ಪೆಟ್ರೋಲ್ ಟ್ಯಾಂಕ್ ಪಲ್ಟಿ: ದೂಡ್ಡ ಅನಾಹುತದಿಂದ ತಪ್ಪಿದ ಅಥಣಿ ಹಲ್ಯಾಳ ಗ್ರಾಮ || 25-12-2018

0
25

 

ನಿನ್ನೆ ತಡರಾತ್ರಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಎಸ್ ಆರ್ ಕಂಪನಿಗೆ ಸೇರಿದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಹಲ್ಯಾಳ ಗ್ರಾಮದಲ್ಲಿ ಫಲ್ಟಿಯಾಗಿದ್ದು ಟ್ಯಾಂಕರ್ ನಿಂದ ಪೆಟ್ರೋಲ್ ಹೊರಚೆಲ್ಲಿದ ಪರಿಣಾಮ ಬೆಂಕಿ ಅವಘಡ ಸಂಭವಿಸಿ ಟ್ಯಾಂಕರ್ ಸ್ಪೊಟಗೊಳ್ಳುವ ಅನಾಹುತ ಗ್ರಾಮಸ್ಥರ ಮುನ್ನೆಚ್ಚರಿಕೆ ಕ್ರಮದಿಂದ ತಪ್ಪಿದ್ದು ಸ್ಥಳಕ್ಕೆ ದೌಡಾಯಿಸಿ ಬಂದ ಅಥಣಿಯ ಪೋಲಿಸ್ ಇಲಾಖೆ,ಅಗ್ನಿಶಾಮಕ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ. ಅಧಿಕಾರಿಗಳು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ನೇತೃತ್ವದಲ್ಲಿ ಸತತ ಐದು ಗಂಟೆ ಕಾರ್ಯಾಚರಣೆ ನಡೆಸುವ ಮೂಲಕ ಪಲ್ಟಿಯಾಗಿದ್ದ ಟ್ಯಾಂಕರ್ ಮೇಲಕ್ಕೆ ಎತ್ತಿ ಸಂಚಾರ ಸುಗಮಗೊಳಿಸಿದ್ದಾರೆ.ಅಲ್ಲದೆ 29 ಸಾವಿರ ಲೀಟರ್ ನಷ್ಟು ಇದ್ದ ಪೆಟ್ರೋಲ್ ಸೋರಿಕೆ ಆಗಿದ್ದು ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತವಾಗುವದನ್ನು ತಪ್ಪಿಸಿದ್ದಾರೆ.

loading...