ಪ್ಯಾಲೆಸ್ತೀನ್ ಸೇನಾ ನೆಲೆಯ ಮೇಲೆ ಇಸ್ರೇಲ್ ಯುದ್ಧ ವಿಮಾನ ದಾಳಿ

0
24

ಗಾಜಾ= ಪ್ಯಾಲೆಸ್ತೀನ್‍ನಿಂದ ರಾಕೆಟ್ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್‍ ಸೇನೆ, ಗಾಜಾ ಪಟ್ಟಿಯ ಪ್ಯಾಲೆಸ್ತೀನ್‍ ಸೇನಾ ನೆಲೆಯ ಮೇಲೆ ಇಂದು ವೈಮಾನಿಕ ದಾಳಿ ನಡೆಸಿದೆ.
ಗಾಜಾದ ಪ್ಯಾಲೆಸ್ತೀನ್ ಹಮಾಸ್ ಚಳವಳಿ ಸರ್ಕಾರ ಉಪಯೋಗಿಸುತ್ತಿದ್ದ ತುನಿಸಿಯಾ ಸೇನಾ ನೆಲೆಯ ಮೇಲೆ ಎರಡು ಬಾರಿ ಇಸ್ರೇಲ್ ಯುದ್ಧ ವಿಮಾನ ದಾಳಿ ನಡೆಸಿದೆ.
ಆದರೆ ದಾಳಿಯ ಬಗ್ಗೆ ಇಸ್ರೇಲ್ ಸೇನೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಇಸ್ರೇಲ್ ಬುಧವಾರ ಗಾಜಾದಲ್ಲಿ ಕಡಲತೀರದ ನಿರ್ಬಂಧ ಹೇರಿದ ನಂತರ ಪ್ರದೇಶದ ಪರಿಸ್ಥಿತಿಯು ಉಲ್ಬಣಗೊಂಡಿದೆ, ಬೆಂಕಿ ತುಂಬಿದ ಬಲೂನ್‍ ಹಾರಿ ಬಿಟ್ಟ ಪ್ರತಿಕ್ರಿಯೆಯಾಗಿ ಸ್ಥಳೀಯ ಜನರ ಮೀನುಗಾರಿಕೆಯ ಮೇಲೆ ಇಸ್ರೇಲ್ ನಿಷೇಧ ಹೇರಿದೆ.
ಗಾಜಾ ಬಂಡುಕೋರರು ಇಸ್ರೇಲ್‍ನ ದಕ್ಷಿಣದ ನಗರವಾದ ಸೆಡೆರೊಟ್‍ನ ಸಿನಗಾಗ್ ಕಟ್ಟಡವನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದ ಬಳಿಕ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಗುರುವಾರ ಬೆಳಗ್ಗಿನ ಜಾವ ಮತ್ತೊಂದು ರಾಕೆಟ್‍ ಅನ್ನು ಇಸ್ರೇಲ್‍ನ ಐರನ್ ಡೋಮ್‍ ವಾಯು ನೆಲೆಯ ವ್ಯವಸ್ಥೆ ಹೊಡೆದುರುಳಿಸಿದೆ.
ಕತಾರ್ ನಿಂದ ಪ್ಯಾಲೇಸ್ತೀನ್‍ ಪ್ರಾಂತ್ಯಕ್ಕೆ ಮಾನವೀಯ ನೆರವು ತಂಡಗಳಿಗೆ ಪ್ಯಾಲೆಸ್ತೀನ್ ಪ್ರವೇಶಿಸಲು ಇಸ್ರೇಲ್ ಅವಕಾಶ ನಿರಾಕರಿಸಿದ್ದು, ಇದು ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಲು ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

loading...