ಫಿಫಾ ಮಹಿಳಾ ವಿಶ‍್ವಕಪ್: ಒಂದು ದಶಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ

0
5

ಪ್ಯಾರಿಸ್, ಫ್ರಾನ್ಸ್ ನಲ್ಲಿ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಮಹಿಳಾ ಫುಟ್ಬಾಲ್ ವಿಶ‍್ವಕಪ್ ವಿಕ್ಷಣೆಗೆ ಇದುವರೆಗೆ ವಿಶ್ವದಾದ್ಯಂತ ಒಂದು ದಶಲಕ್ಷ ಹೆಚ್ಚು ಟಿಕೆಟ್ ಗಳು ಮಾರಾಟವಾಗಿವೆ ಎಂದು ಫಿಫಾ ತಿಳಿಸಿದೆ.
ವಿಶ್ವದ ಮಹತ್ವದ ಫುಟ್ಬಾಲ್ ಟೂರ್ನಾಮೆಂಟ್ ಚಾಲನೆಗೊಂಡು ನಾಲ್ಕು ದಿನಗಳು ಕಳೆದಿದ್ದು, ಇದುವರೆಗೆ ವಿಶ್ವದಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಟಿಕೆಟ್ ಗಳು ಮಾರಾಟವಾಗಿವೆ ಎಂದು ವಿಶ‍್ವ ಫುಟ್ಬಾಲ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.
52 ಪಂದ್ಯಗಳ ಪೈಕಿ ಪ್ಯಾರಿಸ್ ನಲ್ಲಿ ನಡೆದ ಆತಿಥೇಯ ಫ್ರಾನ್ಸ್ ಹಾಗು ದಕ್ಷಿಣ ಕೊರಿಯಾ ನಡುವಿನ ಉದ್ಘಾಟನಾ ಪಂದ್ಯ ಸೇರಿದಂತೆ 14 ಪಂದ್ಯಗಳ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಫಿಫಾ ತಿಳಿಸಿದ್ದು, ಫಿಫಾ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಗಳು ಲಭ್ಯವಿವೆ. 9 ಯುರೋ ಮೇಲ್ಪಟ್ಟು ಟಿಕೆಟ್ ದರ ನಿಗದಿ ಮಾಡಲಾಗಿದೆ.
ಸೆಮಿಫೈನಲ್ಸ್ ಹಾಗೂ ಫೈನಲ್ಸ್ ಸೇರಿದಂತೆ 14 ಪಂದ್ಯಗಳ ಟಿಕೆಟ್ ಗಳು ಮಾರಾಟವಾಗಿದ್ದು, ಜೂನ್ 7ರಿಂದ ಜುಲೈ 7ರವರೆಗೆ ಚತುವಾರ್ಷಿಕ ಫುಟ್ಬಾಲ್ ಸರಣಿ ನಡೆಯುತ್ತಿದೆ.

loading...