ಫಾಗಿಂಗ್ ಬ್ಲಿಚಿಂಗ್ ಸಿಂಪಡಣೆಗೆ ಶಾಸಕ ಸತೀಶ ಜಾರಕಿಹೊಳಿ ಸೂಚನೆ

0
52

ಫಾಗಿಂಗ್ ,ಬ್ಲಿಚಿಂಗ್ ಸಿಂಪಡಣೆಗೆ ಶಾಸಕ ಸತೀಶ ಜಾರಕಿಹೊಳಿ ಸೂಚನೆ

ಕನ್ನಡಮ್ಮ ಸುದ್ದಿ -ಹುಕ್ಕೇರಿ -ಕೊರೋನ ರೋಗ ಹರಡುವಿಕೆ ನಿಯಂತ್ರಣಕ್ಕೆ ಸಾಮಾಜಿಕ ಅಂತರದ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಅವಶ್ಯಕತೆಯಿದ್ದು ,ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಫಾಗಿಂಗ್ ಹಾಗೂ ಬ್ಲಿಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು .

ಇಂದು ಹುಕ್ಕೇರಿ ತಾಲೂಕು ಪಂಚಾಯತಿಯ ಸಭಾ ಭವನದಲ್ಲಿ ಕರೋನ ನಿಯಂತ್ರಣ ಜಾಗೃತಿಗಾಗಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು . ಕರೋನ ರೋಗ ಹರಡುವಿಕೆ ನಿಯಂತ್ರಣಕ್ಕೆ ಇಡಿ ದೇಶ್ಯಾದ್ಯಂತ ಲಾಕ್ ಡೌನ್ ಆದೇಶ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಪರದಾಡುತ್ತಿದ್ದಾರೆ . ಅಗತ್ಯವಾದ ವಸ್ತುಗಳಿಗೆ ಅಧಿಕ ಬೆಲೆ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು .

ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸುವುದರೊಂದಿಗೆ ಅವರ ಆರೋಗ್ಯ ರಕ್ಷಣೆ ಮಾಡುವುದು ನಮ್ಮಲ್ಲರೆ ಹೊಣೆಯಾಗಿದೆ. ಆದ ಕಾರಣ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು .

ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾತನಾಡಿ ರೈತರಿಗೆ ಯಾವುದೇ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಲಾಕ್ ಡೌನ ಆದೇಶದಿಂದ ರೈತರು ತೊಂದರೆಕ್ಕಿಡಾಗಬಾರದೆಂದರು .

ಸಭೆಯಲ್ಲಿ ತಾಲೂಕು ಪಂಚಾಯತಿ ಎಇಒ ಎಂ.ಎಸ್ ಬಿರಾದರ ಪಾಟೀಲ , ತಹಶಿಲ್ದಾರರ ಅಶೋಕ ಗುರಾಣಿ ಹಾಗೂ ಸಿಪಿಐ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು .

loading...