ಪೋಲೀಸ್ ಠಾಣೆ ಮುಂದೆ ಮಾರಾಮಾರಿ ಯವಕನ ಮೇಲೆ ಹಲ್ಲೆ || 26-12-2018

0
50

 

ಪೊಲೀಸ್ ಠಾಣೆ ಎದುರಿಗೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ. ಮಹೇಶ್ ಬಡಿಗೇರ್ ಹಾಗೂ ರಾಹುಲ್ ರೋಡಕರ್ ಎಂಬುವರ ಮೇಲೆ ಮತ್ತೊಂದು ಗುಂಪಿನವರು ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆ ವೇಳೆ ಧಾವಿಸಿದ ತೇರದಾಳ ಪೊಲೀಸರು ಗುಂಪು ಚದುರಿಸಿದ್ದಾರೆ. ಅಲ್ದೇ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ೧೫ ದಿನಗಳ ಹಿಂದೆ ಕಬ್ಬು ಕಡಿಯುವ ಎರಡು ಗ್ಯಾಂಗ್ ಗಳ ಮಧ್ಯೆ ಸಣ್ಣ ಜಗಳ ಆಗಿತ್ತು. ಆ ವೇಳೆ ಮಹೇಶ್ ಬಡಿಗೇರ ಕೈ ಮೇಲೆ ಮರದ ಕೊಂಬು ಬಿದ್ದು ಕೈ ಮುರಿದಿತ್ತು. ಈ ಕುರಿತು ಪ್ರಕರಣ ದಾಖಲಿಸಲು ಮಹೇಶ್ ಗುಂಪಿನವರು ಠಾಣೆಗೆ ಆಗಮಿಸ್ತಾಯಿದ್ರು. ಈ ವೇಳೆ ದಾಳಿ ಮಾಡಿದ ಮತ್ತೊಂದು ಗುಂಪು ಹಲ್ಲೆ ನಡೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ…

loading...