ಫ್ರೆಂಚ್ ಓಪನ್: ಮಾರಿಯಾ ಶರಪೋವಾ ಹೊರಕ್ಕೆ

0
1
PARIS, FRANCE - MAY 25: Maria Sharapova of Russia looks on during a practice session ahead of the French Open at Roland Garros on May 25, 2018 in Paris, France. (Photo by Cameron Spencer/Getty Images)

ಪ್ಯಾರೀಸ್:- ಎರಡು ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಮಾರಿಯಾ ಶರಪೋವಾ ಭುಜದ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ್ದರಿಂದ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಶರಪೋವಾ ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿದ್ದು, ಕೆಲವೊಮ್ಮೆ ಸರಿಯಾದ ನಿರ್ಧಾರಗಳು ಸುಲಭವಾಗಿರಲ್ಲ. ಖುಷಿಯ ಸಂಗತಿ ಎಂದರೆ, ಅಭ್ಯಾಸ ಪಂದ್ಯದಲ್ಲಿ ಭಾಗವಹಿಸುವೆ. ಇದರಿಂದ ಕೊಂಚ ಸುಧಾರಿಸಿಕೊಳ್ಳಲು ಸಹಾಯ. ಟೂರ್ನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷ ಬರಲಿದ್ದೇನೆ ಎಂದು ತಿಳಿಸಿದ್ದಾರೆ.
ಮಾರಿಯಾ ಶರಪೋವಾ ಅವರು ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಜನವರಿ ಬಳಿಕ ಯಾವುದೇ ಟೂರ್ನಿಯನ್ನು ಆಡಿಲ್ಲ. ಕಳೆದ ವರ್ಷ ಶರಪೋವಾರ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಮಾರಿಯಾ ಅವರು 2012, 2014 ರಲ್ಲಿ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯು ಮೇ 26 ರಿಂದ ಆರಂಭವಾಗಲಿದ್ದು, ರಾಫೆಲ್ ನಡಾಲ್ ಹಾಗೂ ಸಿಮೋನ್ ಹಾಲೆಪ್ ಅವರು ಹಾಲಿ ಚಾಂಪಿಯನ್ ಆಗಿದ್ದಾರೆ.

loading...