ಪ್ರತಿಯೊಬ್ಬರಿಗೂ ಕಣ್ಣಿನ ಬಗ್ಗೆ ಜಾಗೃತಿ ಇರಲಿ

0
31

ಯಲ್ಲಾಪುರ : ಅ.11 : ಮನುಷ್ಯ ತನ್ನ ಪ್ರಮುಖ ಅಂಗವಾದ ಕಣ್ಣಿನ ಕುರಿತು ಸಾಕಷ್ಟು ಗಮನ ಹರಿಸದೇ ಅಲಕ್ಷಿಸುವುದರಿಂದ ಮತ್ತು ಕಣ್ಣಿಗೆ ಸಣ್ಣ ಪುಟ್ಟ ತೊಂದರೆ ಉಂಟಾದಾಗ ಚಿಕಿತ್ಸೆಗಾಗಿ ಗೊತ್ತಿಲ್ಲದ ಓಷಧ ಬಳಕೆ ಮಾಡುವುದರಿಂದಾಗಿ ಅಪಾಯ ಸಂಭವಿಸುತ್ತದೆ. ಮಧುಮೇಹ ರೋಗ ಅಧಿಕಗೊಳ್ಳುವುದರಿಂದ, ರಕ್ತ ಹೆಪ್ಪುಗಟ್ಟುವುದರಿಂದಲೂ ಶಾಶ್ವತ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇದ್ದು ಪ್ರತಿಯೊಬ್ಬರೂ ತಮ್ಮ ಕಣ್ಣಿನ ಆರೋಗ್ಯದ ಕುರಿತು ಎಚ್ಚರಿಕೆವಹಿಸಬೇಕೆಂದು; ಕನಿಷ್ಟ ಆರು ತಿಂಗಳಿಗೊಮ್ಮೆ ತಜ್ಞ ವೈದ್ಯರಿಂದ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕೆಂದು ಸಮುದಾಯ ಆರೋಗ್ಯ ಕೇಂದ್ರದ ನೇತ್ರ ವೈದ್ಯೆ  ಡಾ|| ಸೌಮ್ಯಾ ಕೆ. ವಿ. ಹೇಳಿದರು

ಅವರು ಗುರುವಾರ ಬೆಳಿಗ್ಗೆ ಪಟ್ಟಣದ ವಿಶ್ವದರ್ಶನ ಡಿ.ಇಡಿ ಕಾಲೇಜಿನಲ್ಲಿ ವಿಶ್ವ ದೃಷ್ಟಿ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾಯ9ಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಕಣ್ಣಿನ ಕಪ್ಪು ಗುಡ್ಡೆಗೆ ಅಲ್ಸರ್ ನಿಂದಾಗಿ ಬಿಳಿಯಾಗುವ ಅಪಾಯ ಸಂದರ್ಭದಲ್ಲಿ ತ್ವರಿತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೂ ಶಾಶ್ವತ ಕುರುಡುತನ ಸಂಭವಿಸಬಹುದಾಗಿದ್ದು, ಅಗತ್ಯವೆನಿಸಿದಾಗ ಕನ್ನಡಕ ಧರಿಸಬೇಕಾದುದೂ ಆರೋಗ್ಯ ದೃಷ್ಟಿಯಿಂದ ಉತ್ತಮ ಎಂದು ಸೌಮ್ಯಾ ಹೇಳಿದರು.

ದಾನಗಳಲ್ಲಿ `ನೇತ್ರ ದಾನಳಿ ಅತ್ಯಂತ ಶ್ರೇಷ್ಟವಾಗಿದ್ದು, ನಮ್ಮ ಬದುಕಿನ ನಂತರ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ವ್ಯರ್ಥ ಗೊಳಿಸುವ ಬದಲಿಗೆ ನಾವು ಬದುಕಿರುವಾಗಲೇ ಅವುಗಳ ಪುನರ್ಬಳಕೆಗೆ ಅನುವಾಗುವಂತೆ ದಾನ ನೀಡಿ ಅಂಧರಾದವರ ಬಾಳಿಗೆ ಬೆಳಕು ನೀಡುವ ಕಾರ್ಯವನ್ನು ವಿದ್ಯಾರ್ಥಿಗಳಾದವರು ಮಾಡಬೇಕೆಂದು ಸಲಹೆ ನೀಡಿದರು. ಕೃತಕ ಕಣ್ಮಣಿ ಚಿಕಿತ್ಸೆಯಿಂದಾಗಿ ಈ ಆಧುನಿಕ ಯುಗದಲ್ಲಿ ಕಣ್ಣಿನ ರಕ್ಷಣೆ ಸಾಧ್ಯ. ಈ ಕುರಿತಾಗಿ ಯಾರಿಗೂ ಮೂಢನಂಬಿಕೆ ಅಥವಾ ಅಪನಂಬಿಕೆಗಳ ಅವಶ್ಯಕತೆಯಿಲ್ಲ ಎಂದು ಸೌಮ್ಯಾ ಸ್ಪಷ್ಟವಾಗಿ ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ನೇತ್ರ ಸಹಾಯಕಿ ಪರವೀನಬಾನು ಸಮೀಪ ದೃಷ್ಟಿ ಹಾಗೂ ದೂರದೃಷ್ಟಿಯ ಕುರಿತು ವಿವರವಾದ ಮಾಹಿತಿ ನೀಡಿದರು. ಆರೋಗ್ಯ ಕೇಂದ್ರದ ಶಿಕ್ಷಣಾಧಿಕಾರಿ ಆರ್.ಜಿ.ಭಟ್ಟ ಜೀವಸತ್ವಗಳ ಕೊರತೆಯಿಂದ ಉಂಟಾಗಬಹುದಾದ ತೊಂದರೆಗಳನ್ನು ತಿಳಿಸಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಅಧ್ಯಕ್ಷತೆ ವಹಿಸಿ ಸಾಂದರ್ಭಿಕ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಉಪನ್ಯಾಸಕಿ ಸಂಧ್ಯಾ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮತ್ತೌರ್ವ ಉಪನ್ಯಾಸಕಿ ಮಮತಾ ಹೆಬ್ಬಾರ್ ವಂದಿಸಿದರು.

 

loading...

LEAVE A REPLY

Please enter your comment!
Please enter your name here