ಪ್ರೀತಿ ವಿಶ್ವಾಸದಿಂದ ಬದುಕಿದಾಗ ವಿಘ್ನ ನಿವಾರಣೆ ಸಾಧ್ಯ

0
23

ಗೋಕಾಕ; 17-ಕೌಟುಂಬಿಕ ಬಾಂಧವ್ಯಗಳನ್ನು ವೃದ್ದಿಸುವುದರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಿದಾಗ ಮಾತ್ರ ವಿಘ್ನ ನಿವಾರಣೆ ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ವಸಂತ ಕುಲಕರ್ಣಿ ಹೇಳಿದರು.

ಅವರು, ಭಾನುವಾರದಂದು ನಗರದ ರೋಟರಿ ರಕ್ತ ಭಂಢಾರದ ಸಭಾಭವನದಲ್ಲಿ ಇಲ್ಲಿಯ ವಿವೇಕ ಚಿಂತನ ವೇದಿಕೆಯವರು ಆಯೋಜಿಸಿದ್ದ ವಿಘ್ನಗಳು ವಿಜಯದ ಮೆಟ್ಟಿಲುಗಳು ಎಂಬ ವಿಷಯದ ಉಪನ್ಯಾಸ ನೀಡುತ್ತ ಹೇಳಿದರು. ವಿಘ್ನಗಳು ವಿಜಯಕ್ಕೆ ದಾರಿಯಾಗುತ್ತವೆ. ಜೀವನದ ಕಹಿ ಅನುಭವಗಳು ಮುಂದಿನ ಸಿಹಿ ಬಾಳಿಗೆ ನಾಂದಿಯಾಗುತ್ತವೆ. ಸರಿಯಾದ ಕ್ರಮದಲ್ಲಿ ಜೀವನವನ್ನು ರೂಪಿಸಿಕೊಳ್ಳುವ ಸಂದೇಶವನ್ನು ವಿಘ್ನೇಶ್ವರ ನಮಗೆ ನೀಡಿದ್ದಾನೆ. ಜಾತೀಯ ಬಲೆಯಲ್ಲಿ ಸಿಲುಕಿ ಮಾನವೀಯ ಮೌಲ್ಯಗಳನ್ನು ಮರೆಯುತ್ತಿರುವ ಇಂದಿನ ದಿನಗಳಲ್ಲಿ ಸಂತ್ಸಂಗ ಚಿಂತನೆಗಳ ಮೂಲಕ ವಿಘ್ನ ನಿವಾರಿಸಿಕೊಳ್ಳುವಂತೆ ಸಲಹೆ ನೀಡಿದರು. ಅಧ್ಯಕ್ಷತೆಯನ್ನು ಗೋಕಾಕ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಚೇರಮನ್ ಗಂಗಪ್ಪಣ್ಣ ತಾಂವಶಿ ವಹಿಸಿದ್ದರು.

ವೇದಿಕೆಯ ಮೇಲೆ ರೋಟರಿ ರಕ್ತ ಭಂಢಾರದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೌಳ್ಳಿ ವಿವೇಕ ಚಿಂತನ ವೇದಿಕೆಯ ಗೌರವ ಅಧ್ಯಕ್ಷ ನಾರಾಯಣ ಶರಣರು, ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಖಜಾಂಚಿ ಶಾಮರಾವ್ ಕರಿಕಟ್ಟಿ, ಬಸವಣ್ಣಿ ಸಣ್ಣಕ್ಕಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯದರ್ಶಿ ಸದಾನಂದ ಗುಡ್ಡಕಾಯು ಸ್ವಾಗತಿಸಿದರು. ಅರ್ಜುನ ಖಾನಾಪೂರ ನಿರೂಪಿಸಿದರು. ಉಪನ್ಯಾಸಕಿ ಅನ್ನಪೂರ್ಣ ಶೆಟ್ಟೆನ್ನವರ ವಂದಿಸಿದರು

loading...

LEAVE A REPLY

Please enter your comment!
Please enter your name here