ಫೆ.12 ರಂದು ಕನ್ನಡ ಸಾಹಿತ್ಯ ಸಮ್ಮೇಳನ

0
48

ನಾಲತವಾಡ: 3 ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದಲ್ಲೇ ಫೆ.12 ರಂದು ಆಚರಿಸಲು ಇಲ್ಲಿಯ ಶ್ರೀ ವೀರೇಶ್ವರರ ಮಹಾಮನೆಯಲ್ಲಿ ಎಂ.ಎಸ್‌.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕರೆಯಲಾದ ಪೂರ್ವ ಭಾವಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ವೇಳೆ ತಾಲೂಕಾ ಕಸಾಪ ಅಧ್ಯಕ್ಷರಾದ ಎಂ.ಬಿ.ನಾವದಗಿ ಮಾತನಾಡಿ ಅಂದು ನೆಡೆಯಲಿರುವ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಂಪನ್ಮೂಲದ ಕ್ರೋಢಿಕರಣದ ಅವಶ್ಯವಿದ್ದು ಪಟ್ಟಣದ ಗಣ್ಯರು ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು.ನಾಲತವಾಡ ವ್ಯಾಪ್ತಿಯ ಎಲ್ಲಾ ಗ್ರಾಮದ ಕನ್ನಡಪರ ಸಂಘಟಕರು, ಚಿಂತಕರು, ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ಸಮ್ಮೇಳನದ ಯಶಸ್ವಿಗೆ ಇಂದಿನಿಂದ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.

ತೀರ್ಮಾನ: ಸಮ್ಮೇಳದಲ್ಲಿ ಪ್ರಮುಖವಾಗಿ ವೇದಿಕೆಯ ನಾಮಕರಣ, ಮಹಾಮಂಟಪ ನಾಮಕರಣ, ಮಹಾದ್ವಾರ, ದಾಸೋಹ ಮನೆ, ಪುಸ್ತಕ ಮಳಿಗೆಯ ನಾಮಕರಣ ಮಾಡಲಾಯಿತು. ಸರ್ವಾಧ್ಯಕ್ಷರು, ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಕೋಶಾಧ್ಯಕ್ಷರು, ಹಣಕಾಸು ಸಮೀತಿ, ಪ್ರಚಾರ ಸಮೀತಿ, ಮೆರವಣಿಗೆ ಸಮೀತಿ, ಲಾಂಛನ ಬಿಡುಗಡೆ, ಕವಿ ಗೋಷ್ಠಿ, ಉಪನ್ಯಾಸ, ಆಹಾರ ಸಮೀತಿ, ಮಹಿಳಾ ಸಮೀತಿ, ಪ್ರಚಾರ ಸಾಮಗ್ರಿಗಳ ಬಿಡುಗಡೆ, ವೇದಿಕೆಯ ಉದ್ಘಾಟನೆ, ಸಂಸೃತಿಕ ಕಾರ್ಯಕ್ರಮಗಳು, ಕಲಾ ತಂಡಗಳ ಆವ್ಹಾನ, ಮಹಿಳಾ ಸಂಘಗಳು ಭಾಗವಹಿಸುವಿಕೆ, ದಾಸೋಹ ಕಾರ್ಯ, ಸನ್ಮಾನ ಇತ್ಯಾದಿ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿ ಆಯಾ ಅರ್ಹರು ಮೇಲಿನ ಎಲ್ಲಾ ಜವಾಬ್ದಾರಿ ನಿಭಾಯಿಸಲು ತಿಳಿಸಿದಾಗ ಸರ್ವಾನುಮತದಿಂದ ಎಲ್ಲರೂ ಒಪ್ಪಿಗೆ ಸೂಚಿಸಿದರು. ಈ ವೇಳೆ ಕಸಾಪ ಅಧ್ಯಕ್ಷರಾದ ಎಂ.ಬಿ.ನಾವದಗಿ, ನಾನಾಸಾಹೇಬ ದೇಶಮುಖ, ರೋಹಿತ್‌ ದೇಶಮುಖ, ಬಿಜೆಪಿ ಧುರಿಣರಾದ ಎಂ.ಎಸ್‌.ಪಾಟೀಲ, ಪ್ರಭು ಹಿರೇಮಠ, ಸಿ.ಬಿ.ಇಟಗಿ, ಎ.ಜಿ.ಗಂಗನಗೌಡ್ರ, ಮುತ್ತು ಅಂಗಡಿ, ಜಹಾಂಗೀರ್‌ ಮುಲ್ಲಾ, ಎಂ.ಜಿ. ಕಿತ್ತೂರ, ಬಿ.ಪಿ.ಪಾಟೀಲ, ಬಸವರಾಜ ತಾಳಿಕೋಟ, ಬಿ.ಟಿ.ತಿರುಮುಖೆ, ಬಸವರಾಜ ಇಲಕಲ್‌, ಬಸವರಾಜ ಚಿನಿವಾಲರ, ಸಿ.ಎಸ್‌.ಹಿರೇಮಠ, ಎಸ್‌.ಎಸ್‌.ಹಿರೇಮಠ, ಡಾ.ಡಿ.ಆರ್‌.ಮಳಖೇಡ್‌, ಸಿ.ಎಸ್‌.ಸಜ್ಜನ, ಸಂಗಣ್ಣ ಚಿನಿವಾಲರ, ಗುರಪ್ಪ ಬಿದರಕುಂದಿ ಇದ್ದರು.

loading...

LEAVE A REPLY

Please enter your comment!
Please enter your name here