ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸವುದರ ನಿಮಿತ್ತ ಹೆಚ್ಚುವರಿ ರೈಲು ಮತ್ತು ಬೋಗಿಗಳ ಅಳವಡಿಕೆ

0
31

ಹುಬ್ಬಳ್ಳಿ : ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸವುದರ ನಿಮಿತ್ತ ಈಶಾನ್ಯ ರೇಲ್ವೆ ವಲಯವು ಹೌರ ಮತ್ತು ಯಶವಂತಪುರ ನಿಲ್ದಾಣಗಳಿಂದ ಹವನಿಯಂತ್ರಿತ ಸೂಪರ್ ಫಾಸ್ಟ್ ವಿಶೇಷ ರೈಲು ಪ್ರತಿ ಕಡೆಯಿಂದ ಎರಡು ಸಾರಿ ಸಂಚರಿಸಲು ನಿರ್ಧರಿಸಿದೆ. ಹೌರಾ-ಯಶವಂತಪುರ ಸೂಪರ್ ಫಾಸ್ಟ ವಿಶೇಷ ರೈಲು (00863/00864) ಹೌರಾ ನಿಲ್ದಾಣ ದಿಂದ ಡಿ.25 ರ ಶುಕ್ರವಾರ ರಂದು ಹಾಗೂ ಯಶವಂತಪುರ ನಿಲ್ದಾಣದಿಂದ ಡಿ.27 ರವಿವಾರದಂದು ಸಂಚರಿಸಲಿದೆ. ಹೌರಾ-ಯಶವಂತಪುರ ಎಸಿ ಸೂಪರ್ ಫಾಸ್ಟ ವಿಶೇಷ ರೈಲು (00863) ಡಿ.25 ರ ಶುಕ್ರವಾರ ಮಧ್ಯಾಹ್ನ 12.40 ಕ್ಕೆ ಹೌರಾ ನಿಲ್ದಾಣದಿಂದು ಚಲಿಸಿ ಶುಕ್ರವಾರ ರಾತ್ರಿ 11.15 ಕ್ಕೆ ಯಶವಂತಪುರ ಬಂದು ಸೇರುವದು ಯಶವಂತಪುರ-ಹೌರ ಸೂಪರ್ ಫಾಸ್ಟ್ ವಿಶೇಷ ರೈಲು (00864) ಡಿ.20 ಮತ್ತು 27 ರವಿವಾರ ಮುಂಜಾನೆ 10.45 ಕ್ಕೆ ಯಶವಂತಪುರ ನಿಲ್ದಾಣದಿಂದ ಸಂಚರಿಸಿ ಸೋಮವಾರ ಸಂಜೆ 6.30 ಕ್ಕೆ ಹೌರಾ ನಿಲ್ದಾಣ ಸೇರಲಿದೆ. ಈ ರೈಲು ಒಟ್ಟು 17 ಬೋಗಿಗಳನ್ನು ಒಳಗೊಂಡಿದೆ ಎಂದು ರೇಲ್ವೆ ವಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸವುದರ ನಿಮಿತ್ತ ನೈರುತ್ಯ ರೇಲ್ವೆ ವಲಯವು ಮೂರು ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. ಚೆನ್ನೈ-ಶ್ರೀ ಸತ್ಯಸಾಯಿ ಪ್ರಶಾಂತ ನಿಲಯಂ (ಎಸ್ ಎಸ್ ಪಿ ಎನ್ ) ಚೆನ್ನೈ ಎಕ್ಸ್ ಪ್ರೆಸ್ ರೈಲಿಗೆ (22601/22602) ಚೆನ್ನೈನಿಂದ 2016 ಫಬ್ರುವರಿ 3 ರ ವರಗೆ ಮತ್ತು ಎಸ್ ಎಸ್ ಪಿ ಎನ್ ನಿಂದ 2016 ರ ಫೆ.5 ರ ವರೆಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ 3 ಟೈರ್ ಬೋಗಿ ಸೇರಿಸುಲಾಗುತ್ತದೆ.ಈ ತಾತ್ಕಾಲಿಕ ಹೆಚ್ಚುವರಿ ಬೋಗಿಯಿಂದಾಗಿ ರೈಲು ಒಟ್ಟು 22 ಬೋಗಿಗೊಂದಿಗೆ ಸಾಗಲಿದೆ. ಚೆನ್ನೈ-ಮೈಸೂರ-ಚೆನ್ನೈ- ಶತಾಬ್ಧಿ ಎಕ್ಸ್‍ಪ್ರೆಸ್ (1200/12008) ರೈಲಿಗೆ ಎರಡೂ ನಿಲ್ದಾಣದಿಂದ 2016 ಫೆ.2 ರವರೆಗೆ ತಾತ್ಕಾಲಿಕವಗಿ ಒಂದು ಹೆಚ್ಚುವರಿ ಎಸಿ. ಚೇರ್ ಕರ್ ಸೇರಿಸಲಾಗಿದ್ದು ಇದರಿಂದಾಗಿ ರೈಲು ಒಟ್ಟು 14 ಬೋಗಿಗಳೊಂದಿಗೆ ಸಾಗಲಿದೆ. ಕೋಯಿಂಬತ್ತೂರ-ನಿಝಾಮುದ್ದೀನ-ಕೋಯಿಂಬತ್ತೋರಕೊಂಗು ಎಕ್ಸ್ ಪ್ರೆಸ್ ರೈಲಿಗೆ (12647/12648) ಕೋಯಿಂಬತ್ತೋರ ನಿಲ್ದಾಣದಿಂದ 2016 ಡಿ.7 ರವರೆಗೆ ಮತ್ತು ನಿಝಾಮುದ್ದೀನ ನಿಲ್ದಾಣದಿಂದ 2016 ರ ಫೆ.10 ರವರೆಗೆ ಒಂದು ಹೆಚ್ಚುವರಿ ಎಸಿ 3 ಟೈರ್ ಬೋಗಿಯನ್ನು ತಾತ್ಕಾಲಿಕವಗಿ ಸೇರಿಸಲಾಗಿದ್ದು ಈ ರೈಲು 23 ಬೋಗಿಗಳೊಂದಿಗೆ ಸಂಚರಿಸಲಿದೆ ಎಂದು ತಿಳಿಸಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here