ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವು

0
10

ಆಲಮಟ್ಟಿ: ಸಮೀಪದ ಚಿಮ್ಮಲಗಿ ಭಾಗ-೨ ಗ್ರಾಮದ ಬಂಜಾರಾ ಸಮಾಜದ ವತಿಯಿಂದ ಸಂಗ್ರಹಿಸಲಾಗಿದ್ದ ಆಹಾರ ಧಾನ್ಯಗಳನ್ನು ಪ್ರವಾಹ ಪೀಡಿತ ಜನರಿಗೆವಿತರಿಸಲಾಯಿತು.
೧೨ ಕ್ವಿಂಟಲ್ ಅಕ್ಕಿ, ಬಿಸ್ಕಿಟ್ ಬಾಕ್ಸ್, ತೊಗರಿಬೇಳೆ, ಎಣ್ಣೆ ಸೇರಿದಂತೆ ಇನ್ನಿÃತರ ಹಲವು ಪದಾರ್ಥಗಳನ್ನು ಜೀರಗಾಳ, ಇಂಗಳಗಿ, ಮಂಟೂರ, ಮಳಲಿ, ನಾಗರಾಳ ಗ್ರಾಮಗಳಲ್ಲಿ ಹಂಚಿಕೆ ಮಾಡಿದರು.

ಸಮಾಜದ ಮುಖಂಡರಾದ ನೀಲಪ್ಪ ಲಮಾಣಿ, ಹೋಬು ಲಮಾಣಿ, ರಮೇಶ ರಾಠೋಡ, ಮಹಾಂತೇಶ ಲಮಾಣಿ, ತುಕಾರಾಮ ರಾಠೋಡ, ಮಂಜುನಾಥ ಲಮಾಣಿ, ರಾಹುಲ್ ಲಮಾಣಿ, ಶ್ರಿÃಕಾಂತ ಲಮಾಣಿ ಇನ್ನಿÃತರರು ಇದ್ದರು.
ವಂದಾಲ ಗ್ರಾಮಸ್ಥರ ನೆರವು:

ವಂದಾಲ ಗ್ರಾಮಸ್ಥರು ನೆರೆ ಪೀಡಿತ ಸಂತ್ರಸ್ತರಿಗೆ ೩೦೦೦ ರೊಟ್ಟಿ, ೫೦ ಕ್ವಿಂಟಲ್ ಅಕ್ಕಿ, ೮ ಚೀಲ ಮುರಮುರಿ ಚೂಡಾ, ೨೦ ಕೆಜಿ ಶೇಂಗಾ ಚಟ್ನಿ, ೪ ಬಾಕ್ಸ್ ಬಿಸ್ಕಿಟ್, ೨೦ ಸೀರೆಗಳು, ೨೫ ಕೆಜಿ ತೊಗರಿ ಬೇಳೆಯನ್ನು ನಿಡಗುಂದಿ ತಾಲ್ಲೂಕು ಮಸೂತಿ ಗ್ರಾಮಕ್ಕೆ ತೆರಳಿ ಹಂಚಿದ್ದಾರೆ.
ವಂದಾಲ ಈಳಗೇರ ಪೆಟ್ರೊÃಲಿಯಂ ವತಿಯಿಂದ ಸಚಿನ ಈಳಗೇರ ಅವರು ನಿಡಗುಂದಿ ತಾಲ್ಲೂಕಿನ ಯಲ್ಲಮ್ಮನಬೂದಿಹಾಳ ಹಾಗೂ ಮಸೂತಿ ಗ್ರಾಮದಲ್ಲಿ ಸಂತ್ರಸ್ತ ೫೦ ಮಹಿಳೆಯರಿಗೆ ಸೀರೆ ವಿತರಿಸಿದರು.

loading...