ಪೌರತ್ವ ಕಾಯ್ದೆ  ಮೌನ ಮುರಿದ ಕೇಂದ್ರ, ಕೆಲ ಮಾರ್ಪಾಡಿಗೆ ಸಿದ್ದ : ಅಮಿತ್ ಶಾ

0
1

ಧನಬಾದ್- ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ದೇಶದಲ್ಲಿ ಹಿಂಸಾಚಾರ  ಹೆಚ್ಚುತ್ತಿರುವುದನ್ನು ಮನಗಂಡು,  ಇದೆ ಮೊದಲ ಮೊದಲ ಭಾರಿಗೆ  ಮೌನ ಮುರಿದಿರುವ ಕೇಂದ್ರ ಸರಕಾರ   ಕಾಯ್ದೆಯ ಅಂಶಗಳಲ್ಲಿ ಕೆಲ ಬದಲಾವಣೆಗೆ  ಸಿದ್ಧ ಎಂದು ಹೇಳಿದೆ.
ಕಾಯಿದೆ ಜಾರಿಗೆ ಬಂದ ಬಳಿಕ ಮೊಟ್ಟಮೊದಲ ಸಾರ್ವಜನಿಕ ಸಭೆಯಲ್ಲಿ  ಈಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಈಶಾನ್ಯ ರಾಜ್ಯಗಳ ಆತಂಕ  ನಿವಾರಿಸುವ  ನಿಟ್ಟಿನಲ್ಲಿ ಕಾಯ್ದೆಯ ಅಂಶಗಳಲ್ಲಿ ಕೆಲ ಬದಲಾವಣೆ  ಮಾಡಲು ಸಿದ್ಧವಿರುವುದಾಗಿಯೂ  ಹೇಳಿದರು.
“ಮೇಘಾಲಯ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ ಮತ್ತು ಸಂಪುಟ ಸಚಿವರು ಶುಕ್ರವಾರ, ರಾಜ್ಯಗಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.  ಯಾವ ಸಮಸ್ಯೆಯೂ ಇಲ್ಲ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಕಾಯ್ದೆಯಲ್ಲಿ ಕೆಲ ಬದಲಾವಣೆಗಳು ಆಗಲೇಬೇಕು ಎಂದರೆ  ಕ್ರಿಸ್ಮಸ್ ಬಳಿಕ ಭೇಟಿಯಾಗುವಂತೆ  ಸೂಚಿಸಿದ್ದೇನೆ ಎಂದರು.
ಈ ಸಂಬಂಧ ರಚನಾತ್ಮಕ ಚರ್ಚೆ ನಡೆಸಿ ಮೇಘಾಲಯದ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿದೆ ಎಂದು ಅಮಿತ್ ಶಾ  ಗಿರಿದ್ ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ  ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷ ಹಿಂದೂ-ಮುಸ್ಲಿಂ ರಾಜಕೀಯದಲ್ಲಿ ಮುಳುಗಿದೆ ಹಾಗೂ ನಕ್ಸಲೀಯ ಸಮಸ್ಯೆ ಉತ್ತೇಜನ ಕೊಡುತ್ತಿದೆ ತನ್ನ ಅಧಿಕಾರಾವಧಿಯಲ್ಲಿ ಭಯೋತ್ಪಾದನೆಯನ್ನು ತಡೆಯಲು ವಿಫಲವಾಗಿತ್ತು ಎಂದು ಶಾ  ದೂರಿದರು

loading...