ಬಡವರ ಆಧಾರ ಸ್ತಂಭ ‘ಆಧಾರ’ಗಾಗಿ ತಪ್ಪುತ್ತಿಲ್ಲ ಸಾರ್ವಜನಿಕರ ಅಲೆದಾಟ

0
28

* ಬಸವರಾಜ ದಂಡಿನ
ಗದಗ: ಬಡತನ ರೇಖೆಗಿಂತ ಕೆಳಗಿರುವ ಬಿ.ಪಿ.ಎಲ್ ಪಡಿತರ ಕಾರ್ಡದಾರರು, ತಮ್ಮ ಇರುವಿಕೆಯ ವಾಸ್ತವಿಕತೆಯನ್ನು ಸಾಭೀತುಗೊಳಿಸಲು ಆಧಾರ ಸ್ತಂಬವಾಗಲಿರುವ ‘ಆಧಾರ’ ಕ್ಕಾಗಿ ಗದಗ ಜಿಲ್ಲೆಯ ಸಾರ್ವಜನಿಕರ ಅಲೆದಾಟ ನಿತ್ಯ ನಿರಂತರವಾಗಿದೆ.
ಆಧಾರ ಕಾರ್ಡಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಹಾಗೂ ಆಧಾರ ಕಾರ್ಡನ ತಿದ್ದುಪಡಿ ಕಾರ್ಯಕ್ಕೆ ಸಾರ್ವಜನಿಕರ ಅಲೆದಾಟ ತಪ್ಪುವಂತೆ ಕಾಣುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಹಾಗೂ ಇತರ ಸೌಲಭ್ಯಕ್ಕಾಗಿ ಎಲ್ಲದಕ್ಕೂ ಆಧಾರ ಕಾರ್ಡನ್ನು ಆಧಾರವಾಗಿ ಕೇಳುವರು ಆದರೆ ಸಾರ್ವಜನಿಕರಿಗೆ ಆಧಾರ ಸರಿಯಾಗಿ ಸಿಗುತ್ತಿಲ್ಲ ಇದರಿಂದಾಗಿ ಜನತೆಗೆ ತೀವ್ರ ತೊಂದರೆಯಾಗಿದೆ.
ಆಧಾರ ಕಾರ್ಡಗಾಗಿ ಅರ್ಜಿ ಸಲ್ಲಿಸಿದಾಗ ಅರ್ಜಿ ನಮೂನೆಯಲ್ಲಿ ಅರ್ಜಿದಾರರು ಭರ್ತಿ ಮಾಡಿರುವ ಮಾಹಿತಿಯ ಪ್ರಕಾರ ಆಧಾರ ಕಾರ್ಡಗಳು ಸಿದ್ಧಗೊಳ್ಳುತ್ತಿಲ್ಲ, ಅರ್ಜಿ ಸಲ್ಲಿಸಿ ಆಧಾರ ಕಾರ್ಡಗಾಗಿ ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಉಂಟಾಗಿದೆ. ಸಿದ್ಧಗೊಂಡು ಬಂದ ಆಧಾರ ಕಾರ್ಡಗಳಲ್ಲಿ ಹೆಸರು, ಜನ್ಮ ದಿನಾಂಕ, ಅಂಚೆ ವಿಳಾಸ ಹಾಗೂ ಇತರ ಮಾಹಿತಿಗಳು ಸರಿಯಾಗಿಲ್ಲ ನೋಂದಣಿ ಮಾಡುವವರ ಅನುಭವದ ಕೊರತೆಯಿಂದಾಗಿ ಆಧಾರ ಕಾರ್ಡಗಳು ತಪ್ಪು ತಪ್ಪಾಗಿ ಬಂದಿವೆ.
ಪುನಃ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರು ಅಲೆದಾಡುವಂತಾಗಿದೆ. ನೋಂದಣಿ ಮಾಡುವ ವ್ಯಕ್ತಿಯ ತಪ್ಪಿನಿಂದಾಗಿ ಜನತೆ ತೊಂದರೆ ಅನುಭವಿಸುವಂತಾಗಿದೆ. ಆಧಾರ ಕಾರ್ಡನ್ನು ಹೊಸದಾಗಿ ಮಾಡಿಸಲು ಹಾಗೂ ತಿದ್ದುಪಡಿ ಮಾಡಿಸಲು ಬ್ಯಾಂಕ, ಅಂಚೆ ಕಚೇರಿ, ಜಿಲ್ಲಾಡಳಿತ ಭವನ ಮುಂತಾದೆಡೆ ವ್ಯವಸ್ಥೆ ಮಾಡಿದ್ದರೂ ಸಹ ಅಲ್ಲಿಯೂ ಸಹ ಜನತೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಆಧಾರ ಕಾರ್ಡ ನೋಂದಣಿ, ತಿದ್ದುಪಡಿ ಮಾಡುವವ ವ್ಯಕ್ತಿ ಸರಿಯಾಗಿ ಕಾರ್ಯನಿರ್ವಹಿಸದಿರುವದು, ಅವರಿಗೇ ಸರಿಯಾಗಿ ಮಾಹಿತಿ ಇಲ್ಲದಿರುವದು, ಕಂಪ್ಯೂಟರ್ ರಿಪೇರಿ, ವಿದ್ಯುತ್ ಕಡಿತ, ನೆಟ್‌ವರ್ಕ ಸರ್ವರ್ ಸಮಸ್ಯೆ, ಸಿಬ್ಬಂದಿ ಕೊರತೆ ಅಲ್ಲದೆ ಬ್ಯಾಂಕ್‌ನವರು ಇದು ನಮ್ಮ ಕೆಲಸ ಅಲ್ಲ ಜಿಲ್ಲಾಡಳಿತ ಭವನಕ್ಕೆ, ಪ್ರಧಾನ ಅಂಚೆ ಕಚೇರಿಗೆ ಹೋಗಿ ಎಂದು ಮುಗ್ದ ಜನತೆಯನ್ನು ಅಲೆದಾಡಿಸುತ್ತಿರುವದು ಸಾರ್ವಜನಿಕರ ಆಕ್ರೊÃಶಕ್ಕೆ ಕಾರಣವಾಗಿದೆ.
ಪಡಿತರ ದಿನಸಿಗಳನ್ನು ಪಡೆಯಲು ಆಧಾರ ಕಡ್ಡಾಯ ಎಂದು ಮಾಡಿದ್ದರಿಂದ ಜನತೆ ಅದರಲ್ಲೂ ವಿಶೇಷವಾಗಿ ಬಿ.ಪಿ.ಎಲ್ ಕಾರ್ಡ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಬಡಕುಟುಂಬದವರು ತಮ್ಮ ದಿನನಿತ್ಯದ ಉದ್ಯೊÃಗ ಕೂಲಿ ಬಿಟ್ಟು, ಕುಟುಂಬದ ಸದಸ್ಯರೆಲ್ಲರೂ ಆಧಾರ ಕಾರ್ಡ ಹಾಗೂ ಪಡಿತರ ಚೀಟಿಗೆ ಹೆಬ್ಬಟ್ಟು ಹಾಕಲು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡುವಂತಾಗಿದೆ.

ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಲಿ
ಜಿಲ್ಲಾಧಿಕಾರಿಗಳು ಆಧಾರ ಮತ್ತು ಮತ್ತು ಪಡಿತರಕ್ಕೆ ಸಂಬಂಧಿಸಿದ ಅಧಿಕಾರಿಗಳ ತುರ್ತು ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕಿದೆ. ಆಧಾರ ಮತ್ತು ಪಡಿತರ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಹೇಗೆ ಸೇವೆ ಸಲ್ಲಿಸಲು ಸಾಧ್ಯವಿದೆ ಎಂಬುದನ್ನು ಪರಾಮರ್ಶಿಸಿ ಸಿಬ್ಬಂದಿಯ ಕೊರತೆ, ಅನುಭವಿಕರನ್ನು ಈ ಕಾರ್ಯಕ್ಕೆ ತೊಡಗಿಸಲು ಅಗತ್ಯ ಕ್ರಮ ಕೈಗೊಂಡಲ್ಲಿ ಬಡಕುಟುಂಬಕ್ಕೆ ಆಗುತ್ತಿರುವ ಅಲೆದಾಟ, ಸಮಸ್ಯೆಗೆ ಉತ್ತರ ಕಂಡುಕೊಳ್ಳಲಿ.
-ಡಾ.ಮಹಾಂತೇಶ ಸಜ್ಜನ
ಜಿಲ್ಲಾ ಪ್ರಧಾನ ಕಾರ್ಯದರ್ಶಿ,
ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ.
೧೦ ಸಾವಿರ ಅರ್ಜಿ ಕಾದಿವೆ
ಹೊಸ ಆಧಾರ ಕಾರ್ಡಗಾಗಿ, ತಿದ್ದುಪಡಿಗಾಗಿ ನಮ್ಮಲ್ಲಿ ೧೦ ಸಾವಿರ ಅರ್ಜಿಗಳು ಪರಿಶೀಲನೆಗೆ ಕಾದಿವೆ. ಸಿಬ್ಬಂದಿಯ ಕೊರತೆ ಹಾಗೂ ಸರ್ವರ್ ಪ್ರಾಬ್ಲಮ್‌ದಿಂದಾಗಿ ಅರ್ಜಿ ಸಲ್ಲಿಸಿದ ಸರ್ವರೂ ಅಲೆದಾಡುವಂತಾಗಿದೆ. ನಮ್ಮಲ್ಲಿದ್ದ ಕೆಲವು ಸಿಬ್ಬಂದಿ ನಿಧನದಿಂದ, ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಭರ್ತಿಯಾಗಿಲ್ಲ ಇದ್ದ ಸಿಬ್ಬಂದಿಯಲ್ಲೆÃ ಒತ್ತಡದಲ್ಲಿಯೇ ಕೆಲಸ ಮಾಡಿಸಲಾಗುತ್ತಿದೆ, ಈ ಕುರಿತು ಸಿಬ್ಬಂದಿ ಒದಗಿಸುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
-ಆನಂದ ಹೊದ್ಲೂರ
ಪೊಸ್ಟ್ ಮಾಸ್ಟರ್
ಪ್ರಧಾನ ಅಂಚೆ ಕಚೇರಿ, ಗದಗ.

loading...