ಪ್ರಾಮಾಣಿಕ ಪ್ರಯತ್ನದಿಂದ ಸಾಧನೆ ಸಾಧ್ಯ: ಚಂದ್ರಶೇಖರ ಶಿವಾಚಾರ್ಯರು

0
39

ಚಿಕ್ಕೋಡಿ 26: ಸಮಾಜದಲ್ಲಿ ನೋಂದು ಬೆಂದ ಬಡವರ ಬಾಳಿಗೆ ದಾರಿದೀಪವಾಗಿರುವ ಅಣ್ಣಾಸಾಹೇಬ ಜೊಲ್ಲೆ ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ ಮೂಲಕ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹ 6ನೇ ಪ್ರೇರಣಾ ಉತ್ಸವ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ವಿಕಲಾಂಗಚೇತನ ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿ ಜ್ಯೋತಿಪ್ರಸಾದ ಜೊಲ್ಲೆಯವರ ಕಾರ್ಯ ಅಮೋಘವಾಗಿದೆ ಎಂದರು.ಜೊಲ್ಲೆ ಉದ್ಯೋಗ ಸಮೂಹ ಯುವಕರ ಏಳ್ಗೆ, ಸಮಾಜದ ಅಭ್ಯುದಯಕ್ಕಾಗಿ ಕೈಗೊಳ್ಳುತ್ತಿರುವ ಪ್ರತಿಯೊಂದು ಕಾರ್ಯಗಳು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಭಾರತೀಯ ಸಂಸ್ಕೃತಿ, ಜಾನಪದ ಕಲೆ, ಸಾಹಿತ್ಯ, ಪರಂಪರೆಗಳನ್ನು ಇಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿ ಅವುಗಳನ್ನು ಸಂರಕ್ಷಣೆ ಹಾಗೂ ಅವುಗಳ ಮಹತ್ವದ ಕುರಿತಾಗಿ ಜಗಜ್ಜಾಹೀರು ಮಾಡುವುದೇ ಈ ಪ್ರೇರಣಾ ಉತ್ಸವದ ಪ್ರಧಾನ ಚಿಂತನೆಯಾಗಿದ್ದು, ಸಾಮಾಜಿಕ ಮೌಲ್ಯಗಳನ್ನು ಉನ್ನತೀಕರಣಗೊಳಿಸುವುದೇ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಸಹಕಾರ ರತ್ನ ಅಣ್ಣಾಸಾಹೇಬ ಜೊಲ್ಲೆ, ಆಶಾಜ್ಯೋತಿ ಬುದ್ದಿಮಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬಸವಜ್ಯೋತಿ ಯುಥ್‌ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಜ್ಯೋತಿ ವಿವಿಧ ಉದ್ಧೆಶಗಳ ಸಂಘದ ಉಪಾಧ್ಯಕ್ಷರಾದ ದಿನಕರ ಪೇಟಕರ, ನಿರ್ದೇಶಕರಾದ ಕಲ್ಲಪ್ಪಾ ಜಾಧವ, ಉಪ ಪ್ರಧಾನ ವ್ಯವಸ್ಥಾಪಕರಾದ ಎಮ.ಕೆ. ಮಂಗಾವತೆ, ಜ್ಯೋತಿ ಸೋಸೈಟಿಯ ಪ್ರಧಾನ ವ್ಯವಸ್ಥಾಪಕರಾದ ವಿಜಯ ಕಡಕಭಾವಿ, ಜ್ಯೋತಿ ಸೋಸೈಟಿಯ ಮಾಜಿ ಪ್ರಧಾನ ವ್ಯವಸ್ಥಾಪಕರಾದ ಮುರುಗೇಶ ಪಾಟೀಲ, ಬೀರೇಶ್ವರ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಹಕಾರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಇದ್ದರು. ರಮೇಶ ಪಾಟೀಲ ನಿರೂಪಿಸಿದರು.

loading...