ಪ್ರತ್ಯೇಕ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿ ರಚಿಸುವಂತೆ ಆಗ್ರಹಿಸಿ ಮನವಿ

0
43

ಬಸವನಬಾಗೇವಾಡಿ: ಪ್ರತ್ಯೇಕ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿ ರಚಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯ ನೇತೃತ್ವದಲ್ಲಿ ಮಂಗಳವಾರ ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಈರಣ್ಣ ಪಟ್ಟಣಶೆಟ್ಟಿ, ಸುರೇಶಗೌಡ ಪಾಟೀಲ, ಶಂಕರಗೌಡ ಬಿರಾದಾರ, ಕರವೇ ತಾಲೂಕಾಧ್ಯಕ್ಷ ಅಶೋಕ ಹಾರಿವಾಳ, ಡಿಎಸ್‍ಎಸ್ ಮುಖಂಡ ಅಶೋಕ ಚಲವಾದಿ ಮಾತನಾಡಿ 12ನೇ ಶತಮಾನದಲ್ಲಿ ವಚನಕ್ರಾಂತಿ ಮೂಲಕ ಜಗತ್ತಿಗೆ ಶಾಂತಿಯನ್ನು ಬಯಸಿದ ಜಗಜ್ಯೋತಿ ಬಸವೇಶ್ವರರು ಜನಿಸಿದ ಬಸವನಬಾಗೇವಾಡಿಯನ್ನು ಕೂಡಲ ಸಂಗಮ ಪ್ರಾಧಿಕಾರದಿಂದ ಪ್ರತ್ಯೇಕಿಸಿ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ಪ್ರತ್ಯೇಕವಾಗಿ ರಚಿಸಿ ಬಸವ ಜನ್ಮಸ್ಥಳವನ್ನು ಸಮಗ್ರ ಅಭಿವೃದ್ಧಿ ಮಾಡುವಲ್ಲಿ ಘನ ಸರ್ಕಾರ ತಗೆದುಕೊಂಡ ನಿರ್ಧಾರ ಸಮಸ್ತ ಬಸವಾಭಿಮಾನಿಗಳು ಸ್ವಾಗತಿಸುತ್ತಾರೆ ಎಂದು ಹೇಳಿದರು.
ಕೂಡಲೇ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿ ಕಾರ್ಯರಂಭಿಸಬೇಕೆಂದು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು ವಿನಂತಿಸಿದರು. ಈ ಸಂದರ್ಭದಲ್ಲಿ ವೈ.ಡಿ.ನಾಯ್ಕೋಡಿ, ಬಸಣ್ಣ ದೇಸಾಯಿ, ಎಲ್.ಎನ್.ಅಗರವಾಲ, ಬಸವರಾಜ ಗೊಳಸಂಗಿ, ಭರತು ಅಗರವಾಲ, ಶೇಖರ ಗೊಳಸಂಗಿ, ಬಸವರಾಜ ಕೋಟಿ, ದಯಾನಂದ ಜಾಲಗೇರಿ, ರವಿ ಚಿಕ್ಕೊಂಡ, ರವಿ ತಿಪ್ಪನಗೌಡರ, ಶ್ರೀಕಾಂತ ಕೊಟ್ರಶೆಟ್ಟಿ, ನಿಂಗಪ್ಪ ಅವಟಿ, ರವಿ ರಾಠೋಡ ಸೇರಿದಂತೆ ಇತರರು ಇದ್ದರು.

loading...