ಪ್ರೆಂಚ್‌ ಓಪನ್‌ಗೆ ನವೋಮಿ ಒಸಾಕ

0
11

ಟೋಕಿಯೋ:- ಗಾಯದಿಂದಾಗಿ ಕಳೆದ ವಾರ ಇಟಾಲಿಯನ್ ಓಪನ್ ನಿಂದ ವಿಥ್ ಡ್ರಾ ಮಾಡಿಕೊಂಡಿದ್ದ ವಿಶ್ವದ ನಂ.1 ಟೆನಿಸ್ ಮಹಿಳಾ ಆಟಗಾರ್ತಿ ನವೋಮಿ ಒಸಾಕ ಅವರು ಮುಂಬರುವ ಪ್ರೆಂಚ್ ಓಪನ್‌ಗೆ ಮರಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಜನವರಿಯಲ್ಲಿ ಒಸಾಕ ಅವರು ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ನಲ್ಲಿ ಸೆರೇನಾ ವಿಲಿಯಮ್ಸ್ ವಿರುದ್ಧ ನಾಟಕೀಯ ಗೆಲುವು ಪಡೆದು ಚಾಂಪಿಯನ್ ಆಗಿದ್ದರು. ಇದೀಗ ಪ್ರೇಂಚ್ ಓಪನ್ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ ವಾರ ರೋಮ್‌ನಲ್ಲಿ ನಡೆದಿದ್ದ ಇಟಾಲಿಯನ್ ಓಪನ್ ನಲ್ಲಿ ಅವರ ಕೈಗೆ ಗಾಯವಾಗಿತ್ತು. ಹಾಗಾಗಿ, ಕಿಕಿ ಬರ್ಟನ್ಸ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ವಿಥ್ ಡ್ರಾ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಅವರು ಕಳೆದ ತಿಂಗಳು ಹೊಟ್ಟೆಯ ಭಾಗದಲ್ಲಿ ನೋವು ಅನುಭವಿಸಿದ್ದರು. ಕೆಲ ಕಾಲ ವಿಶ್ರಾಂತಿಗೆ ಮೊರೆ ಹೋಗಿದ್ದರು.
21ರ ಪ್ರಾಯದ ನವೋಮಿ ಒಸಾಕ ಅವರು ಪ್ರೆಂಚ್ ಓಪನ್‌ಗೆ ಫಿಟ್ನೆಸ್ ಹಾಗೂ ಲಯದೊಂದಿಗೆ ಆಗಮಿಸಲಿದ್ದಾರೆ. ಹಾರ್ಡ್‌ಕೋರ್ಟ್‌ಗಳಲ್ಲಿ ಬಲಶಾಲಿಯಾಗಿ ಪ್ರದರ್ಶನ ತೋರುವ ಒಸಾಕ ಅವರು ಕಳೆದ ವರ್ಷ ಎರಡು ಗ್ರ್ಯಾನ್ ಸ್ಲ್ಯಾಮ್ ಗೆದ್ದಿದ್ದರು. ಆದರೆ, ಮಣ್ಣಿನ ಅಂಗಳದಲ್ಲಿ ಅವರು ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಫ್ರೆಂಚ್‌ ಓಪನ್‌ ಇದೇ 26 ರಂದು ಶುರುವಾಗಲಿದೆ.

loading...