ಪ್ರೀತಿ ಮಾಡಿದ ತಪ್ಪಿಗೆ ಪ್ರೀಯಕರನ ಕೊಲೆ

0
24
ಬೆಳಗಾವಿ
ಪ್ರೀತಿ ಮಾಡಿ‌ ವಿವಾಹ ಆಗಲು ಮುಂದಾಗಿದ್ದ ಪ್ರೇಮಿಗಳಿಗೆ ಪ್ರೇಯಸಿಯ ಚಿಕ್ಕಪ್ಪನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಅರವಿಂದ (38)  ಎಂದು ಗುರುತಿಸಲಾಗಿದೆ. ಪ್ರೇಯಸಿಯ ಚಿಕ್ಕಪ್ಪ  ಸುಪಾರಿ ಕೊಟ್ಟು ಕೊಲೆ ಮಾಡಿಸಲು ಅರವಿಂದನ  ಚಿಕ್ಕಮ್ಮಳ ಸಹ ಇದಕ್ಕೆ ಕೈ ಕೂಡಿಸಿದ್ದಳು ಎನ್ನಲಾಗುತ್ತಿದೆ.
ಅರವಿಂದನ ತಲೆಯ ಮೇಲೆ ಕಲ್ಲು ಹಾಕಿ  ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿ ಕಲ್ಲು ಕ್ವಾರಿಯಲ್ಲಿ ಶವ ಬಿಸಾಕಿದ್ದ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸತೀಶ್, ರವಿ, ಶೀತಲ್, ಮತ್ತು ಶುಭಂ ಸೇರಿ ಓರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
loading...