ಫಲವತ್ತತೆಯ ಬೆಳೆಗೆ ಮಣ್ಣಿನ ಸವಕಳಿ ತಡೆಯಬೇಕು: ಮುಂದಿನಮನಿ

0
19

ಬAಕಾಪುರ: ರೈತರು ಫಲವತ್ತತೆ ಬೆಳೆ ಬೆಳೆಯಬೇಕಾದೆ ಮಣ್ಣು ಸವಕಳಿಯನ್ನು ತಡೆಯಬೇಕಾದ ಅವಸ್ಯಕತೆಯಿದೆ ಎಂದು ಬಂಕಾಪುರ ರೈತ ಸಂಪರ್ಕ ಕೇದ್ರದ ಕೃಷಿ ಅಧಿಕಾರಿ ಎಚ್.ಆರ್.ಮುಂದಿನಮನಿ ಹೇಳಿದರು.
ಅವರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು ಒಂದು ಇಂಚು ಮಣ್ಣು ಉತ್ಪತ್ತಿಯಾಗಬೇಕಾದರೆ ಸಾವಿರಾರು ವರ್ಷಗಳು ಬೇಕಾಗುತ್ತದೆ. ಆದ್ದರಿಂದ ರೈತರು ತಮ್ಮ, ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿ ಬದುವಿನ ಗುಂಟ ಗಿಡಗಳನ್ನು ಬೇಳೆಸುವದರಮೂಲಕ ಮಣ್ಣು ಸವಕಳಿಯನ್ನು ತಡೆದು ಉತ್ತಮ ಫಸಲು ಬೆಳೆಯುವಂತೆ ರೈತರಿಗೆ ಕರೆ ನೀಡಿದರು.
ಬೆಳೆ ಬೆಳೆಯುವದಕ್ಕೀಂತ ಪೂರ್ವದಲ್ಲಿ ರೈತರು ತಮ್ಮ ಹೋಲದ ಮಣ್ಣನ್ನು ಪರೀಕ್ಷೆಗೆ ಒಳಪಡೆಸಿ ಕಡಿಮೆ ಇರುವ ಪೋಸಕಾಂಶವನ್ನು ಭೂಮಿಗೆ ಒದಗಿಸಿದಾಗ ಮಾತ್ರ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. ರೈತರು ಹೆಚ್ಚಿನ ಇಳುವರಿ ಪಡೆಯುವ ದುರಾಸೆಯಿಂದಾಗಿ ಹೆಚ್ಚಾಗಿ ರಾಸಾಯನಿಕ ಗೋಬ್ಬರವನ್ನು ಬಳಸುತ್ತಿದ್ದಾರೆ. ಇದರಿಂದ ಭೂಮಿಯಲ್ಲಿರುವ ಪೋಷಕಾಂಶಗಳು ನಾಶವಾಗಿ ಭೂಮಿ ಬರುಡಾಗುತ್ತಿದೆ ಇದನ್ನು ತಡೆದು ಉತ್ತಮ ಫಸಲನ್ನು ಪಡೆಯಬೇಕಾದರೆ ಹೆಚ್ಚಾಗಿ ಸಾವಯುವ ಗೋಬ್ಬರವನ್ನು ಬಳಸುವಂತೆ ಸೂಚಿಸಿದರು.
ಬಾಡ ಗ್ರಾ.ಪಂ.ಸದಸ್ಯರಾದ ಜಗದೀಶ ಸಿದ್ದಪ್ಪನವರ ಮಾತನಾಡಿ ಸರಕಾರದ ಜಲಾಮೃತ ಯೋಜನೆ ರೈತರಿಗೆ ಒರದಾನವಾಗಿದ್ದು, ಈ ಯೋಜನೆಯಲ್ಲಿ ಬರುವ ಬದು ನಿರ್ಮಾಣ, ಇಂಗು ಗುಂಡಿ, ಕೃಷಿ ಹೋಂಡಗಳನ್ನು ತಯಾರಿಸಿ ಭೂಮಿಯ ತೇವಾಂಶವನ್ನು ಕಾಪಾಡಿಕೋಂಡು ಉತ್ತಮ ಬೆಳೆಯನ್ನು ಬೇಳೆದು ಒಳ್ಳೆಯ ಆದಾಯವನ್ನು ಪಡೆಯುವಂತೆ ರೈತರಿಗೆ ಸೂಚಿಸಿದರು.
ರೈತರಾದ ಶಿವಪ್ಪ ತೋಂಡೂರ, ವಿಜಯಪ್ಪ ಬಾರಿಗಿಡದ, ಎಂಕಪ್ಪ ಲಮಾಣಿ ಸಿಂಬAದಿಗಳಾದ ಎಂ.ಆರ್.ಮೆಳ್ಳಾಗಟ್ಟಿ, ಬಸವರಾಜ ಗಂಗಣ್ಣನವರ, ಗಿರೀಶ ಮಿರ್ಜಿ, ಮಂಗಳಾ ಪಾಟೀಲ, ಮಂಜುನಾಥ ಈರಪ್ಪನವರ, ಶಂಕ್ರಪ್ಪ ಹಿರೇಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...