ಪ್ರಾಥಮಿಕ ಶಾಲೆಗಳಿಗೆ ಪಾಠೋಪಕರಣ ವಿತರಣಾ ಸಮಾರಂಭ

0
24

ಹೊನ್ನಾವರ: ಸಿಸ್ಕೊÃ ಸಂಭ್ರಮ ಹಾಗೂ ಯೂಥ್ ಫಾರ್ ಸೇವಾ, ಬೆಂಗಳೂರು ಇವರ ಸಹಯೋಗದೊಂದಿಗೆ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಸ.ಹಿಪ್ರಾ.ಶಾಲೆ ಮಲಬಾರಕೇರಿ, ಮಾ.ಹಿ.ಪ್ರಾ.ಶಾಲೆ ಕಾಸರಕೋಡ, ಮಾ.ಹಿ.ಪ್ರಾ.ಶಾಲೆ ಹೊಸಪಟ್ಟಣ, ಸ.ಹಿ.ಪ್ರಾ.ಶಾಲೆ ಅಪ್ಸರಕೊಂಡ, ಸ.ಹಿಪ್ರಾ.ಶಾಲೆ ಕಳಸನಮೋಟೆ ಮತ್ತು ಕುಮಟಾ ತಾಲೂಕಿನ ಸ.ಹಿ.ಪ್ರಾ ಶಾಲೆ ಊರಕೇರಿ,
ಸ.ಹಿ.ಪ್ರಾ ಶಾಲೆ ಕಡವು, ಸ.ಹಿ.ಪ್ರಾ ಶಾಲೆ ವಾಲ್ಗಳ್ಳಿ ಶಾಲೆಗಳಿಗೆ ಪಾಠೋಪಕರಣ ವಿತರಣಾ ಸಮಾರಂಭವನ್ನು ಜನತಾ ವಿದ್ಯಾಲಯ ಕಾಸರಕೋಡಿನಲ್ಲಿ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಿಸ್ಕೊÃ ಸಂಭ್ರಮದ ಸಂಯೋಜಕರಾದ ರಾಜಶೇಖ ಮಾತನಾಡಿ ಸಿಸ್ಕೊÃ ಸಂಭ್ರಮ ಮತ್ತು ಯೂಥ್ ಫಾರ್‌ಸೇವಾದ ಪ್ರಾರಂಭ ಹಾಗೂ ಧ್ಯೆÃಯೋದ್ದೆÃಶಗಳನ್ನು ತಿಳಿಸುವುದರ ಜೊತೆಗೆ ಈ ಪಾಠೋಪಕರಣಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಸದುಪಯೋಗ ಪಡಿಸಿಕೊಂಡು ಮಕ್ಕಳ ಭವಿಷ್ಯ ಉಜ್ವಲವಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಅತಿಥಿಗಳಾದ ಡಾ.ಸುರೇಶ ನಾಯ್ಕ ಮಾತನಾಡಿ ಶಿಕ್ಷಣಕ್ಕೆ ಇಂತಹ ಪ್ರೊÃತ್ಸಾಹಗಳು ದೊರೆಯುತ್ತಿರಬೇಕು ಎಂದು ಹೇಳುತ್ತಾ ತಮ್ಮ ನೆನಪಿನೊಂದಿಗೆ ಮಕ್ಕಳಿಗೆ ಹಿತವಚನವನ್ನು ಆಡಿದರು.
ಅಶೋಕ ಕಾಸರಕೋಡ, ಅಧ್ಯಕ್ಷ ಕೆ.ಪಿ. ಶಾನಭಾಗ ಸಿಸ್ಕೊÃ ಸಂಭ್ರಮ ಹಾಗೂ ಯೂಥ್ ಫಾರ್ ಸೇವಾದ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯಾಧ್ಯಾಪಕರಾದ ಫಿಲೋಮಿನಾ ರೊಡ್ರಿಗೀಸ್ ಸ್ವಾಗತಿಸಿದರೆ. ಜಿ. ಎಸ್. ಭಟ್ಟ ಪ್ರಾಸ್ತಾವಿಕ ನುಡಿಯನ್ನು ನುಡಿದರು. ಅಶೋಕ ಜೋಸೆಫ್ ವಂದಿಸಿದರು. ವಿನಾಯಕ ಶೆಟ್ಟಿ ನಿರೂಪಿಸಿದರು. ಎಲ್ಲಾ ಶಾಲೆಗಳ ಮುಖ್ಯಾಧ್ಯಾಪಕರು ಸಹಶಿಕ್ಷಕರೊಡನೆ ಬಂದು ಪಾಠೋಪಕರಣಗಳನ್ನು ಪಡೆದುಕೊಂಡರುವುದು ವಿಶೇಷವಾಗಿತ್ತು.

loading...