ಪ್ರಧಾನಿ ಕಮಿಷನ್ ಆರೋಪ ನಿರಾಧಾರ: ರಮೇಶ ಜಾರಕಿಹೊಳಿ

0
67

ಅಥಣಿ 14: ರಾಜ್ಯದಲ್ಲಿ ನುಡಿದಂತೆ ನಡೆದು ಉತ್ತಮ ಆಡಳಿತ ನೀಡಿದ ಕಾಂಗ್ರೆಸ್ ಸರಕಾರದ ಮೇಲೆ ಪ್ರಧಾನಿ ಮೋದಿ ಶೇ.10 ಕಮಿಷನ್ ಸರಕಾರ ಎಂದು ಆರೋಪ ಮಾಡುವದು ನಿರಾಧಾರವಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆರೋಪಿಸಿದರು.
ತಾಲೂಕಿನ ರಡ್ಡೆರಹಟ್ಟಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೇರವೆರಿಸಿ ನಂತರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರಕಾರದ ಮೇಲೆ ಭ್ರಷ್ಠಾಚಾರ ಆರೋಪ ಮಾಡುವ ಪ್ರದಾನಿ ಮೋದಿ ಮತ್ತು ಅಮಿತ ಷಾ ತಮ್ಮ ಆಡಳಿತದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ,ರಾಜ್ಯ ಸರಕಾರದ ಬಗ್ಗೆ ಮಾಡುವ ಆರೋಪಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಎಸೆದರು.

ಈ ವೇಳೆ ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ,ಎಸ್ ಕೆ ಬುಟಾಳಿ,ಮಹೇಶ ಕುಮಠಳ್ಳಿ,ಎಸ್.ಎಂ ನಾಯಿಕ, ಗಜಾನನ ಮಂಗಸೂಳಿ, ಚಂದ್ರಕಾಂತ ಇಮ್ಮಡಿ, ಶ್ರೀಮಂತ ಪಾಟಿಲ, ಅರ್ಷದ ಗದ್ಯಾಳ, ಅನೀಲ ಸುಣದೋಳಿ, ಸತ್ಯಪ್ಪ ಬಾಗೆನ್ನವರ, ರಮೇಶ ಪಾಟೀಲ, ಸುರೇಶ ಪಾಟೀಲ,ಸಿದ್ದಾರ್ಥ ಶಂಗೆ, ಬಸವರಾಜ ಬುಟಾಳಿ, ಸಿದ್ರಾರಾಮಪ್ಪ ಬೆಳಂಕ್ಕಿ, ಶಾಮ ಪೂಜಾರಿ. ಸುನೀಲ ಸಂಕ, ವಿಜಯ ಅಕ್ಕಿವಾಟೆ,ರಾಜು ಜಮಖಂಡಿಕರ ನಿಂಗಪ್ಪ ನಂದೇಶ್ವರ, ಅಮೂಲ ನಾಯಿಕ ಮುಂತಾದವರು ಉಪಸ್ಥಿತರಿದ್ದರು. ಎಸ್ ಎಂ ನಾಯಿಕ ಸ್ವಾಗತಿಸಿದರು.

loading...