ಬಡವರ ಪ್ರಗತಿಯೇ ಬ್ಯಾಂಕಿನ ಮುಖ್ಯಗುರಿ

0
56

ಹಾರೂಗೇರಿ: ಭಾರತ ಬ್ಯಾಂಕು ಸಮಾಜ ಸೇವೆಯ ಸಂಕಲ್ಫದ ಫಲವಾಗಿದ್ಧು, ಬಡವರ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಬದುಕನ್ನು ಮೀಸಲಿಡುವ ಮೂಲಕ ಆರ್ಥಿಕವಾಗಿ ಹಿಂದೂಳಿದ ಬಡವರ ಪ್ರಗತಿಯೇ ಭಾರತ ಬ್ಯಾಂಕಿನ ಮುಖ್ಯ ಗುರಿಯಾಗಿದೆ ಎಂದು ಭಾರತ ಬಾಂಕಿನ ಅಧ್ಯಕ್ಷ್ಯ ಈರಣ್ಣಗೌಡ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಭಾರತ ಕೋ.ಆಫ್ ಕ್ರೇಡಿಟ್ ಸೊಸೈಟಿಯ ಸಭಾಭವನದಲ್ಲಿ ಜರುಗಿದ ಬ್ಯಾಂಕಿನ 15ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷ್ಯತೆ ವಹಿಸಿ ಮಾತನಾಡಿದ ಅವರು ಜನರಿಂದ ಜನರಿಗೊಸ್ಕರ ಸ್ಥಾಪಿತಗೊಂಡ ಭಾರತ ಬ್ಯಾಂಕ್ ಹಾರೂಗೇರಿ ಸುತ್ತಲಿನ ಅನೇಕ ಗ್ರಾಮಗಳ ವ್ಯಾಪಾರಸ್ಥರು, ಕೂಲಿಕಾರ್ಮಿಕರು ಬಡವರು ಹಾಗೂ ನಿರುದ್ಯೋಗಿ ಮತ್ತು ನೊಂದವರ ನೋವಿನ ದ್ವನಿಯಾಗಿ ಪ್ರಜ್ವಲಿಸುತ್ತಿದೆ, ಅಲ್ಲದೇ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಜನರು ಗ್ರಾಹಕರ ಜೊತೆ ಅವಿನಾಭಾವ ಸಂಭಂಧದಿಂದ ಇಂದು ಬ್ಯಾಂಕಿನ ಪ್ರಗತಿ ಸಾಧ್ಯವಾಗಿದೆ ಎಂದು ಈರಣ್ಣಗೌಡ ಮಲಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಕ್ಷತಾ ಪಾಟೀಲ, ಸೀಮಾ ಬೆಳಗಲಿ, ಸ್ನೇಹಾ ಗುಡೋಡಗಿ, ಶೃತಿ ತೇರದಾಳ, ಶಿವಾನಂದ ಶೇಗುಣಸಿ, ಜ್ಯೋತಿ ತೇರದಾಳ, ಬಸವರಾಜ ನೇಮಗೌಡ, ಶ್ರೀದೇವಿ ಪಾಟೀಲ, ಶಾರುಖಾನ ಸನದಿ ಹಾಗೂ ಅಕ್ಷತಾ ಶೆಟ್ಟರ ಅವರನ್ನು ಭಾಂಕಿನ ಹಿರಿಯ ಮಾರ್ಗದರ್ಶಕರಾದ ಮಲಗೌಡ ಪಾಟೀಲ ಅವರು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಸಾಧಕರ ಸನ್ಮಾನ: ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕøತ ಅಶೋಕ ಕವಲಗುಡ್ಡ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿ ಪುರಸ್ಕøತ ಎಂ.ಕೆ ಪತ್ತಾರ ಮತ್ತು ಎಸ್,ಕೆ ಕಮ್ಮಾರ ಅವರನ್ನು ಸನ್ಮಾನಿಸಲಾಯಿತು.
ದೂರದರ್ಶನ ಕಲಾವಿಕ ಬಸವರಾಜ ಉಮರಾಣಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಯಾಂಕಿನ ಉಪಾಧ್ಯಕ್ಷ್ಯ ಪ್ರವೀಣ ಶಹಾ, ನಿರ್ದೇಶಕರಾದ ಸುರೇಶ ಅರಕೇರಿ, ಪರಗೌಡ ಪಾಟೀಲ, ಸುನೀಲ ಪಾಟೀಲ, ಮಹಾವೀರ ರಾಮತೀರ್ಥ, ವೀರಭದ್ರ ಖಡಕಬಾವಿ, ಅಲಗೌಡ ಆಸಂಗಿ, ಅಪ್ಪಣ್ಣಾ ಕುಂಬಾರ, ಕರೆಪ್ಪಾ ಪೂಜೇರಿ, ಮಹಾಂತೇಶ ತಳವಾರ, ಕಲ್ಫನಾ ಸದಲಗಿ, ಜಯಶ್ರೀ ಇಂಚಲಕರಂಜಿ, ಆರ್.ಎಂ ಪಾಟೀಲ, ರವೀಂದ್ರ ಪಾಟೀಲ, ಸಹದೇವ ಅರಕೇರಿ, ಹಣಮಂತ ಕುರಿ, ಸುರೇಶ ಸಾರವಾಡ, ಹಣಮಂತ ಅಥಣಿ, ಶ್ರೀಧರ ಗುಡ್ಢದ, ಶಂಕರ ಕಾಂಬಳೆ, ಚಿದಾನಂದ ಮಾಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ಧರು.

loading...