತ್ತಿದ್ದಾರೆ . ಆದರೆ ನಮ್ಮ ರಾಜ್ಯದಲ್ಲಿ ನೆರೆಸಿರುವ ಹೊರ ರಾಜ್ಯದ ವಲಸೆ ಕೂಲಿ ಕಾರ್ಮಿಕರ ಗೋಳು ಕೇಳುವವರಿಲ್ಲದಾಗಿದೆ.ಇವರ ಕಡೆ ಕೇಂದ್ರ ಹಾಗೂ ರಾಜ್ಯ ಸರಕಾರ ಗಮನ ನೀಡುತ್ತಿದ್ದ ಎಂದು ಅಸಮಾಧಾನ ಹೊರ ಹಾಕಿದ್ದಾರೆ .

ಒಟ್ಟಿನಲ್ಲಿ ಕೆಪಿಸಿಸಿ ಕಾರ್ಯದ್ಯಕ್ಷರಾದ ಬಳಿಕ ಮೊದಲಿಗಿಂತಲು ಹೆಚ್ಚು ಆಕ್ಟಿವ್ ಆಗಿರುವ ಶಾಸಕ ಸತೀಶ ಜಾರಕಿಹೋಳಿ ಕೇಂದ್ರ ಹಾಗೂ ರಾಜ್ಯ ಸರಕಾರದ ನ್ಯೂನತೆಗಳಿಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಡಿಚ್ಚಿ ಕೊಟ್ಟಿದ್ದಾರೆ .

loading...