ಪೊಲೀಸರು ಶಿವು ಉಪ್ಪಾರ ಸಾವಿನ ತನಿಖೆ ದಿಕ್ಕು ತಪ್ಪಿಸುತ್ತಿದ್ದಾರೆ: ಮುತಾಲಿಕ ಆರೋಪ

0
31

ಬೆಳಗಾವಿ

ಗೋ ರಕ್ಷಕ ಶಿವು ಉಪ್ಪಾರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸ್ ಅಧಿಕಾರಿಗಳು ತನಿಖೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆರೋಪಿಸಿದರು.
ಸೋಮವಾರ ಸಿಪಿಎಡ್ ಆವರಣದಲ್ಲಿ ಗೋ ರಕ್ಷಕ ಶಿವು ಉಪ್ಪಾರ ಅನುಮಾನಾಸ್ಪದ ಸಾವಿನ ತನಿಖೆಯನ್ನು ನಡೆಸುವಂತೆ ಆಗ್ರಹಿಸಿ ನಡೆಸಲಾದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಶಿವು ಉಪ್ಪಾರ ಅನುಮಾನಾಸ್ಪದ ಸಾವಿನಲ್ಲಿ ಪ್ರಕರಣದ ತನಿಖೆ ಪ್ರಾರಂಭಿಸಲು ಸರಕಾರ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ದೇಶ, ಸಮಾಜಕ್ಕಾಗಿ ಮಹಿಳೆ, ಗೋ ರಕ್ಷಣೆಯಾಗಬೇಕೆಂದು ಹೋರಾಟ ನಡೆಸಬೇಕೆಂದರೆ ಪೊಲೀಸ್ ಇಲಾಖೆ, ಸರಕಾರ ಹೇಳಿದ ಹಾಗೆ ಕೇಳಬೇಕು. ಇದು ನಮ್ಮ ದೇಶದ ಸರಕಾರದ ಮಾನಸಿಕ ಸ್ಥಿತಿ ಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶ ಭಕ್ತಿ, ಧಾರ್ಮಿಕ ಕಾರ್ಯಕ್ರಮ ಹಾಕಬೇಕಾದ ಸಂದರ್ಭದಲ್ಲಿ ಚೌಕಟ್ಟು ಹಾಕುವ ಅಧಿಕಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಕಿತ್ತು ಹಾಕಬೇಕೆಂದು ವಿನಂತಿಸಿಕೊಂಡರಲ್ಲದೆ, ಗೋ ರಕ್ಷಕ ಶಿವು ಉಪ್ಪಾರ ಕೊಲೆಯಾಗಿ ಇಷ್ಟು ದಿನ ಕಳೆದರೂ ಪೊಲೀಸ್ ಇಲಾಖೆ ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

loading...