ಪೊಲೀಸ ದರ್ಬಾರಗೆ ಸಾರ್ವಜನಿಕರ ಆಕ್ರೋಶ

0
60

ಪೊಲೀಸ ದರ್ಬಾರಗೆ ಸಾರ್ವಜನಿಕರ ಆಕ್ರೋಶ

ಕನ್ನಡಮ್ಮ ಸುದ್ದಿ

ಸಂಕೇಶ್ವರ ೨೪: ಕೊರೋನ ರೋಗ ಹರಡದಂತೆ ರಾಜ್ಯ ಸರಕಾರ ತೆಗೆದುಕೊಂಡಿರುವ ಲಾಕ್ ಡೌನ್ ಹಾಗೂ ೧೪೪ ಸೆಕ್ಷನ್ ಆದೇಶಕ್ಕೆ ಇಡಿ ಬೆಳಗಾವಿ ಜಿಲ್ಲೆ ಸ್ತಬ್ಧವಾಗಿದ್ದು , ಸರಕಾರದ ಆದೇಶದ ಪ್ರಕಾರ ದಿನಸಿ ಅಂಗಡಿ ತೆರೆಯಲು
ಅವಕಾಶವಿದ್ದರೂ ಒತ್ತಾಯ ಪೂರ್ವಕವಾಗಿ ಪೋಲಿಸರು ಬಂದ್ ಮಾಡಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ
ವ್ಯಕ್ತವಾಗಿದೆ.
ದಿನಸಿ ಅಂಗಡಿಕಾರರ ಹಾಗೂ ಗ್ರಾಮೀಣ ಪ್ರದೇಶಗಳ
ಜನರ ಮೇಲೆ ಲಾಟಿ ಬೀಸುವದಲ್ಲದೇ, ಬೋ..ಮಗನೇ, ಸೂ…ಮಗನೇ ಎನ್ನುವ ಬೈಗುಳಗಳನ್ನು ಕೇಳಿಸಿಕೊಂಡ ಜನರು ಪೊಲೀಸರ ವರ್ತನೆಗೆ ಯಾರೂ ಬೀಗ ಹಾಕುವವರಿಲ್ಲವೇ ಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲಿದ್ದಾರೆ. ಜನಪ್ರತಿನಿಧಿಗಳು ಪೊಲೀಸರಿಗೆ
ಮಾತನಾಡಿದರೆ ವಿಡಿಯೋ ಮಾಡಿ ಪ್ರಚಾರ ಪಡೆಯುತ್ತಾರೆ
ಅದೇ ಪ್ರಚಾರ ಪಡೆಯುವ ಪೊಲೀಸರೇ ಇಂದು
ಶ್ರೀಸಾಮಾನ್ಯರಿಗೆ ಅವಾಚ್ಯ ಶಬ್ದ ಬಳಕೆ ಮಾಡುತ್ತಿರುವುದು ಎಷ್ಟು ಸರಿ ಎಂಬು ಚರ್ಚೆಗೆ
ಗ್ರಾಸವಾಗಿದೆ.

ಸರಕಾರ ಸಂತೆ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ
ಜನರು ಹೆಚ್ವಿನ ಪ್ರಮಾಣದಲ್ಲಿ ಸೇರುತ್ತಿರುವುದರಿಂದ
ಅವುಗಳನ್ನ ರದ್ದು ಮಾಡಿದ್ದು ಸರಿಯಾದ ಕ್ರಮ.ಆದರೆ
ದಿನಸಿ ಅಂಗಡಿ ಬಂದ್ ಮಾಡುವಂತೆ ಆದೇಶವಿಲ್ಲದೆಯಿದ್ದರೂ ಪೋಲಿಸರು ಒತ್ತಾಯ ಪೂರ್ವಕವಾಗಿ ಸಂಕೇಶ್ವರ ಪೋಲಿಸ್
ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ತೊಂದರೆಕ್ಕಿಡಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರಾಜಾರೋಷವಾಗಿ ಅಕ್ರಮ ಸಾರಾಯಿ
ಮಾರಾಟ ನಿತ್ಯ ನಡೆಸುತ್ತಿದ್ದರೂ ಕಣ್ಣುಮಚ್ಚಿ ಕುಳಿತಿರುವ ಪೋಲಿಸ್ ಈಗ ಸರಕಾರದ ಆದೇಶವನ್ನು ಉಲಂಘಿಸಿ ಸಾರ್ವಜನಿಕ
ತೊಂದರೆ ಕೊಡುತ್ತಿರುವುದು ಯಾವ ನ್ಯಾಯ ಎಂದು
ಜನರು ಪ್ರಶ್ನಿಸುತ್ತಿದ್ದಾರೆ .

೧೪೪ ಸೆಕ್ಷನ್ ಅನ್ವಯ ನಾಲ್ಕು ಜನರು ಸೇರುವಂತಿಲ್ಲ , ಅಘೋಷಿತ ಕರ್ಪ್ಯೂ ಇರುವುದರಿಂದ ಜನರ ಹೋರ
ಬಾರದಂತೆ ಸೂಚಿಸಲಾಗಿದೆ. ಆದರೆ ಅಗತ್ಯ ದಿನಸಿ ಅಂಗಡಿಗಳ ಮಾಲಿಕರನ್ನ ಹೊಡೆದು, ಮನಬಂದAತೆ ಬೈದು ಅಂಗಡಿಗಳನ್ನು ಬಂದ್ ಮಾಡಿಸಿರುವುದು ಪೋಲಿಸರ ದರ್ಪಕ್ಕೆ ಸಾಕ್ಷಿಯಾಗಿದೆ. ಇನ್ನು ಕೇವಲ ಗ್ರಾಮೀಣ ಜನರಿಗೆ
ಕಟ್ಟು ನಿಟ್ಡಿನ ಪಾಠ ಮಾಡುವ ಪೋಲಿಸರು ನಗರದಲ್ಲಿ
ಸಂಜೆಯಾದರೆ ಎಲ್ಲ ತರಹದ ಜನ ಸೇರಿ ಸಂತೆ
ಮಾಡುತ್ತಿರುವುದು ಕಾಣುವುದಿಲ್ಲವೇ ಎಂದು ಜನರು
ಅಧಿಕಾರಿಗಳ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಕರೋನ ರೋಗದ ಭೀತಿಗೆ ಜನರು ದಿನ
ನಿತ್ಯದ ಕೆಲಸವಿಲ್ಲದೆ ಹೊಟ್ಟೆ ಪಾಡಿಗಾಗಿ
ನರಳುತ್ತಿರುವುದು ಒಂದು ಕಡೆಯಾದರೆ
,ಮನೆಯಲ್ಲಿಯೇ ಇದ್ದು ಅಡುಗೆ ಮಾಡಿ ತಿನ್ನಲು ದಿನಸಿ
ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಸಾರ್ವಜನಿಕ ಹೊಟ್ಟೆಗೆ ತನ್ನಿರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಜಲ್ಲಾ ಪೋಲಿಸ ಅಧಿಕಾರಿಗಳ ಹಾಗು
ಜಿಲ್ಲಾಧಿಕಾರಿಗಳ ದಿನಸಿ ಅಂಗಡಿಗಳ ಬಗ್ಗೆ ನೀಡಿರುವ ಆದೇಶದ ಬಗ್ಗೆ ಸಂಕೇಶ್ವರ ಪೋಲಿಸ್ ಅಧಿಕಾರಿಗಳು ಗಮನಿಸಿದರೆ ಸಾರ್ವಜನಿಕ ತೊಂದರೆಗೆ ಪರಿಹಾರ ಸಿಗಬಹುದಾಗಿದೆ.

loading...