ಬಡ ಮಕ್ಕಳು ಆಂಗ್ಲ ಮಾದ್ಯಮದಲ್ಲಿ ವ್ಯಾಸಂಗ ಮಾಡುವ ಕನಸು ನನಸಾಗಬೇಕು: ಶಾಸಕ ಶಿವರಾಮ

0
25
 

ಮುಂಡಗೋಡ: ಸಮಾಜದ ಕಟ್ಟ ಕಡೆಯ ಬಡ ಮಕ್ಕಳು ಸಹ ಆಂಗ್ಲ ಮಾದ್ಯಮದಲ್ಲಿ ವ್ಯಾಸಂಗ ಮಾಡುವ ಕನಸು ನನಸಾಗಬೇಕೆಂಬ ಉದ್ದೆÃಶದಿಂದ ಸರ್ಕಾರ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ತಾಲೂಕಿನ ಮಳಗಿ ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟಿಸಿ ಮಾತನಾಡಿದರು. ಮುಂಡಗೋಡ ತಾಲೂಕಿನ ಮಳಗಿ ಗ್ರಾಮ ಶಿಕ್ಷಣ ಕ್ರೆÃತ್ರದಲ್ಲಿ ಹಬ್ಬವನ್ನ ಆಚರಿಸಬೇಕು ಎಂಬುವುದು ನಮ್ಮ ಗುರಿಯಾಗಿದೆ. ಎಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿದರೆ ಉಪಯೋಗವಾಗುÀತ್ತದೆ ಎಂಬುವುದನ್ನು ಅರಿತು ಆಗ್ಲ ಮಾದ್ಯಮ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯಲು ಮಳಗಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ.

ಸಾಕಷ್ಟು ಸಂಖ್ಯೆಯ ಮಕ್ಕಳಿಗೆ ಪ್ರವೇಶ ಪಡೆಯಲು ಅವಕಾಶ ಬೇಕಿದೆ. ಪ್ರಾರಂಭದಲ್ಲಿ ಇಂತಿಷ್ಟು ಮಕ್ಕಳಿಗೆ ಮಾತ್ರ ಪ್ರವೇಶ ಪಡೆಯಲು ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಪ್ರವೇಶ ಸಂಖ್ಯೆಯನ್ನು ವಿಸ್ತರಿಸಲಾಗುವುದು.
೨೧ನೇ ಶತಮಾನ ಮಕ್ಕಳು ತಮ್ಮ ಯೋಗ್ಯತೆ ಹಾಗೂ ಸಾಮರ್ಥ್ಯದ ಆದಾರದ ಮೇಲೆ ಜೀವನ ರೂಪಿಸಿಕೊಳ್ಳಬೇಕಾದ ಶತಮಾನವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂಬುವುದು ವಿಶ್ವ ಮಟ್ಟದ ಮಾರುಕಟ್ಟೆಯಾಗಿದೆ. ಹಾಗಾಗಿ ಗುಣಮಟ್ಟ ಶಿಕ್ಷಣವಿದ್ದರೆ ಮಾತ್ರ ವಿಶ್ವಮಟ್ಟದ ಮಾರುಕಟ್ಟೆಯಲ್ಲಿ ನಮಗೆ ಬೆಲೆ ಸಿಗುತ್ತದೆ. ತಾವು ಗಳಿಸುವ ಅಂಕಗಳ ಆದರಿಸಿ ಅವಕಾಶಗಳು ಸಿಗುತ್ತವೆ. ಕಠೀಣ ಪರಿಶ್ರಮ ಇಲ್ಲದೆ ಯಾವುದೇ ಕ್ಷೆÃತ್ರದಲ್ಲಿಯು ಏನನ್ನು ಸಾದಿಸಲಾಗುವುದಿಲ್ಲ ಎಂದ ಅವರು, ಶಿಕ್ಷಣದ ಜೊತೆಗೆ ನಡತೆ ಸಂಸ್ಕಾರ ಕೂಡ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು

ಚುನಾವಣೆ ಬರುತ್ತದೆ ಹೋಗುತ್ತದೆ. ಸೋಲು ಗೆಲುವು ಸಾಮಾನ್ಯ ಆದರೆ ಗೆದ್ದಾಗಲೆಲ್ಲ ಸಮಾಜದ ಏಳ್ಗೆಯ ಕೆಲಸವನ್ನು ಮಾಡಬೇಕು. ಜನಪ್ರತಿನಿಧಿಗಳಾದವರಾರು ಮಾಲಿಕರಲ್ಲ. ಬದಲಾಗಿ ಜನರ ಸೇವಕರು. ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದೆÃನೆ. ಮಾತನಾಡುವುದು ತುಂಬ ಸುಲಭ ಯಾವುದೇ ಒಂದು ಯೋಜನೆ ಸಮರ್ಪಕ ಕಾರ್ಯಗತವಾಗುವುದು ಎಷ್ಟು ಕಷ್ಟವಿದೆ ಎಂಬುವುದನ್ನು ಅರಿತುಕೊಳ್ಳಬೇಕು. ಕೆಲಸ ಮಾಡುವವರಿಗೆ ಮಾತ್ರ ಬೇಡಿಕೆ ಕೂಡ ಹೆಚ್ಚಿರುತ್ತವೆ. ಕೆಲಸ ಮಾಡದವರ ಹತ್ತಿರ ಯಾರು ಹೋಗುವುದೇ ಇಲ್ಲ. ಕೆಲಸ ಮಾಡದವರು ಯಾವತ್ತಾದರೂ ಒಂದು ಕೆಲಸ ಮಾಡಿದರೆ ಮಹಾತ್ಮರಾಗಿಬಿಡುತ್ತಾರೆ. ಆದರೆ ೨೪ ಘಂಟೆ ನಿರಂತರ ಜನರ ನಡುವೆ ಇದ್ದು ಕೆಲಸ ಮಾಡುವ ನಾವು ಎಲ್ಲವನ್ನು ಅನಿಸಿಕೊಂಡು ಸಹಿಸಿಕೊಳ್ಳಬೇಕಾಗುತ್ತದೆ ಎಂದರು.
ರೇಖಾ ಅಂಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸರಕಾರಿ ಪ್ರಥಮ ಧರ್ಜೆ ಕಾಲೇಜು ನಿರ್ಮಾಣ ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳ ಬಗ್ಗೆ ಪ್ರಸಾಪ್ಥಿಸಿದರು. ಜಯಮ್ಮ ಕೃಷ್ಣ ಹಿರೇಹಳ್ಳಿ, ರವಿಗೌಡ ಪಾಟೀಲ, ದ್ರಾಕ್ಷಾಯಿಣಿ ಸುರಗಿಮಠ, ಕೃಷ್ಣಮೂರ್ತಿ ನಾಡಿಗ್, ಪ್ರಕಾಶ ನಾಯ್ಕ, ದುರೀಣ ಕೃಷ್ಣ ಹಿರೇಹಳ್ಳಿ, ವಿ.ಎಸ್.ನಾಯ್ಕ, ಆರ್.ಗಿ ನಾಯ್ಕ, ಪ್ರಮೋದ ದವಳೆ, ಎಚ್.ಎಮ್. ನಾಯ್ಕ, ಹನ್ಮಂತಪ್ಪ ನಿಟ್ಟೂರ ಮುಂತಾದವರಿದ್ದರು. ಪ್ರಾಂಶುಪಾಲ ನರೇಂದ್ರ ನಾಯ್ಕ ಸ್ವಾಗತಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗ್ವತ ನಿರೂಪಿಸಿ ವಂದಿಸಿದರು.

ಇದಕ್ಕೂ ಮುನ್ನ ಬೆಡಸಗಾಂವ ಗ್ರಾ.ಪಂ ವ್ಯಾಪ್ತಿಯ ಕರಕಲಜಡ್ಡಿ ಗ್ರಾಮ ರಸ್ತೆ ಶಿಲಾನ್ಯಾಸ, ಮಳಗಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾದ ಅಂಗನವಾಡಿ ಹಾಗೂ ಪಶು ಚಿಕಿತ್ಸಾಲಯ ಕೇಂದ್ರ ಕಟ್ಟಡವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.

loading...