ಪ್ಯಾರಿಸ್ ಮಾಸ್ಟರ್ಸ್ :ರೊಬಿನ್ ಸೊಡೆರ್ಲಿಂಗ್ ಗೈರು

0
22

ಪ್ಯಾರಿಸ್,21-ಹಾಲಿ ಚಾಂಪಿಯನ್ ರೊಬಿನ್ ಸೊಡೆರ್ಲಿಂಗ್ ಮುಂದಿನ ತಿಂಗಳು ಆರಂಭವಾಗಲಿರುವ ಪ್ಯಾರಿಸ್ ಮಾಸ್ಟರ್ಸ್ ಓಪನ್ ಪಂದ್ಯಾವಳಿಗೆ ಅನಾರೋಗ್ಯದಿಂದಾಗಿ ಅಲಭ್ಯವಾಗಿದ್ದಾರೆ ಎಂದು ಆಯೋಜಕ ಮೂಲಗಳು ತಿಳಿಸಿವೆ.

ವಿಶ್ವ ಎಟಿಪಿ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಸೊಡೆರ್ಲಿಂಗ್ ವಿಷಮಶೀತ ಜ್ವರದಿಂದ ಬಳಲುತ್ತಿರುವುದರಿಂದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸೊಡೆರ್ಲಿಂಗ್ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ದಾಖಲಿಸಿದ್ದಾರೆ.

ಪ್ಯಾರಿಸ್ ಮಾಸ್ಟರ್ಸ್ ಪಂದ್ಯಾವಳಿಗೆ ಗೈರು ಹಾಜರಿಯಿಂದಾಗಿ ಮುಂದಿನ ತಿಂಗಳು ಲಂಡನ್ನಲ್ಲಿ ನಡೆಯಲಿರುವ ಎಟಿಪಿ ವರ್ಲ್ಡ್ಟೂರ್ ಫೈನಲ್ನಲ್ಲಿ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡಿದ್ದಾರೆ.

ಪ್ಯಾರಿಸ್ ಓಪನ್ ಪಂದ್ಯಾವಳಿಯಲ್ಲಿ ಸೊಡರ್ಲಿಂಗ್ ಬದಲಿಗೆ ಬ್ರೆಜಲಿನ್ ಥಾಮಸ್ ಬೆಲ್ಲೂಸಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕ ಅಧಿಕಾರಿಗಳು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here